ಚಾಮರಾಜನಗರ : ಕಾಮುಕನೊಬ್ಬ ಮಾತ್ರೆ ತರಲು ಹೋಗಿದ್ದ ಬಾಲಕಿಯನ್ನು ಮನೆಗೆ ಬಿಡುವುದಾಗಿ ಪುಸಲಾಯಿಸಿ ಅತ್ಯಾಚಾರ ಎಸಗಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಸತೀಶ್ ಎಂಬಾತನೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕ. ಬಾಲಕಿ ಜು.25ರಂದು ತನ್ನ ಅಜ್ಜಿಗೆ ತಲೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಾತ್ರೆ ತರಲೆಂದು ರಾತ್ರಿ 8.30ರ ಸಮಯದಲ್ಲಿ ಅಂಗಡಿಗೆ ತೆರಳಿದ್ದು, ಇದನ್ನು ನೋಡಿದ ಸತೀಶ್ ತಾನೇ ಮನೆಗೆ ಕರೆದೊಯ್ದು ಬಿಡುವುದಾಗಿ ಹೇಳಿ ಪುಸಲಾಯಿಸಿ ಕರೆದೊಯ್ದು ಪೊದೆ ಬಳಿಯಲ್ಲಿ ಅತ್ಯಾಚಾರ ಎಸಗಿದ್ದಾನೆ.

ಘಟನೆಯ ನಂತರ ಬಾಲಕಿ ವಿಷಯವನ್ನು ಹೆತ್ತವರಿಗೆ ತಿಳಿಸಿದ್ದಾಳೆ. ಈ ಬಗ್ಗೆ ವಿಷಯ ತಿಳಿದು ಎಸ್ಪಿ ದಿವ್ಯಾ ಸಾರಾ ಥಾಮಸ್ ಹಾಗೂ ಅಪರ ಜಿಲ್ಲಾವರಿಷ್ಠಾಧಿಕಾರಿ ಸುಂದರ್ ರಾಜ್, ಡಿವೈಎಸ್ ಸಿ ನಾಗರಾಜು ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದು, ಕಾಮುಕ ಸತೀಶನನ್ನು ಬಂಧಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ.