3/8/1947 ಇದು ನನ್ನ ಶಾಲೆಯ ದಾಖಲೆ. ಇದು ತಪ್ಪಾಗಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ

3/8/1947 ಇದು ನನ್ನ ಶಾಲೆಯ ದಾಖಲೆ. ಇದು ತಪ್ಪಾಗಿ 12/8/1947 ಅಂತ ಆಗಿದೆ ಎಂದು ತನ್ನ ಹುಟ್ಟಿದ ದಿನಾಂಕದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನಗೆ ಚಟಾಕಿ ಹಾರಿಸಿದ್ದಾರೆ.

ತಮ್ಮ ಹುಟ್ಟು ಹಬ್ಬದ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, 1957 ರಲ್ಲಿ ಐದನೇ ಕ್ಲಾಸಿಗೆ ಸೇರ್ಕೊಂಡೆ. ಮೇಷ್ಟ್ರು ಮಾಡಿದ ಎಡವಟ್ಟಿನಿಂದ ದಿನಾಂಕ ತಪ್ಪಾಗಿದೆ. ನಾನು ಎಂದಿಗೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ನಾನು ಹುಟ್ಟಿದ ದಿನಾಂಕ ನಮ್ಮ ಅಪ್ಪ-ಅಮ್ಮ ನನ್ನ ಮೇಷ್ಟ್ರಿಗೂ ಗೊತ್ತಿಲ್ಲ.

ನಾನು ಮೈಸೂರಿನಲ್ಲಿ ಇದ್ದ ಕಾರಣ ಅಭಿಮಾನಿಗಳು ಕಾರ್ಯಕರ್ತರು ಶುಭಾಶಯ ತಿಳಿಸೋಕೆ ಪ್ರೀತಿಯಿಂದ ಬಂದಿದ್ದಾರೆ.

ರಾಜಪ್ಪ ಮೇಷ್ಟ್ರು ನಮ್ಮಪ್ಪನಿಗೆ ಹುಟ್ಟಿದ ದಿನಾಂಕ ಕೇಳಿದ್ದಾರೆ. ಆ ವೇಳೆ ನನಗೆ ಗೊತ್ತಿಲ್ಲ ಎಂದು ನಮ್ಮಪ್ಪ ಹೇಳಿದ ಕೂಡಲೇ ಮೇಷ್ಟ್ರು ಅವರ ಇಷ್ಟಬಂದ ಹಾಗೆ ಬರೆದುಕೊಂಡಿದ್ದಾರೆ. ಆ ಬಗ್ಗೆ ನನಗೂ ಸರಿಯಾದ ಮಾಹಿತಿ ಇಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹುಟ್ಟಿದ ದಿನಾಂಕದ ಬಗ್ಗೆ ನಗೆ ಚಟಾಕಿ ಹಾರಿಸಿದ್ದಾರೆ.

Leave a Reply

Your email address will not be published. Required fields are marked *