
ಬೆಂಗಳೂರು: ನನ್ನ ಪತಿ ತೀರಿಕೊಂಡು ಮೂರು ತಿಂಗಳು ಕಳೆದಿಲ್ಲ. ಆಗಲೇ ಪತಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗಿದೆ. ಈ ಕುರಿತು ಇಂದ್ರಜಿತ್ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಲಿ ಎಂದು ಚಿರು ಪತ್ನಿ ಮೇಘನಾ ರಾಜ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದ ಬೆನ್ನಲ್ಲೇ ಇಂದ್ರಜಿತ್ ಕ್ಷಮೆಯಾಚಿಸಿದ್ದಾರೆ.
ಮೇಘನಾ ರಾಜ್ ಪತ್ರ ಬರೆದು ನೋವು ವ್ಯಕ್ತಪಡಿಸಿದ್ದಾರೆ. ಅವರ ತಂದೆ-ತಾಯಿ ನನ್ನನ್ನ ಎತ್ತಿ ಆಡಿಸಿದ್ದಾರೆ. ಚಿರಂಜೀವಿ ಸರ್ಜಾ ನನಗೆ ಗೆಳೆಯನಂತೆ. ಅವರ ಆಕಸ್ಮಿಕ ಸಾವು ನಾನು ನನಗೂ ನೋವು ತಂದಿತ್ತು. ಆ ನೋವಿನಲ್ಲೇ ಪೋಸ್ಟ್ ಮಾರ್ಟಂ ಮಾಡಬಹುದಿತ್ತೆಂದು ಹೇಳಿದ್ದೆ. ಆ ಮಾತಿನಿಂದ ಅವರಿಗೆ ನೋವಾಗಿದೆ. ಈ ಮುಂಚೆಯೇ ನನ್ನ ಮಾತನ್ನು ವಾಪಸ್ ತೆಗೆದುಕೊಂಡು, ವಿಷಾದ ವ್ಯಕ್ತಪಡಿಸುತ್ತೇನೆಂದು ಹೇಳಿದ್ದೆ ಎಂದರು.
ಈಗಲೂ ನಾನು ಎಲ್ಲರ ಮುಂದೆ ಕ್ಷಮೆ ಕೇಳ್ತೇನೆ. ಕ್ಷಮೆ ಕೇಳುವುದರಿಂದದ ಯಾರೂ ಸಹ ಚಿಕ್ಕವರಾಗುವುದಿಲ್ಲ. ಕ್ಷಮೆಯನ್ನೂ ಕೇಳ್ತೀನಿ, ವಿಷಾದವನ್ನು ವ್ಯಕ್ತಪಡಿಸ್ತೇನೆ. ಚಿರಜಿಂವಿಗೂ ಹಾಗೂ ಡ್ರಗ್ ಮಾಫಿಯಾಗೂ ಸಂಭದವಿದೆ ಎಂದು ನಾನು ಹೇಳಿಲ್ಲ ಎಂದು ಇಂದ್ರಜೀತ್ ಸ್ಪಷ್ಟನೆ ನೀಡಿ ಕ್ಷಮೆ ಕೋರಿದರು.