ಪಾದಯಾತ್ರೆ ನಾಗರಿಕರ ಸಂವಿಧಾನದತ್ತವಾದ ಹಕ್ಕು.
ರಂದು ಕನಕಪುರದಲ್ಲಿ ನಡೆದ ಶಾಸಕಾಂಗದ ಸಭೆಯಲ್ಲಿ ಮಾನ್ಯ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಹಿರಿಯ ನಾಯಕರ ಸಮ್ಮುಖದಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸಿ , ಪಾದಯಾತ್ರೆಯಲ್ಲಿ ಭಾಗವಹಿಸಲಿರುವ ಪ್ರತಿಯೊಬ್ಬರಿಗೂ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಹೊಣೆಹೊತ್ತು ಪಾದಯಾತ್ರೆಯನ್ನು ಆರಂಭಿಸಲು ಸರ್ವಾನುಮತದಿಂದ ನಿರ್ಣಯ ವನ್ನು ಅಂಗೀಕರಿಸಲಾಗಿದೆ…
ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ 1000 ಮಂದಿ ಒಟ್ಟು ಎಂಟು ಸಾವಿರ ಮಂದಿ ಕೆಪಿಸಿಸಿ ನಿಗದಿ ಮಾಡಿರುವ ದಿನಾಂಕ. 11.01.2022 ಮಂಗಳವಾರ ಬೆಳಗ್ಗೆ 8.30 ಗಂಟೆಗೆ ಕನಕಪುರ ನಗರವನ್ನು ತಲುಪಲಿದ್ದಾರೆ. ಅಲ್ಲಿಂದ ಸುಮಾರು 15 ಕಿಲೋಮೀಟರ್ ಚಿಕ್ಕೇನಹಳ್ಳಿ ಹೊರಗೆ ಪಾದಯಾತ್ರೆಯಲ್ಲಿ ಮೈಸೂರು ಗ್ರಾಮಾಂತರ ವ್ಯಾಪ್ತಿಯ ಕಾಂಗ್ರೆಸ್ ಬಂಧುಗಳು ಹಾಗೂ ಸಾರ್ವಜನಿಕ ಮಿತ್ರರು ಭಾಗವಹಿಸಲಿದ್ದಾರೆ, ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಮಾಡಲಾಗಿದೆ
ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ ಬಿಜೆ ವಿಜಯ್ ಕುಮಾರ್ ತಿಳಿಸಿದ್ದಾರೆ.