ಮೈಸೂರು ನಗರದ ಸೌತ್‌ನಲ್ಲಿದ್ದ ಸಂಪ್ರದಾಯಸ್ಥ ಕುಟುಂಬದ ಮೇಷ್ಟç ಮಗ ಸಂಪತ್‌ಕುಮಾರ್. ಪೋಷಕರ ಆಸೆಯಂತೆ ಪದವೀಧರನಾಗುವ ಬದಲು, ದೈವೇಚ್ಚೆಯಂತೆ ಕಲಾಧರನಾಗಿ ‘ವಂಶವೃಕ್ಷ’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಕಾಲದಲ್ಲಿ ಶ್ರೀನಾಥ್, ಲೋಕೇಶ್, ಚಂದ್ರಶೇಖರ್, ರಾಮಕೃಷ್ಣ, ಅಂಬರೀಷ್, ಅನಂತನಾಗ್, ಶಂಕರನಾಗ್ ಮುಂತಾದ ಅನೇಕ ನಟರೂ ಪಾದಾರ್ಪಣೆ ಮಾಡಿದ್ದರು. ಅವರೆಲ್ಲರಿಗೆ ಪೈಪೋಟಿ ನೀಡಿ ಮುನ್ನುಗ್ಗುವುದು ಸುಲಭದ ಮಾತಾಗಿರಲಿಲ್ಲ. ಮೇರುಪರ್ವತಗಳಾದ ರಾಜ್‌ಕುಮಾರ್ ಉದಯಕುಮಾರ್ ಕಲ್ಯಾಣಕುಮಾರ್ ರಾಜೇಶ್ ಗಂಗಾಧರ್ ಅಂಥವರ ಚಿತ್ರಗಳನ್ನು ಎದುರಿಸಬೇಕಾದ ಟಫ್ ದಿನಗಳವು?! ಚಂದನವನವು ಸಮರ್ಥ ಹೀರೋಗಳ ಸಮೃದ್ಧಿಯಿಂದಾಗಿ ತೀವ್ರ ಸ್ಫರ್ಧೆಯಿಂದ ಕೂಡಿತ್ತು. ಅಂಥ ಸುನಾಮಿಯಲ್ಲಿ ಈಜಿ ದಡಸೇರಿ ಉತ್ತಮ ಕಲಾವಿದನಾಗಿ ಬೇರೂರಿದ್ದು ಸಾಮಾನ್ಯದ ಸಾಮರ್ಥ್ಯವಲ್ಲ! ಗಾಡ್‌ಫಾದರ್‌ಪುಟ್ಟಣ್ಣಕಣಗಾಲ್, ಸಿದ್ಧಲಿಂಗಯ್ಯ, ಎಸ್.ವಿ. ರಾಜೇಂದ್ರಸಿಂಗ್‌ಬಾಬು, ಡಿ.ರಾಜೇಂದ್ರಬಾಬು, ದ್ವಾರಕೀಶ್, ಭಾರ್ಗವ, ರವಿ, ಜೋಸೈಮನ್, ಸಾಯಿಪ್ರಕಾಶ್, ಪಿ.ವಾಸು, ವಿಜಯನಂದ್, ಮುಂತಾದ ಅನೇಕ ಅತಿರಥ ಮಹಾರಥರ ಗರಡಿಯಲ್ಲಿ ಪಳಗಿ ಚಂದನವನದ ಮೈಲಿಗಲ್ಲಾದರು. ದಕ್ಷಿಣ ಭಾರತ ಚಿತ್ರರಂಗದ ನಾಯಕ ನಟರಲ್ಲಿ ಅಗ್ರಸ್ಥಾನ ಪಡೆದು ಇತಿಹಾಸ ಸೃಷ್ಟಿಸಿದರು!
