ಚರಣಜಿತ್ ಸಿಂಗದ ಚನ್ನಿ ರಾಜೀನಾಮೆ ನೀಡಬೇಕೆಂದು ಶಾಸಕ ಎಲ್.ನಾಗೇಂದ್ರ ಆಗ್ರಹಿಸಿದರು.

ನಕಲಿ‌ ರೈತರು ಪ್ರಧಾನಿಯವರ ಕಾರ್ಯಕ್ರಮ ಅಡ್ಡಿ ಪಡಿಸಿದ್ದಾರೆ‌. ವಾಹನಗಳನ್ನು ನಿಲುಗಡೆ ಮಾಡಿ ಪ್ರಯಾಣಕ್ಕೆ ಅಡಚಣೆ ಮಾಡಲಾಗಿದೆ. ಇದರ ಉದ್ದೇಶ ತನಿಖೆಯಿಂದ ತಿಳಿದು ಬರಬೇಕಿದೆ‌.

ರಾಜ್ಯ ಸರಕಾರ ವಜಾಗೊಳಿಸಬೇಕು. ಅಲ್ಲಿನ ಮುಖ್ಯಮಂತ್ರಿ ಚರಣಜಿತ್ ಸಿಂಗದ ಚನ್ನಿ ರಾಜೀನಾಮೆ ನೀಡಬೇಕೆಂದು ಶಾಸಕ ಎಲ್.ನಾಗೇಂದ್ರ ಆಗ್ರಹಿಸಿದರು.

ಪ್ರಧಾನಿಯ ವಿಶೇಷ ರಕ್ಷಣಾ ಪಡೆ, ರಾಜ್ಯ ಪೋಲಿಸರನ್ನು ದಾಟಿ ಪ್ರತಿಭಟನೆಕಾರರು ಪ್ರಧಾನಿ ಪ್ರಯಾಣಿಸುವ ದಾರಿಗೆ ಹೇಗೆ ಬಂದರೂ ಎಂಬುದಕ್ಕೆ ಅಲ್ಲಿನ ಕಾಂಗ್ರೆಸ್ ಉತ್ತರಿಸಬೇಕು.

ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ್ ಗಾಂಧಿ ಅವರಿಗೆ ಎಸ್ಪಿಜಿ ಗೆ ತೆಗದಾಗ ಬೊಬ್ಬೆ ಹೊಡೆದ ಕಾಂಗ್ರೆಸ್ ನವರು ಈಗ ಮಾತನಾಡಿ.

ಮೂರು ಕಟ್ಟಡ ಘೋಷಣೆ.
ಬಾಬು ಜಗಜೀವನ್ ರಾಮ್ ಕಟ್ಟಡ, ವಾಲ್ಮೀಕಿ ಭವನ ಮತ್ತು ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಘೋಷಣೆ ಮಾಡಿತ್ತು. ಅಂಬೇಡ್ಕರ್ ಭವನಕ್ಕೆ 18 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕಿತ್ತು. ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನುದಾನ ಬಿಡುಗಡೆಯಾಗದೇ ಕಾಮಗಾರಿ ಕುಂಟಿತವಾಗಿತ್ತು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬಿ.ಶ್ರೀರಾಮಲು ಅವರು ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಆಗಿನ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಕ್ಕೆ ಬೇಕಿರುವ 14.5 ಕೋಟಿ ರೂ. ಬಿಡುಗಡೆ ಮಾಡಿಸಿದ್ದಾರೆ. ನೆನ್ನೆ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ನಗರ ವಕ್ತಾರ ಮೋಹನ್ ಮಾತನಾಡಿ, ನಾವು ಈಗಾಗಲೇ ದೇಶದ ಎರಡು ಪ್ರಧಾನಿಗಳನ್ನು ಕಳೆದುಕೊಂಡಿದ್ದೇವೆ.

ಕೇಂದ್ರದ ಗುಪ್ತಚರ ಇಲಾಖೆಯನ್ನು ರಾಜ್ಯ ಸರಕಾರ ದಿಕ್ಕು ತಪ್ಪಿಸಿದೆ. ಇದು ರಾಜ್ಯ ಸರಕಾರದ ವೈಪಲ್ಯ.
ದೇಶದಲ್ಲಿ ಅಭದ್ರತೆ ಸೃಷ್ಟಿಸುವ ಉದ್ದೇಶದಿಂದ ಈ ರೀತಿ ಕಾಂಗ್ರೆಸ್ ಮಾಡುತ್ತಿದೆ.

ಜನರ ಜೀವ ಮುಖ್ಯವೇ ಪಾದಯಾತ್ರೆ ಮುಖ್ಯನೋ.
ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ.
ನಿಮ್ಮ ಸರಕಾರವೇ ಅಧಿಕಾರದಲ್ಲಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೀ, ಡಿ.ಕೆ.ಶಿವಕುಮಾರ್ ಅವರು ನೀರಾವರಿ ಸಚಿವರಾಗಿದ್ದರು. ಆಗ ನೀವೇನೂ ಮಾಡಿದ್ದೀರ?.
ಬೆಂಗಳೂರು ಮತ್ತು ಕನಕಪುರದ ಸಮಸ್ಯೆ, ಇಡೀ ರಾಜ್ಯದ ಸಮಸ್ಯೆಯೇ ಎಂದು ಪ್ರಶ್ನಿಸಿದರು. ಕ್ಷಲಕ್ಲ ಕಾರಣಕ್ಕೆ ಪಾದಯಾತ್ರೆ ನಡೆಸಬೇಡಿ. ಮೇಕೆದಾಟು ಯೋಜನೆಯನ್ನು ರಾಜ್ಯ ಸರಕಾರ ಅನುಷ್ಟಾನಗೊಳಿಸದೇ, ಇದಕ್ಕಾಗಿ ಕೇಂದ್ರ ಅನುದಾನ ನೀಡಲಿದೆ.
ಚುನಾವಣಾ ಗಿಮಿಕ್ ಗಾಗಿ ಪಾದಯಾತ್ರೆ ಮಾಡಬೇಡಿ, ಕೊರೊನಾ ಮುಕ್ತವಾದ ಬಳಿಕ ಪಾದಯಾತ್ರೆ ನಡೆಸಿ, ಈಗ ಪಾದಯಾತ್ರೆ ನಡೆಸಿ ಜನರ ಜಿವದೊಂದಿಗೆ ಚೆಲ್ಲಾಟ ಆಡಬೇಡಿ. ಪಾದಯಾತ್ರೆ ಕೈ ಬಿಡಿ ಎಂದು ಮನವಿ ಮಾಡಿದರು.