ವರದಿ: ಬಸವರಾಜು ಎಸ್.ಹಂಗಳ
ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನ ಮಂಗಲ ಗ್ರಾಮದ ಬಳಿ ಇರುವ ವಿಂಡ್ ಫ್ಲವರ್ ಖಾಸಗಿ ರೆಸಾರ್ಟ್ ಒಳಗೆ ಮಂಗಳವಾರ ಬೆಳಗಿನ ಜಾವ 4 ಗಂಟೆ ಸಮಯ ಚಿರತೆ ನುಗ್ಗಿದೆ.
ವಿಂಡ್ ಫ್ಲವರ್ ಖಾಸಗಿ ರೆಸಾರ್ಟ್ ರಿಸೆಪ್ಸನ್ ಕೌಂಟರ್ ನಲ್ಲಿ ಬಾಗಿಲು ಇಲ್ಲದ ಪರಿಣಾಮ ಚಿರತೆ ಮೆಲ್ಲಗೆ ಒಳ ನುಗಿದ್ದು, ಇದನ್ನು ಕಂಡ ಸಿಬ್ಬಂದಿ ಭಯ ಭೀತರಾಗಿದ್ದಾರೆ. ಈ ದೃಶ್ಯ ರೆಸಾರ್ಟ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ರೆಸಾರ್ಟ್ ಬಂಡೀಪುರ ಕಾಡಂಚಿನಲ್ಲಿ ಇರುವುದರಿಂದ ಒಳಗೆ ಚಿರತೆ ನುಗ್ಗಿದೆ. ಇಂತಹ ಘಟನೆಗಳು ಈ ಭಾಗದಲ್ಲಿ ಸರ್ವೇ ಸಾಮಾನ್ಯವಾಗಿದೆ. ಕೆಲವೊಮ್ಮ ರೆಸಾರ್ಟ್‍ನಲ್ಲಿರುವ ನಾಯಿಗಳನ್ನು ತಿನ್ನಲು ಬರುತ್ತವೆ ಎಂದು ಸ್ಥಳೀಯರಾದ ರವಿಕುಮಾರ್ ತಿಳಿಸಿದರು.