ಸ್ಯಾಂಡಲ್‌ವುಡ್ನ ಪ್ರಪ್ರಥಮ ಎಡಗೈ/ಎಡಚ ಸ್ಮಾರ್ಟ್ ಹ್ಯಾಂಡ್ಸಮ್ ಹೀರೋ! ‘ವಿಷ್ಣುವರ್ಧನ’ನಾಗಿ ನಾಮಕರಣಗೊಂಡು ನಟಿಸಿದ ಮೊದಲ ಈಸ್ಟ್ಮನ್‌ಕಲರ್ ಮತ್ತು ಸ್ಲೋಮೋಶನ್ ಫಿಲಂ ನಾಗರಹಾವು! ಡಾ||ರಾಜ್ ನಂತರ ಮೊದಲ ಸ್ಥಾನವನ್ನು 30ವರ್ಷ ಪರ್ಯಂತ ಉಳಿಸಿಕೊಂಡಿದ್ದ ಜನಪ್ರಿಯ ನಟ. ಮೈಸೂರು[ರತ್ನ]ಹುಲಿ ಸಾಹಸಸಿಂಹ ಗೌ||ಡಾಕ್ಟರೇಟ್ ಮುಂತಾದ ಅನೇಕ ಬಿರುದಾಂಕಿತ ನಟ. ಅತಿಹೆಚ್ಚು ರೀಮೇಕ್ ಚಿತ್ರಗಳಲ್ಲಿ ಮತ್ತು ಕನ್ನಡೇತರ [ಹಿಂದಿ,ಮರಾಠಿ,ತೆಲುಗು,ತಮಿಳು, ಮಲೆಯಾಳಂ,ತುಳು,ಕೊAಕಣಿ] ಚಿತ್ರಗಳಲ್ಲಿ ನಟಿಸಿದ ಕನ್ನಡದ ಪ್ರಪ್ರಥಮ ನಾಯಕನಟ! ಒಟ್ಟು 8 ಭಾಷೆಗಳ 222 ಚಿತ್ರಗಳ ಅಭಿನಯ ಭಾರ್ಗವ. ಮೈಸೂರಿನ ಲಕ್ಷ್ಮೀ ಟಾಕೀಸಲ್ಲಿ ವಿಷ್ಣುವಿನ (ಚೊಚ್ಚಲ ತಮಿಳ್ ಫಿಲಂ ‘ಅಲೈಗಳ್’ ಸೇರಿದಂತೆ) ಅತಿಹೆಚ್ಚು ಚಿತ್ರಗಳು ಪ್ರದರ್ಶನ ಕಂಡಿದೆ! ಅತಿಹೆಚ್ಚು ಚಿತ್ರಗಳಲ್ಲಿ ಅತಿಥಿ[ಗೌರವ]ನಟನಾಗಿ ಕಾಣಿಸಿಕೊಂಡ ಪ್ರಥಮ ನಾಯಕನಟ. ಅತಿಹೆಚ್ಚು [59] ಹೀರೋಯಿನ್ ಜತೆ ಅಭಿನಯಿಸಿದ ಪ್ರಥಮ ಹೀರೋ. ಜಿಮ್ಮಿಗಲ್ಲು [ತುತ್ತು ಅನ್ನ ತಿನ್ನೋಕೆ….]ಮೂಲಕ ಹಿನ್ನೆಲೆ ಗಾಯಕರಾದರು. 8 ಖಳನಟರು ಅಭಿನಯಿಸಿದ್ದ ಮೊಟ್ಟಮೊದಲ ಕನ್ನಡಚಿತ್ರ ಸಾಹಸಸಿಂಹ! ವಿಷ್ಣುವರ್ಧನ್-ಸಂಗೀತ ಬಿಜಲಾನಿ ಜೋಡಿಯ ‘ಪೊಲೀಸ್‌ಮತ್ತುದಾದಾ’ ಹಾಗೂ ‘ಇನ್ಸ್ಪೆಕ್ಟರ್‌ಧನುಷ್’ (ಕನ್ನಡ+ಹಿಂದಿ) ಎರಡೂ ಭಾಷೆಗಳಲ್ಲಿ ಏಕ ಕಾಲಕ್ಕೆ ಬಿಡುಗಡೆಗೊಂಡ ಕನ್ನಡ ನಟನ ಪ್ರಥಮ ಚಿತ್ರ! ಖ್ಯಾತ ನಟ-ಗಾಯಕ ರಾಜ್‌ಕುಮಾರ್ ಮತ್ತೊಬ್ಬ ಖ್ಯಾತ ನಟ-ಗಾಯಕನಿಗೆ ಹಿನ್ನೆಲೆ ಗಾಯಕನಾಗಿ [ಧಣಿ ಚಿತ್ರದಲ್ಲಿ ‘ನೀ ಕಂಡ ಆ ಲೋಕ’] ಹಾಡಿದ್ದು ಪ್ರಪಂಚದ ಸಿನಿಮಾ ಚರಿತ್ರೆಯಲ್ಲೇ ಚಿರಸ್ಮರಣೀಯ ದಾಖಲೆ!!
