ವರದಿ: ಇರ್ಫಾನ್ ಯಳಂದೂರು
ಅಂಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದುವರೆಗೆ ಗ್ರಾಮ ಪಂಚಾಯಿತಿ ವತಿಯಿಂದ ಒಟ್ಟು 142 ಕಾಮಗಾರಿಗಳು ನಡೆದಿದೆ ಎಂದು ಗ್ರಾಮ ಪಂಚಾಯಿತಿ ಪಿಡಿಓ ಬಸವಣ್ಣ ಮಾಹಿತಿ ನೀಡಿದರು.
ಅವರು ಅಂಬಳೆ ಗ್ರಾಮದ ಹಾಲಿನ ಡೈರಿ ಸಭಾಂಗಣದಲ್ಲಿ ನಡೆದ ಎರಡನೇ ಹಂತದ ಸಾಮಾಜಿಕ ಪರಿಶೋಧನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೊರೋನಾ ಸಮಯದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಕೆರೆ ಹೂಳನ್ನು ತೆಗೆಸಲಾಗಿದೆ. ಮತ್ತು ಬಡ ಕುಟುಂಬಗಳಿಗೆ ಈ ಸಮಯದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಪಂಚಾಯತಿ ವತಿಯಿಂದ ಮಾಡುತ್ತಿರುವ ಕೆಲಸಗಳನ್ನು ಪದೇಪದೇ ಮಾಡಿ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ. ಆದ್ದರಿಂದ ಹೊಸ ಕೆಲಸಗಳಿಗೆ ಹೆಚ್ಚು ಆದ್ಯತೆ ನೀಡಿ ಸಾರ್ವಜನಿಕರ ಸ್ವತ್ತನ್ನು ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದರು.
ತಾಲೂಕು ಸಂಯೋಜಕ ನಾರಾಯಣ ಮಾತನಾಡಿ ಗ್ರಾಮ ಪಂಚಾಯಿತಿ ವತಿಯಿಂದ ಒಟ್ಟು 142 ಕಾಮಗಾರಿಗಳನ್ನು ಮಾಡಲಾಗಿದೆ. ತೋಟಗಾರಿಕಾ ಇಲಾಖೆ ವತಿಯಿಂದ 9, ಅರಣ್ಯ ಇಲಾಖೆಯಿಂದ 2, ರೇಷ್ಮೆ ಇಲಾಖೆಯಿಂದ ಒಂದು ಮತ್ತು ಕೃಷಿ ಇಲಾಖೆಯಿಂದ 17 ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕೃಷಿ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಕಾಮಗಾರಿಯ 3,60,000 ರೂಪಾಯಿಗಳನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ದನಾಯಕ, ವೈ. ಕೆ. ಮೊಳೆ ಶಿವರಾಮು , ರೇವಣ್ಣ, ಸಿ ಆರ್ ಪಿ ತೇಜಸ್ವಿನಿ, ರೇಷ್ಮೆ ಇಲಾಖೆ ನಾಗರಾಜು, ಅರಣ್ಯ ಇಲಾಖೆ ಲಕ್ಷ್ಮಣ, ಸಾಮಾಜಿಕ ಲೆಕ್ಕ ಪರಿಶೋಧನ ತಪಾಸಣೆಯ ಮಂಜು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.