30=7=2021 ದಿನ ಭವಿಷ್ಯ

ಮೇಷ ರಾಶಿ

ಅತ್ಯಂತ ಆಪ್ತರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ನೀವು ನಿಮ್ಮ ಕಾರ್ಯಗಳನ್ನು ನೀವೇ ಮಾಡಲು ಶಕ್ತರಾಗಿ ಇನ್ನೊಬ್ಬರ ಮೇಲೆ ಅವಲಂಬಿತವಾಗುವುದು ಸರಿಯಲ್ಲ. ಕುಟುಂಬದೊಡನೆ ಗೃಹಾಲಂಕಾರಕ್ಕೆ ನೀವು ಶ್ರಮಪಡಲಿದ್ದೀರಿ. ಸಂಗಾತಿಯ ಕಾರ್ಯಗಳಿಗೆ ಒಂದು ಸಣ್ಣ ಸಹಾಯ ಪ್ರೇಮ ತರಿಸುತ್ತದೆ. ಸಂಜೆಯ ವಾತಾವರಣ ರೋಮಾಂಚನ ಭರಿತವಾಗಿ ಇರಲಿದೆ. ಮಕ್ಕಳನ್ನು ಚಟುವಟಿಕೆ ಶೀಲರನ್ನಾಗಿ ಮಾಡಲು ಪ್ರಯತ್ನ ಪಡಲಿದ್ದೀರಿ.

ವೃಷಭ ರಾಶಿ

ರಾಜಿ ಸಂದಾನಗಳಲ್ಲಿ ಎಚ್ಚರಿಕೆವಹಿಸಿ, ಪಕ್ಷಪಾತಿ ಎಂಬ ಹಣೆಪಟ್ಟಿ ಬೀಳಬಹುದು. ಸಹೋದರ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಗಿರಿ. ವ್ಯವಹಾರದ ನಿಮಿತ್ತ ಪ್ರಯಾಣ ಮಾಡಬೇಕಾದ ಸಂದರ್ಭದವಿದೆ. ಸಂಗಾತಿಯ ಬಯಕೆಗಳಿಗೆ ನೀವು ಸಕಾರಾತ್ಮಕವಾಗಿ ಸ್ಪಂದಿಸುವುದು ಅಗತ್ಯವಿದೆ. ಆರ್ಥಿಕವಾಗಿ ಉತ್ತಮ ಮಟ್ಟದ ವ್ಯವಹಾರಗಳು ಕೈಗೂಡಲಿದೆ. ಆರೋಗ್ಯದ ಕಡೆಗೆ ನಿರ್ಲಕ್ಷ ಸಲ್ಲದು.

ಮಿಥುನ ರಾಶಿ

ಚರ್ಚಾ ಕೂಟಗಳಲ್ಲಿ ನಿಮ್ಮ ವಿತಂಡವಾದ ಗಳಿಂದ ಇರಿಸುಮುರುಸು ಅನುಭವಿಸುವ ಸಾಧ್ಯತೆಯಿದೆ. ಈ ದಿನ ಮಕ್ಕಳ ಕೆಲವು ನಡೆ ನಿಮಗೆ ಬೇಸರ ತರಿಸಬಹುದು. ಕೌಟಂಬಿಕ ವ್ಯಾಜ್ಯಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಸರಿಪಡಿಸಿಕೊಳ್ಳಿ. ಆರ್ಥಿಕ ಸಮಸ್ಯೆಗಳಿಗೆ ಉತ್ತಮ ಮಾರ್ಗಗಳನ್ನು ಯೋಚಿಸಿ. ವ್ಯವಹಾರದಲ್ಲಿ ಹೊಸಪ್ರಯೋಗಗಳನ್ನು ಮಾಡುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಬಹುದಿನದ ಬಾಲ್ಯ ಸ್ನೇಹಿತರ ಆಗಮನದಿಂದ ಸಂತೋಷದ ವಾತಾವರಣ ಕೂಡಿರುತ್ತದೆ. ಮೋಜು ಮಸ್ತಿಗಳಲ್ಲಿ ಹೆಚ್ಚಿನ ಕಾಲಹರಣ ಸರಿಯಲ್ಲ.