ಭಾರತಿ ನಟಿಸಿದ 100ನೇಚಿತ್ರ ‘ಭಾಗ್ಯಜ್ಯೋತಿ’ ಚಿತ್ರೀಕರಣದ ವೇಳೆ ಆಕೆಯೊಡನೆ ವಿಷ್ಣುವಿನ ವಿವಾಹ! ಈ ಚಿತ್ರದ ‘ದಿವ್ಯಗಗನ ನಿವಾಸಿನಿ’ ಸಂಸ್ಕ್ರತ ಯುಗಳಗೀತೆಗೆ ನಾಯಕ ನಾಯಕಿಯಾಗಿ ಅಭಿನಯಿಸಿದ ಪ್ರಪ್ರಥಮ ತಾರಾದಂಪತಿ! ಭೂತಯ್ಯನ ಮಗ ಅಯ್ಯು ಚಿತ್ರೀಕರಣ ಸಂದರ್ಭದಲ್ಲಿ, ತಂದೆ ನಿಧನ ವಾರ್ತೆ ಕೇಳಿದರೂ ಚಿತ್ರೀಕರಣ ನಿಲ್ಲಿಸದೆ ಮುಂದು ವರೆಸಿದ್ದಾಗ ಚಿತ್ರತಂಡದ ಒತ್ತಾಯಕ್ಕೆ ಮಣಿದು ಪಿತಾಶ್ರೀ ಅಂತ್ಯಕ್ರಿಯೆಗೆ ತೆರಳಿದ ಮಹಾನ್‌ಕಲಾವಿದ! ಬಿಡುವಿನ ವೇಳೆ ಪುಸ್ತಕ ಓದುವ ಹವ್ಯಾಸವಿದ್ದ ಅಪರೂಪದನಟ. ¨ರೋಬ್ಬರಿ 200ಕನ್ನಡ ಚಿತ್ರಗಳಲ್ಲಿ ನಟಿಸಿದ ಪ್ರಪ್ರಥಮ ನಾಯಕನಟ! ಮುತ್ತಿನಹಾರ;-ಮೈನಸ್ 5-10ಡಿಗ್ರಿ ಸೆಲ್ಶಿಯಸ್‌ನ ಹಿಮಾಲಯದ ಪಾಕಿಸ್ತಾನ್-ಇಂಡಿಯ ಬಾರ್ಡರ್‌ನಲ್ಲಿ ಚಿತ್ರೀಕರಿಸಿದ ಚೊಚ್ಚಲ ಕನ್ನಡ ಚಿತ್ರ. ಆ ಸಂದರ್ಭದಲ್ಲಿ ಗಾಯಗೊಂಡು ಅನಾರೋಗ್ಯದ ನೋವು ಅನುಭವಿಸಿದರೂ ನೈಜತೆಗೆ ಒತ್ತು ನೀಡಲು ತಲೆಗೂದಲು ಬೋಳಿಸಿಕೊಂಡು[ವಿಗ್‌ಧರಿಸದೆ] ನಟಿಸಿ ಚಿತ್ರರಂಗವೆ ಅಚ್ಚರಿ ಪಡುವಂತೆ ಮಾಡಿದ ಧೀರ! ತಮ್ಮ 50ನೇ ಹುಟ್ಟುಹಬ್ಬದ ನಂತರ ಸ್ವಯಂ ಇಷ್ಟಪಟ್ಟು ವೈರಾಗ್ಯದೆಡೆಗೆ ಜಾರಿಕೊಂಡ ನಟಶ್ರೇಷ್ಠ! ಆಪ್ತಮಿತ್ರ-ಆಪ್ತರಕ್ಷಕ ಚಿತ್ರಗಳು ಅವರ ಮನಸ್ಸಿನ ಮೇಲೆ ಅಗಾಧ/ಗಂಭೀರ ಪರಿಣಾಮವುಂಟುಮಾಡಿದ್ದವು? ನಿರ್ಲಿಪ್ತತೆಯೆಡೆಗೆ ಒಲವುತೋರಿಸಿ ಆಧ್ಯಾತ್ಮಿಕತೆ ಅ[ಒ]ಪ್ಪಿಕೊಂಡ ಅಸಾಧಾರಣ ನಟ!
ವಿಷ್ಣುವರ್ಧನ್ ಖುದ್ದು ಹೇಳಿದ್ದ ಅವರ:-
ಅಂತಿಮ ಆಸೆ ಮೈಸೂರಿನಲ್ಲಿ ನೆಲೆಸುವುದು, ಮೆಚ್ಚಿನವೃತ್ತಿ ಉಪಾಧ್ಯಾಯವೃತ್ತಿ, ಮೆಚ್ಚಿನಕಾರು ಮರ್ಸಿಡೆಸ್‌ಬೆಂಜ್ ಮೆಚ್ಚಿನ ಗೆಳೆಯ ಅಂಬರೀಶ್, ಮೆಚ್ಚಿನನಿರ್ಮಾಪಕ ದ್ವಾರಕೀಶ್, ಮೆಚ್ಚಿನನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್‌ಬಾಬು, ಮೆಚ್ಚಿನನಟಿ ಕಲ್ಪನಾ, ಮೆಚ್ಚಿನಕ್ರೀಡೆ ಕ್ರಿಕೆಟ್[ತತ್ಪರಿಣಾಮ‘ವಿಷ್ಣುಕಪ್ ಕ್ರಿಕೆಟ್ ಪಂದ್ಯಾವಳಿ’] ಮೆಚ್ಚಿನಫಿûಲಂಸ್ : ಹಿಂದಿಯ ಮದರ್‌ಇಂಡಿಯ, ಕನ್ನಡದ ಸತ್ಯಹರಿಶ್ಚಂದ್ರ, ತೆಲುಗಿನ ಶಂಕರಾಭರಣಮು, ತಮಿಳಿನ ಮರೋಚರಿತ್ರ ಹಾಗೂ ಅವರದ್ದೇ ಚಿತ್ರಗಳಲ್ಲಿ ಹೆಚ್ಚು ಇಷ್ಟವಾದುದು; ಮಲಯಮಾರುತ! ಮೆಚ್ಚಿನ ನಟರು:ರಾಜ್‌ಕಪೂರ್,ದಿಲೀಪ್‌ಕುಮಾರ್,ಮೀನಕುಮಾರಿ,ರೇಖ,ಶಿವಾಜಿಗಣೇಶನ್,ರಜನಿಕಾಂತ್,ಕಮಲಹಾಸನ್,ಡಾ||ರಾಜ್‌ಕುಮಾರ್, ಶಂಕರ್‌ನಾಗ್, ಸುದೀಪ್. “ದುಡಿದ ಹಣದಲ್ಲಿ ಸ್ವಲ್ಪ ಭಾಗ ದಾನ ಮಾಡುವುದರಿಂದ ತೃಪ್ತಿಇದೆ” ಎಂದೂ ಹೇಳಿದ್ದ ಮಹಾನುಭಾವ!
ಡಾ||ರಾಜ್ ಅಭಿಮಾನಿಗಳ ಸಂಘ ಸ್ಥಾಪಿಸಿದ ಶ್ರೀ ಎಂ.ರಾಮೇಗೌಡರೆ ‘ಡಾ||ವಿಷ್ಣು ವರ್ಧನ್ ಅಭಿಮಾನಿಗಳ ಸಂಘ’ ಸ್ಥಾಪಿಸಿದರು. ದತ್ತುಪುತ್ರಿ-ಅಳಿಯನಲ್ಲಿ ನೆಮ್ಮದಿ ಕಂಡು, ಸ್ವಂತ ಮಕ್ಕಳಿಲ್ಲವೆಂಬ ಚಿಂತೆ ಮರೆತ ಹೃದಯಸಿರಿವಂತ! ಎಲ್ಲಾವರ್ಗದ ಎಲ್ಲಾವಯಸ್ಸಿನ ಶ್ರೀಸಾಮಾನ್ಯರೊಡನೆ ಬೆರೆಯುತ್ತಿದ್ದ ಜನನಾಯಕ. ‘ವಿಷ್ಣುವರ್ಧನ್ ಚಾರಿಟಬಲ್ ಟ್ರಸ್ಟ್’ ಮೂಲಕ ರಾಜ್ಯಾದ್ಯಂತ ಅನೇಕ ಸಹಾಯವಾಣಿ ಕೇಂದ್ರಗಳಿವೆ. ಡಾ||ವಿಷ್ಣು ಸೇನಾ ಸಮಿತಿಯೂ ಅಸ್ತಿತ್ವಕ್ಕೆ ಬಂದು ಕನ್ನಡ ಕಲೆ, ಸಾಹಿತ್ಯ, ನಾಟಕ ಹಾಗೂ ಸಂಸ್ಕöÈತಿ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಮಾಡುತ್ತಿದೆ. 30.12.2009ರಂದು ಹೃದಯಾಘಾತದಿಂದ ಮೈಸೂರು ವಿಕ್ರಂ ಆಸ್ಪತ್ರೆಯಲ್ಲಿ ದೈವಾಧೀನರಾದರು. ವಿಷ್ಣುವರ್ಧನ್ ಸ್ವರ್ಗಸ್ಥರಾದಮೇಲೆ 2012ರಲ್ಲಿ ಸುದೀಪ್ ನಟಿಸಿದ “ವಿಷ್ಣುವರ್ಧನ” ಚಿತ್ರ ಯಶಸ್ವಿಯಾಯ್ತು. ಇದರ ನಿರ್ಮಾಪಕರೂ ವಿಷ್ಣು ಮೆಚ್ಚಿದ್ದ ಕುಳ್ಳದ್ವಾರಕೀಶ್! 2016ರಲ್ಲಿ ‘ಗ್ರಾಫಿಕ್ಸ್ ವಿಷ್ಣುವರ್ಧನ್’ ಸೃಷ್ಟಿಸಿ ಮತ್ತೊಂದು ‘ನಾಗರಹಾವು’ ಸಿನಿಮಾ ಬಿಡುಗಡೆ? ಇಂಥಹದ್ದೊAದು ಪ್ರಯತ್ನ-ಪ್ರಯೋಗ ಚಂದನವನದಲ್ಲಿ ನೂತನ ದಾಖಲೆ ನಿರ್ಮಿಸಿತು!
ವಿಷ್ಣುವರ್ಧನ್ ಬಗ್ಗೆ ಗಣ್ಯರ ಚೆನ್ನುಡಿ[ಮುತ್ತು]ಗಳು:-
ಅನಿಲ್‌ಕಪೂರ್; ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಮೇರುನಟ. ಕನ್ನಡದ ‘ಪಲ್ಲವಿ ಅನುಪಲ್ಲವಿ’ ಚಿತ್ರದ ಮೂಲಕ ನಾನು ಪಾದಾರ್ಪಣೆ ಮಾಡಿದ್ದರೂ ವಿಷ್ಣು ಜತೆ ನಟಿಸಬೇಕೆಂಬ ಆಸೆ ಕಡೆಗೂ ಈಡೇರಲೆ ಇಲ್ಲ ಎಂಬುದೆ ನನ್ನ ಕೊರಗು!
ಅಮಿತಾಬ್‌ಬಚ್ಚನ್; ಕನ್ನಡ ಸಿನಿಮಾದ ಹ್ಯಾಂಡ್ಸಮ್ ಅಂಡ್ ಸ್ಮಾರ್ಟ್ ಹೀರೋ ವಿಷ್ಣು. ನಾನು ಅವರನ್ನು ತುಂಬಾ ಮೆಚ್ಚಿಕೊಂಡಿದ್ದೇನೆ.
ಚಿರಂಜೀವಿ; ವಿಷ್ಣುವರ್ಧನ್ ಕನ್ನಡದ ಸೂಪರ್ ಸ್ಟಾರ್ ಮಾತ್ರವಲ್ಲ ಆತನೊಬ್ಬ ಸೂಪರ್ ಹೀರೋ ಕೂಡ ಹೌದು
ಶಿವಾಜಿಪ್ರಭು; ವಿಷ್ಣು ಕರ್ನಾಟಕ ರಾಜ್ಯದ ಮತ್ತು ಕನ್ನಡಿಗರ ಪ್ರತಿನಿಧಿ
ದತ್ತಾತ್ರೇಯ(ದತ್ತಣ್ಣ); ವಿಷ್ಣು 30 ವರ್ಷದಲ್ಲಿ 200 ಸಿನಿಮಾದಲ್ಲಿ ನಟಿಸುವುದು ಸಾಮಾನ್ಯವಲ್ಲ. ಹಗಲಿರುಳು ದುಡಿಯುತ್ತಿದ್ದ ಕಾರಣಕ್ಕಾಗಿ ಅವರು ಜನಮಾನಸದಲ್ಲಿ ಇಂದಿಗೂ ‘ಯಜಮಾನ’ನಾಗಿ ಪ್ರಜ್ವಲಿಸುತ್ತಿದ್ದಾರೆ.
ರಾಜ್‌ಕುಮಾರ್; ಒಳ್ಳೆ ತೊಂಡೆ ಹಣ್ಣಂಥ ಚೆಲುವ. ಯಾವ ಪಾತ್ರವಾದ್ರೂಸರಿ ಮಾಡಬಲ್ಲ. ಅದರಲ್ಲೂ ರಾಮಾಚಾರಿಯಂಥ ರೋಷದ ಪಡ್ಡೆಹುಡುಗನ ಪಾತ್ರವನ್ನ ನನಗಿಂತ ಚೆನ್ನಾಗೇ ಮಾಡುವಂಥ ಕಲೆಗಾರ.
ಎಚ್.ಎಸ್.ವೆಂಕಟೇಶಮೂರ್ತಿ; ವಿಷ್ಣುವರ್ಧನ್ ತಮ್ಮ ನಟನೆಯ ಜತೆಗೇ ಸಾಹಿತ್ಯದ ನಂಟು ಬೆಳೆಸಿಕೊಂಡಿದ್ದ ಪುಸ್ತಕ ಓದುವ ಅಭಿರುಚಿಯುಳ್ಳ ನಟ
ಡಾ||ಯು.ಆರ್. ಅನಂತಮೂರ್ತಿ; ಹೆಚ್ಚು ಸಾಹಿತ್ಯಾಭಿಮಾನಿಯಾದ ವಿಷ್ಣುವಿನಂತಹ ಚಿತ್ರನಟರು ಬಲು ಅಪರೂಪ.
ವಿಷ್ಣುವರ್ಧನ್ ನಟಿಸಿದ ಕನ್ನಡ ಫಿಲಂಸ್
ಕ್ರ.ಸಂ. ಚಿತ್ರ ಕ್ರ.ಸಂ. ಚಿತ್ರ
1 ವಂಶವೃಕ್ಷ/1972
2 ನಾಗರಹಾವು 40 ಭಲೇಹುಡುಗ
3 ಸೀತೆಯಲ್ಲಸಾವಿತ್ರಿ/1973 41 ಮಧುರಸಂಗಮ
4 ಮನೆ ಬೆಳಗಿದ ಸೊಸೆ 42 ಸಿಂಗಾಪುರಲ್ಲಿರಾಜಾಕುಳ್ಳ
5 ಗಂಧದಗುಡಿ[ಅತಿಥಿ ನಟ] 43 ಅಸಾಧ್ಯಅಳಿಯ/1979
6 ಭೂತಯ್ಯನಮಗಅಯ್ಯು 44 ವಿಜಯ್‌ವಿಕ್ರಮ್[ದ್ವಿಪಾತ್ರ]
7 ಪ್ರೊಫೆಸರ್‌ಹುಚ್ಚೂರಾಯ[ಅತಿಥಿ ನಟ] 45 ನಾನಿರುವುದೆನಿನಗಾಗಿ
8 ಅಣ್ಣ ಅತ್ತಿಗೆ 46 ಮಾನಿನಿ
9 ದೇವರ ಗುಡಿ/1975 47 ನೆಂಟರೋಗಂಟುಕಳ್ಳರೋ
10 ಕೂಡಿಬಾಳೋಣ 48 ನನ್ನರೋಷ ನೂರುವರುಷ
11 ಕಳ್ಳಕುಳ್ಳ 49 ರಾಮಪರಶುರಾಮ/1980
12 ಭಾಗ್ಯಜ್ಯೋತಿ 50 ಕಾಳಿಂಗ
13 ನಾಗಕನ್ಯೆ 51 ಹಂತಕನಸಂಚು
14 ಒಂದೇರೂಪಎರಡುಗುಣ 52 ಮಕ್ಕಳಸೈನ್ಯ
15 ದೇವರುಕೊಟ್ಟವರ/1976 53 ಬಿಳಿಗಿರಿಯಬನದಲ್ಲಿ[ಅತಿಥಿನಟ]
16 ಹೊಸಿಲುಮೆಟ್ಟಿದಹೆಣ್ಣು 54 ಸಿಂಹಜೋಡಿ
17 ಮಕ್ಕಳಭಾಗ್ಯ 55 ರಹಸ್ಯರಾತ್ರಿ
18 ಬAಗಾರದಗುಡಿ 56 ಬಂಗಾರದಜಿಂಕೆ
19 ಬಯಸದೆಬಂದಭಾಗ್ಯ/1977 57 ಡ್ರೆವರ್‌ಹನುಮಂತು
20 ಸೊಸೆತಂದಸೌಭಾಗ್ಯ 58 ಮನೆಮನೆಕಥೆ/1981
21 ನಾಗರಹೊಳೆ[ಅತಿಥಿನಟ] 59 ನಾಗಕಾಳಭೈರವ
22 ಚಿನ್ನನಿನ್ನಮುದ್ದಾಡುವೆ 60 ಮಹಾಪ್ರಚಂಡರು
23 ಶ್ರೀಮಂತನಮಗಳು 61 ಗುರುಶಿಷ್ಯರು
24 ಸಹೋದರರಸವಾಲ್ 62 ಸ್ನೇಹಿತರಸವಾಲ್
25 ಶನಿಪ್ರಭಾವ 63 ಅವಳಹೆಜ್ಜೆ
26 ಗಲಾಟೆಸಂಸಾರ 64 ಪ್ರೀತಿಸಿನೋಡು
27 ಕಿಟ್ಟುಪುಟ್ಟು 65 ಪೆದ್ದಗೆದ್ದ/1982[ಅತಿಥಿ ನಟ]
28 ಹೊಂಬಿಸಿಲು 66 ಸಾಹಸಸಿAಹ
29 ಸಂದರ್ಭ/1978 67 ಕಾರ್ಮಿಕಕಳ್ಳನಲ್ಲ
30 ಕಿಲಾಡಿಕಿಟ್ಟು 68 ಊರಿಗೆಉಪಕಾರಿ
31 ವಂಶಜ್ಯೋತಿ 69 ಜಿಮ್ಮೀಗಲ್ಲು[ಹಿನ್ನೆಲೆಗಾಯಕÀ]
32 ಮುಯ್ಯಿಗೆಮುಯ್ಯಿ 70 ಸುವರ್ಣಸೇತುವೆ
33 ಸಿರಿತನಕ್ಕೆ ಸವಾಲ್ 71 ಒಂದೇಗುರಿ
34 ಪ್ರತಿಮಾ 72 ಕಲ್ಲುವೀಣೆನುಡಿಯಿತು
35 ನನ್ನಪ್ರಾಯಶ್ಚಿತ 73 ಸಿಡಿದೆದ್ದಸಹೋದರ/1983
36 ಸ್ನೇಹಸೇಡು 74 ಮುತ್ತದೆಭಾಗ್ಯ
37 ಕಿಲಾಡಿಜೋಡಿ 75 ಗಂಧರ್ವಗಿರಿ
38 ವಸಂತಲಕ್ಷ್ಮಿ 76 ಗಂಡುಗಲಿರಾಮ
39 ಅಮರನಾಥ್[ಅತಿಥಿನಟ]
77 ಚಿನ್ನದಂಥಮಗ/1983 128 ನೀನುನಕ್ಕರೆ ಹಾಲುಸಕ್ಕರೆ
78 ಸಿಂಹಘರ್ಜನೆ 129 ಜಗದೇಕವೀರ/1991
79 ಪ್ರಚAಡಕುಳ್ಳ[ಅತಿಥಿನಟ] 130 ಪೊಲೀಸ್‌ಮತ್ತುದಾದಾ
80 ರುದ್ರನಾಗ/1984 131 ರಾಜಾಧಿರಾಜ/1992
81 ಖೈದಿ 132 ರವಿವರ್ಮ
82 ಬೆಂಕಿಬಿರುಗಾಳಿ 133 ಹರಕೆಯಕುರಿ
83 ಇAದಿನರಾಮಾಯಣ 134 ನನ್ನಶತ್ರು
84 ಬAಧನ 135 ಸಂಘರ್ಷ/1993
85 ಹುಲಿಹೆಜ್ಜೆ 136 ವೈಶಾಖದದಿನಗಳು
86 ಚಾಣಕ್ಯ 137 ನಾನೆಂದೂನಿಮ್ಮವನೆ
87 ಆರಾಧನೆ 138 ರಾಯರುಬಂದರುಮಾವನಮನೆಗೆ
88 ಮದುವೆಮಾಡುತಮಾಷೆನೋಡು 139 ವಿಷ್ಣುವಿಜಯ
89 ಕರ್ತವ್ಯ 140 ಮಣಿಕಂಠನಮಹಿಮೆ
90 ಮಹಾಪುರುಷ/1985 141 ನಿಷ್ಕರ್ಷ/1994
91 ವೀರಾಧಿವೀರ 142 ಟೈಮ್‌ಬಾಂಬ್
92 ನೀಬರೆದಕಾದಂಬರಿ 143 ಕುಂತೀಪುತ್ರ
93 ಮರೆಯದಮಾಣಿಕ್ಯ 144 ಸಾಮ್ರಾಟ್
94 ನನ್ನಪ್ರತಿಜ್ಞೆ 145 ಮಹಾಕ್ಷತ್ರಿಯ
95 ಜೀವನಚಕ್ರ 146 ಹಾಲುಂಡತವರು
96 ನೀತಂದಕಾಣಿಕೆ 147 ಕಿಲಾಡಿಗಳು
97 ಕರ್ಣ/1986 148 ಕೋಣಈದೈತೆ[ಅತಿಥಿನಟ]
98 ಕಥಾನಾಯಕ 149 ಯಮಕಿಂಕರ
99 ಈಜೀವನಿನಗಾಗಿ 150 ಮೋಜುಗಾರಸೊಗಸುಗಾರ
100 ಸತ್ಯಜ್ಯೋತಿ 151 ದೀರ್ಘಸುಮಂಗಲಿ
101 ಕೃಷ್ಣಾನೀಬೇಗನೆಬಾರೋ 152 ಬAಗಾರದಕಳಸ
102 ಮಲಯಮಾರುತ 153 ತುಂಬಿದಮನೆ
103 ಪ್ರೇಮಲೋಕ/1987[ಗೌರವ ನಟ] 154 ಕರುಳಿನಕುಡಿ
104 ಸೌಭಾಗ್ಯಲಕ್ಷ್ಮೀ 155 ಹಿಮಪಾತ
105 ಕರುಣಾಮಯಿ 156 ಅಪ್ಪಾಜಿ
106 ಜಯಸಿಂಹ 157 ಹಲೋಡ್ಯಾಡಿ
107 ಆಸೆಯಬಲೆ 158 ಕರ್ನಾಟಕಸುಪುತ್ರ
108 ಜೀವನಜ್ಯೋತಿ 159 ಧಣಿ
109 ಶುಭಮಿಲನ 160 ಜೀವನದಿ
110 ಸತ್ಯಂ ಶಿವಂ ಸುಂದರಂ 161 ಬಾಳಿನಜ್ಯೋತಿ
111 ಡಿಸೆಂಬರ್31[ಅತಿಥಿ ನಟ] 162 ಮಂಗಳಸೂತ್ರ
112 ಒಲವಿನಆಸರೆ/1988 163 ಎಲ್ಲರಂಥಲ್ಲನನ್ನಗAಡ
113 ನಮ್ಮೂರರಾಜ 164 ಶೃತಿಹಾಕಿದಹೆಜ್ಜೆ
114 ಜನನಾಯಕ 165 ಜನನಿಜನ್ಮಭೂಮಿ
115 ಸುಪ್ರಭಾತ 166 ಲಾಲಿ
116 ಕೃಷ್ಣರುಕ್ಮಿಣಿ 167 ನಿಶ್ಯಬ್ಧ
117 ದಾದಾ 168 ಯಾರೇನೀನುಚೆಲುವೆ
118 ಮಿಥಿಲೆಯಸೀತೆಯರು[ಅತಿಥಿನಟ] 169 ಸಿಂಹದಗುರಿ
119 ಒಂದಾಗಿಬಾಳು 170 ಹೆಂಡ್ತಿಗೆಹೇಳ್ತೀನಿ[ಅತಿಥಿನಟ]
120 ಹೃದಯಗೀತೆ 171 ವೀರಪ್ಪನಾಯಕ
121 ರುದ್ರ 172 ಹಬ್ಬ
122 ದೇವ 173 ಸೂರ್ಯವಂಶ
123 ಡಾಕ್ಟರ್‌ಕೃಷ್ಣ 174 ಪ್ರೇಮೋತ್ಸವ
124 ಶಿವಶಂಕರ್/1990 175 ಸೂರಪ್ಪ
125 ಮುತ್ತಿನಹಾರ 176 ದೀಪಾವಳಿ
126 ಮತ್ತೆಹಾಡಿತುಕೋಗಿಲೆ 177 ನನ್ನಹೆಂಡ್ತಿಚೆನ್ನಾಗಿದ್ದಾಳೆ
127 ಲಯನ್‌ಜಗಪತಿರಾವ್/1991 178 ಯಜಮಾನ
179 ದಿಗ್ಗಜರು 190 ವರ್ಷ
180 ಕೋಟಿಗೊಬ್ಬ 191 ವಿಷ್ಣುಸೇನೆ
181 ಪರ್ವ 192 ನೀನೆಲ್ಲೊನಾನಲ್ಲೆ
182 ಜಮೀನ್ಧಾರ 193 ಸಿರಿವಂತ
183 ಸಿAಹಾದ್ರಿಯಸಿಂಹ 194 ಏಕದAತ
184 ರಾಜಾನರಸಿಂಹ 195 ಮಾತಾಡ್‌ಮಾತಾಡುಮಲ್ಲಿಗೆ
185 ಹೃದಯವಂತ 196 ಈ ಬಂಧನ
186 ಕದಂಬ 197 ನಮ್‌ಯಜಮಾನ್ರು
187 ಆಪ್ತಮಿತ್ರ 198 ಬಳ್ಳಾರಿನಾಗ
188 ಸಾಹುಕಾರ 199 ಸ್ಕೂಲ್‌ಮಾಸ್ಟರ್
189 ಜೇಷ್ಠ 200 ಆಪ್ತರಕ್ಷಕ
ವಿಷ್ಣುವರ್ಧನ್ ಸಾಧನೆ ಪ್ರಶಸ್ತಿ ಪುರಸ್ಕಾರ:- 4 ಬಾರಿ ಫಿಲಂಫೇರ್ ಪ್ರಶಸ್ತಿ ಪಡೆದಿದ್ದರು.
ಇಸವಿ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳು
1972 ವಂಶವೃಕ್ಷ[ನಾಗರಹಾವು ಚಿತ್ರಕ್ಕೆ ಲಭಿಸಲಿಲ್ಲ!]
1974 ಭೂತಯ್ಯನ ಮಗ ಅಯ್ಯು
1984 ಬಂಧನ
1990 ಮುತ್ತಿನಹಾರ
1992 ಹರಕೆಯಕುರಿ
1994 ಕೊಟ್ರೀಶಿಕನಸು
ಇಸವಿ ರಾಜ್ಯ ಪ್ರಶಸ್ತಿ ವಿಜೇತ ಚಿತ್ರಗಳು
1973 ಸಂಕಲ್ಪ
1978 ಹೊಂಬಿಸಿಲು[2ನೇ ಅತ್ಯುತ್ತಮ ಚಿತ್ರ]
1985 ಬಂಧನ
1991 ಮುತ್ತಿನಹಾರ
1998 ಲಾಲಿ[2ನೇ ಅತ್ಯುತ್ತಮ ಚಿತ್ರ]
1999 ವೀರಪ್ಪನಾಯಕ[2ನೇ ಅತ್ಯುತ್ತಮ ಚಿತ್ರ]
2010 ಆಪ್ತರಕ್ಷಕ [2ನೇ ಅತ್ಯುತ್ತಮ ಚಿತ್ರ]

ಕುಮಾರಕವಿ ನಟರಾಜ್[9036976471]
ಬೆಂಗಳೂರು-560072