24-08-24 ಶನಿವಾರ ಮಂಟೇಸ್ವಾಮಿ ರಾಷ್ಟ್ರೀಯ ವಿಚಾರ ಸಂಕಿರಣ

ಮೈಸೂರು: ಬೋಧಿವೃಕ್ಷ ಪ್ರತಿಷ್ಠಾನ ಫಾರ್ ಡೆವಲಪ್ ಮೆಂಟ್, ಕರ್ನಾಟ ಜಾನಪದ ಅಕಾಡೆಮಿ, ಮೈಸೂರು ವಿವಿ ಸಮಾಜ ಕಾರ್ಯ ವಿಭಾಗ ಮತ್ತು ಆಕಾಶವಾಣಿ ಮೈಸೂರು ಸಹಯೋಗದಲ್ಲಿ ಪರಂಜ್ಯೋತಿ ಮಂಟೇಸ್ವಾಮಿ ಒಂದು ಮರುದರ್ಶನ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆ. ೨೪ರಂದು ಮಾನಸಗಂಗೋತ್ರಿಯ ವಿಜ್ಞಾನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 9:30 ರಿಂದ 10:30 ರವರೆಗೆ ಮಂಟೇಸ್ವಾಮಿ ಕಾವ್ಯ ಗಾಯನ ಹಳೇಪುರ ಮಾದಶೆಟ್ಟಿ ತಂಡದಿಂದ, ೧೦.೩೦ಕ್ಕೆ ಕಪ್ಪಡಿ ಕ್ಷೇತ್ರದ ಮಠಾಧಿಪತಿ ಎಂ.ಎಲ್.ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ಮತ್ತು ಕೊಡೇಕಲ್ಲು ಬಸವ ಪೀಠಾಧಿಪತಿ ವೃಷಭೇಂದ್ರ ಅಪ್ಪನವರು ಸಾನಿಧ್ಯ ವಹಿಸಲಿದ್ದು, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸಮಾರಂಭ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಧರೆಯ ತಂದವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಆಕಾಶವಾಣಿ ಮೈಸೂರು ನಿಲಯದ ಮುಖ್ಯಸ್ಥ ಉಮೇಶ್ ಎಸ್.ಎಸ್, ಸಾಮಾಜಿಕ‍ ಹೋರಾಟಗಾರ ಅಹಿಂದ ಜವರಪ್ಪ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಚಿಂತಕ‍ ಡಾ. ಮಹಾದೇವ ಶಂಕನಪುರ ಪುಸ್ತಕ ಕುರಿತು ಮಾತನಾಡಲಿದ್ದಾರೆ. ಬೋಧಿ ಪ್ರಕಾಶನದ ಅಧ್ಯಕ್ಷ ಸತೀಶ್ ಚಂದ್ರ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಡಾ. ಉಮೇಶ್, ಡಾ.ಮೈಸೂರು ಗುರುರಾಜ್ ಭಾಗವಹಿಸಲಿದ್ದು, ಕವಿ ಎಚ್.ಎಸ್. ಶಿವಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮಧ್ಯಾಹ್ನ ೧೨.೩೦ರ ಗೋಷ್ಠಿ ೧ರಲ್ಲಿ ಯುವ ವಿದ್ವಾಂಸ ಡಾ.ಕುಪ್ನಳ್ಳಿ ಎಂ.ಭೈರಪ್ಪ ವಿಶ್ವಾತ್ಮಕ ದೇಸೀಕಥನವಾಗಿ ಮಂಟೇಸ್ವಾಮಿ ಮಹಾಕಾವ್ಯ ವಿಷಯ ಮಂಡಿಸಲಿದ್ದಾರೆ. ಪ್ರಾಧ್ಯಾಪಕ ಪ್ರೊ.ವೆಂಕಟೇಶ್ ಇಂದ್ವಾಡಿ ಅವರು ಮಂಟೇಸ್ವಾಮಿ ಪರಂಪರೆ ಪೂರ್ವ ಪೀಠಿಕೆ ವಿಷಯ ಮಂಡಿಸಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಗೋಷ್ಠಿ 2ರಲ್ಲಿ ಮಂಟೇಸ್ವಾಮಿ ಕ್ಷೇತ್ರದ ಸಂಶೋಧನಾತ್ಮಕ ನೆಲೆಗಳು ಸಾಹಿತಿ ಪಿ.ನಾಗರತ್ನ, ಮಂಟೇಸ್ವಾಮಿ: ಕೊಡೇಕಲ್ಲು ಪರಂಪರೆ ಜತೆಗಿನ ಒಡನಾಟ ಕುರಿತು ಡಾ.ಮಹಾದೇವ ಶಂಕನಪುರ ಮಾತನಾಡಲಿದ್ದಾರೆ. ಸಂಜೆ 4:30ರಿಂದ 5:30 ರವರೆಗೆ ಆಯ್ಕೆ ಮಾಡಲಾದ ಪ್ರಬಂಧಗಳ ಮಂಡನೆ. ಸಂಜೆ 5:30ಕ್ಕೆ ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಸಮಾರೋಪ ಭಾಷಣ‍ ಮಾಡಲಿದ್ದಾರೆ.