ಕರ್ಕಾಟಕ ರಾಶಿ

ಪ್ರತಿಭೆಗೆ ಮುಕ್ತ ಅವಕಾಶ ದೊರೆಯುವುದು ನಿಶ್ಚಿತ. ನಿಮ್ಮ ಕೆಲವು ಬೆಳವಣಿಗೆಗಳನ್ನು ಕಂಡು ಹೊಟ್ಟೆ ಉರಿ ಪಡುವ ಜನ ಬಹಳಷ್ಟು ಇರುವರು ಅವನ್ನೆಲ್ಲ ನಿರ್ಲಕ್ಷಿಸಿ. ಒಬ್ಬರನ್ನು ಮೆಚ್ಚಿಸಲು ಖರ್ಚು ಮಾಡುವ ಪ್ರವೃತ್ತಿ ಸರಿಯಲ್ಲ. ಅನಗತ್ಯ ವಸ್ತುಗಳ ಖರೀದಿಯಿಂದ ನಿಮ್ಮ ಜೇಬು ಖಾಲಿಯಾಗಬಹುದು. ದೊಡ್ಡಮಟ್ಟದ ಯೋಜನೆಗಳಿಗೆ ಬಂಡವಾಳ ಅತ್ಯವಶ್ಯಕ ಅದನ್ನು ಈಗಿನಿಂದಲೇ ಕ್ರೋಡೀಕರಿಸಲು ಪ್ರಯತ್ನಿಸುವುದು ಒಳ್ಳೆಯದು. ಆಕಸ್ಮಿಕ ಧನ ಲಾಭಗಳು ಗೋಚರವಾಗಲಿದೆ.

ಸಿಂಹ ರಾಶಿ

ಭೂ ಸಂಬಂಧಿತ ವ್ಯವಹಾರಗಳು ಉತ್ತಮವಾಗಿ ಕೂಡಿರುತ್ತದೆ. ಕ್ರಯವಿಕ್ರಯ ಗಳಲ್ಲಿ ಲಾಭಾಂಶ ಕಂಡುಬರಲಿದೆ. ಮಧ್ಯವರ್ತಿಗಳಿಗೆ ಹೆಚ್ಚಿನ ಲಾಭ ನಿರೀಕ್ಷಿಸಬಹುದು. ಉತ್ತಮ ವ್ಯಕ್ತಿಗಳಿಂದ ನಿಮಗೆ ಸಹಕಾರ ಮತ್ತು ಯೋಜನೆಯ ವಿಸ್ತೀರ್ಣದಲ್ಲಿ ದಾರಿ ಸಿಗಲಿದೆ. ಕೆಲವು ಕೆಲಸಗಳಲ್ಲಿ ನಿಮ್ಮ ವಿಳಂಬ ಧೋರಣೆ ಸರಿ ಕಂಡುಬರುವುದಿಲ್ಲ. ಕಳೆದುಹೋಗಿರುವ ಹಳೆಯ ವಸ್ತುಗಳು ಸಿಗುವ ಭಾಗ್ಯ ಕಂಡುಬರುತ್ತದೆ. ಉದ್ಯೋಗದಲ್ಲಿ ಹೇರಳ ಅವಕಾಶಗಳು ಲಭಿಸಲಿದೆ.

ಕನ್ಯಾ ರಾಶಿ

ಕೆಲಸದಲ್ಲಿ ಆತುರದ ನಿರ್ಣಯ ಬೇಡ, ಯೋಗ್ಯರ ಸಲಹೆ ಪಡೆಯಲು ಮುಂದಾಗಿ. ನಿಮ್ಮ ಮನಸ್ಥಿತಿ, ಬುದ್ಧಿ ಬಲವನ್ನು ಖರ್ಚು ಮಾಡಿ ಇದರಿಂದ ಯಶಸ್ವಿದಾಯಕ ಪಲಿತಾಂಶ ಕಾಣಲಿದೆ. ಹಣಕಾಸಿನ ವಿಷಯದಲ್ಲಿ ಉತ್ತಮ ಮಟ್ಟದ ಅನುಕೂಲತೆಗಳು ಕಂಡುಬರುತ್ತದೆ. ಗೃಹ ಕಾರ್ಯಗಳು ವ್ಯವಸ್ಥಿತವಾಗಿ ನಡೆಯಲಿದೆ. ಭೂಮಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಜಾಗ್ರತೆ ಇರಲಿ. ಹಿರಿಯರ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.

