ಬೆಂಗಳೂರು: ತುಪ್ಪದ ಬೆಡಗಿ ನಟಿ ರಾಗಿಣಿಯವರ ಎರಡು ವರ್ಷದ ಸಮಾಜಜಮುಖಿ ಕಾರ್ಯಕ್ಕೆ ೨೦೨೧ರ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಅವಾರ್ಡ್ ಸಿಕ್ಕಿದೆ.
ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ರಾಗಿಣಿ ಮಾಡಿಕೊಂಡು ಬಂದಂತಹ ಸಮಾಜಮುಖಿ ಕಾರ್ಯವನ್ನು ಗುರುತಿಸಿದ ಮುಂಬೈ ಮೂಲದ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿಯು ನಟಿ ರಾಗಿಣಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದೆ. ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿಯು ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಅವರ ಮೊಮ್ಮಗನ ನೇತೃತ್ವದ ಸಂಸ್ಥೆಯಾಗಿದೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೇ ಈ ಪ್ರಶಸ್ತಿ ಪಡೆದ ಎಕೈಕಿ ನಟಿಯಾಗಿದ್ದಾರೆ.
ಕೋವಿಡ್‌ನಂತಹ ಸಮಯದಲ್ಲೂ ಸಮಾಜಮುಖಿ ಕೆಲಸಗಳಿಂದ ಗುರುತಿಸಿಕೊಂಡಿದ್ದಾರೆ.
ನಟಿ ರಾಗಿಣಿ ಸಮಾಜಮುಖಿ ಕೆಲಸಗಳಲ್ಲಿ ಮೊದಲಿನಿಂದಲೂ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ, ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ರಾಗಿಣಿಯ ನೆರವಿನ ಹಸ್ತದ ಕಾರ್ಯ ಶ್ಲಾಘನೀಯವಾದದು. ನಿರಾಶ್ರಿತರು, ನಿರ್ಗತಿಕರು,
ಅಸಹಾಯಕರು, ಬಡವರು ಸೇರಿದಂತೆ ಯಾರೆಲ್ಲಾ ಕೊರೊನಾ ಹೊಡೆತಕ್ಕೆ ಸಿಲುಕಿ ಒದ್ದಾಡುತ್ತಿದ್ದರೋ, ಯಾರೆಲ್ಲಾ ಒಪ್ಪೊತ್ತಿನ ಊಟಕ್ಕಿಲ್ಲದೇ ಅಲೆಯುತ್ತಿದ್ದರೋ ಅವರೆಲ್ಲರಿಗೂ ತಮ್ಮ ಶಕ್ತಿ ಮೀರಿ ಸಹಾಯ ಹಸ್ತ ಚಾಚಿದರು. ಹಸಿವು ನೀಗಿಸುವ ಕೆಲಸವನ್ನು ನಿತ್ಯನಿರಂತರವಾಗಿ ಮಾಡಿಕೊಂಡು ಬಂದರು.
ರಾಗಿಣಿಯ ಮಾನವೀಯ ಮುಖ ಹಾಗೂ ಸಮಾಜಮುಖಿ ಕೆಲಸವನ್ನು ಸೂಕ್ಷವಾಗಿ ಅವಲೋಕಿಸಿದ ದಾದಾ ಸಾಹೇಬ್ ಫಾಲ್ಕೆಯವರ ಮೊಮ್ಮಗನ ನೇತೃತ್ವದ ಸಂಸ್ಥೆ ನಟಿ ರಾಗಿಣಿಗೆ `ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಅವಾರ್ಡ್’ ನೀಡಿ ಗೌರವಿಸಿದೆ.