ಮೈಸೂರು 24: ಚಲುವಾಂಬ ಮಕ್ಕಳ ಆಸ್ಪತ್ರೆಗೆ ಎರಡನೇ ಬಾರಿ ಇನ್ಫೋಸಿಸ್ ಸಂಸ್ಥೆ ವತಿಯಿಂದ 2.0 ಲಕ್ಷ ರೂ ವೆಚ್ಚದಲ್ಲಿ ವಿವಿಧ ಬಗೆಯ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕೊರೋನಾ ಮೂರನೆ ಅಲೆ ಮಕ್ಕಳ ಮೇಲೆ ಪರಿಣಾ ಭೀರುವ ಭೀತಿ ಹಿನ್ನಲೆಯಲ್ಲಿ ಮಕ್ಕಳ ಉಪಯುಕ್ತ ಚಿಕಿತ್ಸೆಗಾಗಿ ಕಳೆದ ಮಾಚ್ ತಿಂಗಳಿನಲ್ಲಿ ಸುಮಾರು 7.5 ಲಕ್ಷ ರೂ. ವೆಚ್ಚದಲ್ಲಿ ವೆಂಟಿಲೇಟರ್, ಆಕ್ಸಿಜನ್ ಕಂಟೈನರ್ ಗಳನ್ನು ಕೊಡುಗೆಯಾಗಿ ನೀಡಿದ್ದ ಇನ್ಫೋಸಿಸ್ ಸಂಸ್ಥೆ ಶನಿವಾರ ಆಸ್ಪತ್ರೆ ಆವರಣದಲ್ಲಿ ಎರಡನೇ ಬಾರಿಗೆ ಸುಮಾರು 2.0 ಲಕ್ಷ ರೂ. ವೆಚ್ಚದ ಉತ್ತಮ ಗುಣಮಟ್ಟದ ಇನ್‍ಫ್ಯೂಜನ್ ಪಂಪ್ ಮತ್ತು ಸಿರಂಜ್ ಪಂಪ್‍ಗಳನ್ನು ಚಲುವಾಂಬ ಆಸ್ಪತ್ರೆ ಅಧೀಕ್ಷಕಿ ಡಾ.ಸುಧಾ ರುದ್ರಪ್ಪ ಅವರಿಗೆ ನೀಡಲಾಯಿತು.
ಇದೇ ವೇಳೆ ಆರ್.ಎಂ.ಓ ಡಾ.ರಾಜೇಂದ್ರ ಕುಮಾರ್, ಇನ್ಫೋಸಿಸ್ ಸಂಸ್ಥೆಯ ರಾಘವೇಂದ್ರ ಉಡುಪ, ರವಿ, ಅನಂತರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.