ತುಲಾ ರಾಶಿ

ಸಮಸ್ಯೆಗಳ ಜಂಜಾಟಗಳು ಹೆಚ್ಚಾಗಬಹುದು ಹಾಗೆಯೇ ಪರಿಹಾರ ಮಾರ್ಗಗಳು ಇಂದು ನಿಮಗೆ ಉತ್ತಮ ಫಲಿತಾಂಶ ದೊರಕಿಸಿಕೊಡುತ್ತದೆ. ಆರೋಗ್ಯದಲ್ಲಿ ಆದಷ್ಟು ಎಚ್ಚರಿಕೆ ಅಗತ್ಯವಿದೆ. ನಿಮ್ಮ ಉನ್ನತ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮುಂದಾಗಿ. ತೋರಿಕೆಯ ಮಾತುಗಳನ್ನು ಆದಷ್ಟು ಕಡಿವಾಣ ಹಾಕಿ. ಕೆಲವು ಚರ್ಚೆಗಳು ವಿವಾದ ಸ್ವರೂಪ ಪಡೆಯಲಿದ್ದು ಎಚ್ಚರಿಕೆಯಿಂದ ಮಾತನಾಡಬೇಕಾಗಿದೆ. ಹಣಕಾಸಿನ ಸ್ಥಿತಿ ಮಧ್ಯಮದಲ್ಲಿ ಕಂಡುಬರುತ್ತದೆ. ಸಾಲಕೊಡುವ ವ್ಯವಹಾರಕ್ಕೆ ಕೈ ಹಾಕದಿರುವುದು ಸೂಕ್ತ.

ವೃಶ್ಚಿಕ ರಾಶಿ

ಬಹುದಿನದಿಂದ ನಡೆಸುತ್ತಿರುವ ಕಾರ್ಯಗಳಿಗೆ ಈ ದಿನ ಉತ್ತಮ ಸ್ಥಾನ, ಸ್ಥಿತಿ, ವೇದಿಕೆ ಸಿಗಲಿದೆ. ಕೆಲಸದಲ್ಲಿನ ಪ್ರಮಾದಗಳನ್ನು ಸರಿಪಡಿಸಿಕೊಳ್ಳುವ ಮನಸ್ಥಿತಿ ಕಂಡುಬರುತ್ತದೆ. ಈ ದಿನ ವಿಶೇಷ ಉಡುಗೊರೆ ಪ್ರಶಂಸೆಗೆ ಪಾತ್ರರಾಗುವಿರಿ. ಸ್ವಾದಿಷ್ಟ ರುಚಿಕರ ಭೋಜನ ವ್ಯವಸ್ಥೆ ನಡೆಯಲಿದೆ. ವ್ಯವಹಾರಗಳಲ್ಲಿ ಉತ್ತಮ ಪಟುತ್ವ ವನ್ನು ತೋರಿಸುತ್ತೀರಿ. ಮನೆ ಕಟ್ಟುವ ಕಾರ್ಯಗಳಿಗೆ ಮೂಹರ್ತ ನಿಗದಿ ಪಡಿಸುವ ಸಾಧ್ಯತೆ ಕಾಣಬಹುದು.

ಧನಸ್ಸು ರಾಶಿ

ವ್ಯವಹಾರ ನಿಮಿತ್ತ ಕಾರ್ಯದಲ್ಲಿ ಮತ್ತೊಬ್ಬರ ಮೇಲೆ ಅವಲಂಬಿತವಾಗುವುದು ಸರಿಯಲ್ಲ. ನಿಮ್ಮ ತಪ್ಪು ಕಲ್ಪನೆಗಳು ದೂರವಾಗಲಿವೆ. ವಿನೂತನ ಕಾರ್ಯ ಶೈಲಿಯಿಂದ ಉತ್ತಮ ಹಾಗೂ ನವೀನ ಉದ್ಯಮದಲ್ಲಿ ಆಸಕ್ತಿ ಬೆಳೆಯಲಿದೆ. ನಿಮ್ಮ ಕೆಲಸದಲ್ಲಿ ಪ್ರಶಂಸೆ ಎಷ್ಟೋ ಅಷ್ಟೇ ಟೀಕೆಗಳು ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳದೆ ನಿಮ್ಮ ಪ್ರಯತ್ನ ಮುಂದುವರೆಸುವುದು ಒಳಿತು.

