ಕಫ್ರ್ಯೂ ಹಿನ್ನೆಲೆ; ಆ.14 ಮತ್ತು 15 ರಂದು ಅರಮನೆ, ಮೃಗಾಲಯ ಮತ್ತು ಕಾರಂಜಿಕೆರೆ ಪ್ರವೇಶಕ್ಕೆ ನಿರ್ಬಂಧ


ಮೈಸೂರು :- ಕೋವಿಡ್ -19 ಹಿನ್ನೆಲೆ ಆಗಸ್ಟ್ 14 ಮತ್ತು 15ರ ಶನಿವಾರ ಮತ್ತು ಭಾನುವಾರ ಮೈಸೂರು ಅರಮನೆಯನ್ನು ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧಗೊಳಿಸಲಾಗಿದ್ದು,

ಸಾರ್ವಜನಿಕರು ಹಾಗೂ ಅರಮನೆಯ ಪ್ರವಾಸಿಗರು ಸಹಕರಿಸಬೇಕೆಂದು ಮೈಸೂರು ಅರಮನೆಯ ಮಂಡಳಿಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೈಸೂರು ಮೃಗಾಲಯ ಮತ್ತು ಕಾರಂಜಿಕೆರೆ ಪ್ರಾಕೃತಿಕ ಉದ್ಯಾನವನವನ್ನು ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧಗೊಳಿಸಲಾಗಿದ್ದು,

ಭಾನುವಾರದ ಬದಲಿಗೆ ಆಗಸ್ಟ್ 17ರ ಮಂಗಳವಾರದಂದು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು ಎಂದು ಪ್ರಕಟಣೆ ತಿಳಿಸಿದೆ

Leave a Reply

Your email address will not be published. Required fields are marked *