25 ಸಾವಿರ ಕ್ಯಾಮರಾರಿಪೇರಿಮಾಡಿದ ಸಾಧಕ: ಕ್ಯಾಮರಾಗಳ ಅನನ್ಯ ತಂತ್ರಜ್ಞ ಕೆ.ಯು.ವರ್ಗೀಸ್

ಮೂರು ದಶಕಗಳ ಕಾಯಕ,  ದಣಿವರಿಯದ ನಾಯಕ

ಮೈಸೂರು: ಧ್ಯಾನಸ್ಥ ಸ್ಥಿತಿಯಲ್ಲಿ ಕ್ಯಾಮರಾ ರಿಪೇರಿಯಲ್ಲಿ  ನಿರತರಾಗಿದ್ದ ಕೆ.ಯು.ವರ್ಗೀಸ್, ಹಳೆಯ ನೆನಪುಗಳಿಗೆ ಜಾರುತ್ತಿದ್ದಂತೆಯೇ ಕಣ್ಣಾಲಿಗಳು ತೇವಗೊಳ್ಳುತ್ತಿದ್ದವು. ಕ್ಯಾಮರಾಗಳ ಕುರಿತು ಅವರ ಮಾತು ಬರೀ ಮಾತಾಗಿರಲಿಲ್ಲ. ಅದು ಬದುಕು. ಮೂರು ದಶಕಗಳ ಕ್ಯಾಮರಾಗಳ ನಂಟು ಅಲ್ಬಂ ವೀಕ್ಷಿಸಿದಂತಿತ್ತು.

ವಿಶ್ವ ಛಾಯಾಗ್ರಹಣ ದಿನದ ನಿಮಿತ್ತ ಪ್ರಜಾಸತ್ಯ ದಿನಪತ್ರಿಕೆಗೆವಿಶೇಷಸಂದರ್ಶನ ನೀಡಿದಅವರು,ಕ್ಯಾಮರಾಮತ್ತು ಛಾಯಾಗ್ರಹಣದ ಕಲಾತ್ಮಕ ಅನುಭವವನ್ನು ತೆರೆದಿಟ್ಟರು.ಫೋಟೋಗ್ರಫಿ ಆಕರ್ಷಣೆಗೆ ಒಳಗಾದ ಅವರುಕ್ಯಾಮರಾಗೀಳಿಗೆತುತ್ತಾದ್ದದನ್ನು ವಿವರಿಸಿದರು. 25 ಸಾವಿರ ಕ್ಯಾಮರಾಗಳರಿಪೇರಿಮಾಡಿರುವುದಾಗಿ ಹೆಮ್ಮೆಯಿಂದ ನುಡಿದರು.

ಮೂಲತಃ ಪಾಲಿಬೆಟ್ಟದವರಾದವರ್ಗೀಸ್, ಎಸ್ಎಸ್ಎಲ್ಸಿ ಓದುವಾಗಲೇಫೋಟೋಗ್ರಫಿಗೆಆಕರ್ಷಿತರಾದರು. ಮೈಸೂರಿನಲ್ಲಿಉನ್ನತ ಶಿಕ್ಷಣ ಪಡೆದರು. ಅವರ ಆಸಕ್ತಿಗುರುತಿಸಿದಹ್ವಾರ್ಡಿಕ್ ಚರ್ಚಿನ ಪಾದ್ರಿ ಹ್ಯಾರಿ ಜಾನ್ 4 ಸಾವಿರ ಸಾಲ ಕೊಡಿಸಿಕ್ಯಾಮರಾಖರೀದಿಸಲು ನೆರವಾದರು.

ಫೋಟೋಕ್ಲಿಕ್ಕಿಸುತ್ತಖುಷಿಪಡುತ್ತಿದ್ದ ವರ್ಗೀಸ್ ಅವರಿಗೆಕ್ಯಾಮರಾಬದುಕಿಗೆಮಹತ್ವದ ತಿರುವುಕೊಟ್ಟಿತು.ಕ್ಯಾಮರಾರಿಪೇರಿಕಷ್ಟವಾಗಿದ್ದ ಆ ಕಾಲದಲ್ಲಿ ತಾವೇರಿಪೇರಿಗೆಮುಂದಾಗಿ ಯಶಸ್ವಿಯಾದರು. ಕ್ಯಾಮರಾರಿಪೇರಿಯನ್ನೇವೃತ್ತಿಯಾಗಿ ಸ್ವೀಕರಿಸಿದರು. 1995 ರಿಂದ ಆರಂಭ ನಿಲ್ಲದ ಕಾಯಕ, ವರ್ಗೀಸ್ ದಣಿವರಿಯದ ನಾಯಕ.

ಅರಸುರಸ್ತೆಯಲ್ಲಿಮಳಿಗೆ ಆರಂಭಿಸಿದ ವರ್ಗೀಸ್ ಬಿಡುವಿಲ್ಲದಂತೆ ದುಡಿದರು. ತಮ್ಮ ನಾವೀನ್ಯತೆಮೂಲಕಕರ್ನಾಟಕಮಾತ್ರವಲ್ಲದೇ ದೇಶದಲ್ಲಿಯೂಛಾಯಾಗ್ರಾಹಕರಮೆಚ್ಚಿನತಂತ್ರಜ್ಞರಾದರು. ವಿದೇಶಿಗರಕ್ಯಾಮರಾರಿಪೇರಿಮಾಡಿಮೆಚ್ಚುಗೆ ಪಡೆದರು. ಯಾವ ಕ್ಯಾಮರಾವಾದರೂರಿಪೇರಿಮಾಡಿಸೈ ಅನ್ನಿಸಿಕೊಂಡರು. ಇವರ ಕಾಯಕನಿಷ್ಠೆಗೆ ಒಲಿದ ಛಾಯಾಗ್ರಾಹಕರು ಪ್ರೀತಿ ಸುರಿಸಿದರು.

ತಾವುಸಂಗ್ರಹಿಸಿಟ್ಟಿರುವಹಳೆಯಕ್ಯಾಮರಾಗಳನ್ನು ಪರಿಚಯಿಸುತ್ತ ಮಾತಿಗಿಳಿದಅವರು, ಛಾಯಾಗ್ರಾಹಕರು ಪ್ರಸ್ತುತಟೆಕ್ನಾಲಜಿ ಹಿಂದೆಓಡುತ್ತಿದ್ದಾರೆ. ಒಳ್ಳೆಯಚಿತ್ರಕ್ಲಿಕ್ಕಿಸಿಲು ಬೇಕಾದ ನಾವೀನ್ಯತೆಬಗ್ಗೆ ತಿಳಿಯುವ ವ್ಯವಧಾನ ಕಡಿಮೆಯಾಗುತ್ತಿದೆ. ಹಿಂದೆಕೌಶಲದಮೇಲೆ ನಂಬಿಕೆಯಿತ್ತು. ಈಗ ಕ್ಯಾಮರಾದಮೇಲೆ ನಂಬಿಕೆ ಜಾಸ್ತಿಯಾಗಿದೆಎಂದರುವರ್ಗೀಸ್.

1 ಲಕ್ಷ ಫೋಟೋಕ್ಲಿಕ್ಕಿಸಿದರೆ 20 ಸಾವಿರ ಫೋಟೋಬಳಸುತ್ತಾರೆ. ಸುಮ್ಮನೆ ಕ್ಲಿಕ್ಕಿಸುತ್ತಿದ್ದರೆಕ್ಯಾಮರಾದಆಯಸ್ಸುಕಡಿಮೆಯಾಗುತ್ತದೆ. ಡಿಜಿಟಲ್ ಕ್ಯಾಮರಾಚಿಂತೆ ದೂರಮಾಡಿದೆ. 24 ಗಂಟೆ ಫೋಟೋತೆಗೆದು 24 ಗಂಟೆ ಲ್ಯಾಪ್ಟಾಪ್ ಮುಂದೆಕೂರುತ್ತಿದ್ದಾರೆ.

ರೋಲ್ ಕ್ಯಾಮರಾದಲ್ಲಿಕುತೂಹಲಇರುತ್ತಿತ್ತು. ಒಂದು ಫೋಟೋಕ್ಲಿಕ್ಕಿಸಲುತಯಾರಿ ನಡೆಯುತ್ತಿತ್ತು. ಹಲವು ಬಾರಿ ಯೋಚಿಸುತ್ತಿದ್ದರು. ಜತೆಗೆಅನುಭವ ಬಳಸಿ ಕ್ಲಿಕ್ ಮಾಡುತ್ತಿದ್ದರು. ಸುಂದರ ಫೋಟೋಹೊರಬರುತ್ತಿತ್ತು.

ಪ್ರತಿ 6 ತಿಂಗಳಿಗೊಮ್ಮೆ ಮಾರುಕಟ್ಟೆಗೆ ನಾವೀನ್ಯಕ್ಯಾಮರಾಗಳುಬರುತ್ತಿವೆ. ಅವುಗಳಖರೀದಿಗಿರುವಉತ್ಸುಕತೆ ಫೋಟೋಕ್ಲಿಕ್ಕಿಸಲು ಬೇಕಾದ ಪ್ರಾವೀಣ್ಯತೆಬಗ್ಗೆ ತಿಳಿಯುತ್ತಿಲ್ಲ. ಫೋಟೊ ಫ್ರೇಮ್ನಲ್ಲಿ ಕ್ಲಿಕ್ಕಿಸಿದವನ ಕಲಾತ್ಮಕತೆ ಕಾಣಬೇಕುಎಂದರು.

ಕ್ಯಾಮರಾಗಳರಿಪೇರಿಜತೆಗೆ ಫೋಟೋಗ್ರಾಫರ್ಗಳಿಗೆ ತಿಳಿವಳಿಕೆಕೊಡುತ್ತಿರುವವರ್ಗೀಸ್ಅವರು, ಮದುವೆಮನೆಯಲ್ಲಿಮದುಮಗಳತಾಯಿ ಕಣ್ಣೀರು, ತಂದೆ ದುಃಖ ಕಾಣಬೇಕು. ಪ್ರತಿ ಫೋಟೋದಲ್ಲೂ ವಿಭಿನ್ನತೆ ಇರಬೇಕುಎಂದುಮಾರ್ಗದರ್ಶನಮಾಡುವೆಎಂದರು. 

ಫೋಟೋಗ್ರಫಿ ಕಲೆಯೂಹೌದು. ವೃತ್ತಿಯೂಹೌದು. ವಿಶಾಲವಾದ ಕ್ಷೇತ್ರ. ಶುಭಸಮಾರಂಭಗಳುಮಾತ್ರವಲ್ಲದೇ, ಜಾಹೀರಾತು, ಪ್ರವಾಸೋದ್ಯಮದಲ್ಲೂಬದುಕುಕಟ್ಟಿಕೊಳ್ಳಲುಸಾಧ್ಯವಿದೆ. ಕೆಲಸದಲ್ಲಿ ಪರಿಣಿತತೋರಿದರೆ ಯಶಸ್ವಿಯಾಗಬಹುದುಎಂದುಕಿರಿಯಕಲಾವಿದರಿಗೆಸಲಹೆ ನೀಡಿದರು.

ಕೊರೊನಾದಿಂದಾಗಿ ಭರವಸೆಕಳೆದುಕೊಳ್ಳಬಾರದು

ಕೊರೊನಾದಿಂದಾಗಿ ಫೋಟೋಗ್ರಾಫರ್ ಸ್ಮೈಲ್ ಪ್ಲೀಸ್ ಎನ್ನುವುದು ನಿಂತಿದೆ. ಕಾರ್ಯಕ್ರಮಗಳುಸಿಗುತ್ತಿಲ್ಲ. ಹಾಗಂತ ಫೋಟೋಗ್ರಾಫರ್ಗಳು ಭರವಸೆಕಳೆದುಕೊಳ್ಳಬೇಕಿಲ್ಲ. ಹೊಸ ದಿನಗಳುಬರಲಿವೆಎಂಬಆಶಾಭಾವನೆಇಟ್ಟುಕೊಳ್ಳಬೇಕು. ಚೈನಾದಿಂದ ಬಿಡಿ ಭಾಗಗಳುಬರದಿರುವುದುತಮಗೂತೊಂದರೆಯಾಗಿದೆಎಂದರುವರ್ಗೀಸ್.

ಮಕ್ಕಳಿಗೆಕ್ಯಾಮರಾಗಳ ಹೆಸರು

ವರ್ಗೀಸ್ ಅವರ ಕ್ಯಾಮರಾಗಳಮೇಲಿನ ಪ್ರೀತಿ ವರ್ಣಿಸಲಾಗದು. ಮೊದಲನೇಮಗ ನಿಕಾನ್, ಎರಡನೇಮಗಕೆನಾನ್. ಇವರ ಕಾರ್ಯಕ್ಕೆ ಬೆನ್ನಲುಬಾಗಿ ನಿಂತಿರುವ ಪತ್ನಿ ಬಿನಾ ಹೆಸರನ್ನು ಕ್ಯಾಮರಾಅಂಗಡಿಗೆ ನಾಮಕಾರಣ ಮಾಡಿದ್ದಾರೆ.  ಬಿನಾಅವರುಕೂಡಕ್ಯಾಮರಾರಿಪೇರಿಯಲ್ಲಿ ನಿಪುಣರು.

Leave a Reply

Your email address will not be published. Required fields are marked *