ಡಾ ವಿಷ್ಣುವರ್ಧನ್ ಪ್ರತಿಮೆ ನಿರ್ಮಾಣಕ್ಕೆ ಕಟಿಬದ್ಧ ಎಂದು ಸಂಸದ ಪ್ರತಾಪ್ ಸಿಂಹ

ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಡಾ ವಿಷ್ಣುವರ್ಧನ್ ಉದ್ಯಾನವನಕ್ಕೆ ಅಧಿಕೃತವಾಗಿ ಡಾಕ್ಟರ್ ವಿಷ್ಣು ಹೆಸರು ನಾಮಕರಣ ಮಾಡಬೇಕು ಹಾಗೆಯೇ ಡಾ॥ ವಿಷ್ಣು ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಸಂಸದರಾದ ಪ್ರತಾಪ್ ಸಿಂಹ ರವರಿಗೆ ಮನವಿ ಸಲ್ಲಿಸಿದ ವಿಷ್ಣು ಸೇನಾ ಸಮಿತಿ ಸದಸ್ಯರುಗಳು

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಕನ್ನಡ ಚಿತ್ರರಂಗದ ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರ ಕೊಡುಗೆ ಅಪಾರವಾದುದು, ಮೈಸೂರಿನಲ್ಲಿಯೇ ಅವರ ಬಹುತೇಖ ಚಿತ್ರಗಳು ಚಿತ್ರೀಕರಣವಾಗಿದ್ದು ಪ್ರವಾಸೋದ್ಯಮಕ್ಕೆ ಸಹಕಾರಿಯಾಗಿದೆ, ವರನಟ ಡಾ. ರಾಜಕುಮಾರ್ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ರವರು ಕನ್ನಡ ಚಿತ್ರರಂಗದ ಕಣ್ಣುಗಳಿದ್ದಂತೆ ಅದಕ್ಕೆ ನಿದರ್ಶನವಂತೆ ಅರಮನೆ ಮುಂಭಾಗ ಇಬ್ಬರ ಪ್ರತಿಮೆ ಮತ್ತು ಇಬ್ಬರ ಹೆಸರಿನಲ್ಲಿ ಉದ್ಯಾನವಿದೆ, ಪುಟ್ಟ ಣ್ಣ ಕಣಗಾಲ್ ರವರ ಗರಡಿಯಲ್ಲಿ ಪಳಗಿದ ವಿಷ್ಣುವರ್ಧನ್ ಅಂಬರೀಷ್ ಇಬ್ಬರು ಮೈಸೂರಿನವರು ಎಂಬುದು ನಮಗೆ ಹೆಮ್ಮೆಯ ವಿಚಾರ, ಮೈಸೂರಿನ ಅರಮನೆ ಮುಂಭಾಗದ ಉದ್ಯಾನಕ್ಕೆ ಡಾ. ವಿಷ್ಣುವರ್ಧನ್ ರವರ ಹೆಸರನ್ನು ನಾಮಕರಿಸುವಂತೆ ಮತ್ತು ಅವರ ಪ್ರತಿಮೆಯನ್ನ ಸ್ಥಾಪಿಸುವಂತೆ ಅಭಿಮಾನಿಗಳ ಹೋರಾಟದೊಂದಿಗೆ ಒಬ್ಬ ಸಂಸದನಾಗಿ ನಾನು ಹಾಗೂ ಜಿಜೆಪಿ ಪಕ್ಷದ ಅಧ್ಯಕ್ಷರಾದ ಶ್ರೀವತ್ಸರವರು ಬೆಂಬಲ ವ್ಯಕ್ತಪಡಿಸುತ್ತೇವೆ, ಮಹಾಪೌರರಾದ ಸುನಂದ ಪಾಲನೇತ್ರ ರವರೊಂದಿಗೆ ಚರ್ಚಿಸಿ ಕಾನೂನಾತ್ಮಕವಾಗಿ ನಾಮಕರಿಸುವಂತೆ ಮತ್ತು ಪ್ರತಿಮೆ ಸ್ಥಾಪಿಸುವ ವಿಚಾರವಾಗಿ ಕ್ರಮಕೈಗೊಳ್ಳಲಾಗುವುದು ಎಂದರು,
ಇದೇ ಸಂದರ್ಭದಲ್ಲಿ ವಿಷ್ಣು ಸೇನಾ ಸಮಿತಿಯ ಗೌರವಾಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ ,ಉಪಾಧ್ಯಕ್ಷ ರಾದ ಹರೀಶ್ ನಾಯ್ಡು ,ನಗರಪಾಲಿಕೆ ಸದಸ್ಯೆ ಸೌಮ್ಯ ಉಮೇಶ್, ಕೇಬಲ್ ಮಹೇಶ್,ಪ್ರದೀಪ್ ಕುಮಾರ್ ,ಉಮೇಶ್ ಕುಮಾರ್ ,ಹಾಗೂ ಇನ್ನಿತರರು ಹಾಜರಿದ್ದರು