ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿರುವ KRS ಜಲಾಶಯ ಬಿರುಕು ವಿಚಾರವಾಗಿ ಇಂದು ಸಂಸದೆ ಸುಮಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ KRS ಜಲಾಶಯದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಆಗಮಿಸಿದ್ದರು.
KRS ಜಲಾಶಯದ ಮುಖ್ಯ ದ್ವಾರದ ಮೂಲಕ ಅಣೆಕಟ್ಟೆ ಪರಿಶೀಲನೆಗೆ ತೆರಳಲಿದ್ದ ಸಂಸದೆ ಸುಮಲತಾ
ಸ್ಥಳ ಪರಿಶೀಲನೆ ಬಳಿಕ ಡ್ಯಾಂ ಸುರಕ್ಷತೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು.