ಮೈಸೂರು: ಚಾಮುಂಡಿ ಬೆಟ್ಟ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾದ ನಡೆದ ಘಟನೆ ಹಸಿರುವಾಗಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಂದು ಅತ್ಯಾಚಾರ ನಡೆದಿದೆ.
ಕ್ರೈಸ್ತಾಶ್ರಮದಲ್ಲಿದ್ದ ವಿದ್ಯಾರ್ಥಿನಿ ಮೇಲೆ ಹಾಡಹಗಲೇ ಅತ್ಯಾವಾರ ನಡೆದಿದೆ.
ಆರ್.ಎಅ್ ನಾಯ್ಡು ನಗರದ ಪ್ರಮುಖ ರಸ್ತೆಯಲ್ಲಿರುವ ಸ್ಟಡಿ ಹೌಸ್ನಲ್ಲಿ
ವಿದ್ಯಾರ್ಥಿನಿ ಒಂಟಿಯಾಗಿದ್ದ ವೇಳೆ
ಸ್ಟಡಿ ಹೌಸ್ ಒಳಪ್ರವೇಶಿಸಿರುವ ಕಾಮುಕನೊಬ್ಬ ಈ ಕೃತ್ಯವೆಸಗಿದ್ದಾನೆಂದು ಹೇಳಲಾಗುತ್ತಿದೆ.
ಸಂತ್ರಸ್ತೆಯನ್ನು
ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹಾಸ್ಟೆಲ್‌ನಲ್ಲಿ
ಆಂಧ್ರ ಪ್ರದೇಶ ಮೂಲದ 7 ಮಂದಿ ಇದ್ದರು.
ಒಂಟಿ ಇದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಲೆತ್ನಿಸಿದ್ದಲ್ಲದೆ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದಿದ್ದು, ಕೈಗೆ ಗಂಭೀರ ಗಾಯಗಳಾಗಿವೆ. ಘಟನೆ ಬಳಿಕ ಕಿರಾತಕ ಎಸ್ಕೇಪ್ ಆಗಿದ್ದಾನೆ.
ಘಟನೆ ನಡೆದ ವೇಳೆ ಉಳಿದ ವಿದ್ಯಾರ್ಥಿಗಳು ತರಗತಿಗೆ ತೆರಳಿದ್ರು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳ ಮತ್ತು ಬೆರಳಚ್ಚು ತಜ್ಜರು ಸ್ಥಳವನ್ನು ಇಂಚಿಂಚು ಜಾಲಾಡಿದ್ದಾರೆ.
ಎನ್.ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.