ಮಕರ ರಾಶಿ

ನಿಮ್ಮ ಪಾಲುದಾರರ ಕೆಲವು ವರ್ತನೆಗಳು ಅನುಮಾನಸ್ಪದ ವಾಗಿರಲಿದೆ. ಉದ್ಯೋಗದಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುವುದು ನಿಶ್ಟಿತ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರಲಿದೆ. ನೀವು ಅಪಾತ್ರರಿಗೆ ದಾನ ಮಾಡುವುದನ್ನು ಮೊದಲು ನಿಲ್ಲಿಸಬೇಕಾದ ವಿಷಯ. ನಿಮ್ಮನ್ನು ದುರುಪಯೋಗಪಡಿಸಿಕೊಳ್ಳುವ ಜನರನ್ನು ಗುರುತಿಸಿ ದೂರವಿಡಿ.

ಕುಂಭ ರಾಶಿ

ಬದುಕಿನಲ್ಲಿ ಆದರ್ಶವನ್ನು ರೂಢಿಸಿಕೊಂಡು, ಹಿರಿಯರ ಮಾತುಗಳನ್ನು ಪಾಲಿಸಲು ಮುಂದಾಗುವಿರಿ. ನಿಮ್ಮ ಮುಂದಿನ ಯೋಜನೆಗಳ ಪರಿಪಕ್ವತೆಗೆ ರಾಜ ಮಾರ್ಗ ಸಿಗುವುದು ನಿಶ್ಟಿತ. ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ, ಅದರ ಬಗ್ಗೆ ಮುತುವರ್ಜಿ ವಹಿಸುವುದು ಸೂಕ್ತ. ನಿಮ್ಮ ಬುದ್ಧಿ ಮಾತುಗಳು ಕೇಳುವಷ್ಟು ವ್ಯವಧಾನ ಇಲ್ಲದಿರುವ ಜನಕ್ಕೆ ಸುಮ್ಮನಿದ್ದು ಬಿಡುವುದು ಒಳ್ಳೆಯದು. ಹಣಕಾಸಿನ ಸ್ಥಿತಿಯಲ್ಲಿ ಬಾಕಿ ವಸೂಲಿಗೆ ಹರಸಾಹಸಪಡುತ್ತೀರಿ.

ಮೀನ ರಾಶಿ

ಅವಕಾಶಗಳು ಹೆಚ್ಚಾಗಲಿದ್ದು ಸಮಯದ ಅಭಾವ ನಿಮ್ಮನ್ನು ಕಾಡಬಹುದು. ನಿಮ್ಮ ಆಂತರಿಕ ವಿಚಾರಗಳನ್ನು ಯಾರಮುಂದೆಯೂ ಪ್ರಸ್ತಾಪ ಮಾಡದಿರುವುದು ಸೂಕ್ತ. ನವೀನ ಉದ್ಯಮಗಳಿಗೆ ಕಾಯಕಲ್ಪ ದೊರೆಯಲಿದೆ. ಕಡಿಮೆ ಬಂಡವಾಳ ಹಾಕಿ ದೊಡ್ಡ ಮಟ್ಟದ ಲಾಭ ಗಳಿಸುವ ಸಾಧ್ಯತೆಗಳು ಕಾಣಬಹುದು. ಹೊಸ ವ್ಯವಹಾರಗಳಿಂದ ನೀವು ಹೆಚ್ಚಿನ ಪ್ರಶಂಸೆ ಗಳಿಸಲಿದ್ದೀರಿ. ಬಂದು ಬಾಂಧವರಲ್ಲಿ ಮತ್ಸರದ ವಾತಾವರಣ ಮೂಡಿಬರಲಿದೆ. ಸಂಗಾತಿಯೊಡನೆ ಭಿನ್ನಾಭಿಪ್ರಾಯ ಹೆಚ್ಚಾಗಿ ಕಂಡುಬರುತ್ತದೆ. ಸಣ್ಣ ವಿಷಯಗಳನ್ನು ದೊಡ್ಡಮಟ್ಟದ ವಾದ-ವಿವಾದಗಳಿಗೆ ತೆಗೆದುಕೊಂಡುಹೋಗಬೇಡಿ.

ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಜನವಶ, ಮನವಶ, ಧನವಶ ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.

ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.

9686487402

Leave a Reply

Your email address will not be published. Required fields are marked *