ಸುರಿವ ಮಳೆ ಕೊರೆವ ಚಳಿಯಲ್ಲಿ ಬೆಳ್ಳಂಬೆಳಗ್ಗೆ ರೌಡಿಗಳ ಮನೆಗಳಿಗೆ ಪೊಲೀಸರ ದಾಳಿ

ಮೈಸೂರು: ಬೆಳ್ಳಂಬೆಳಗ್ಗೆ ನಗರದಾದ್ಯಂತ ಮೈಸೂರಿನ ರೌಡಿ ಶೀಟರ್‌ಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಮಳೆ ಚಳಿ ಎನ್ನದೆ ಬಿಸಿ ಮುಟ್ಟಿಸಿದ್ದಾರೆ. ಹಲ್ಲೆ, ಸುಲಿಗೆ, ಕೊಲೆ ಯತ್ನ, ಕೊಲೆ ಮುಂತಾದ ಅಪರಾಧ ಪ್ರಕರಣಗಳನ್ನು ಮಟ್ಟ ಹಾಕಲು ಪೊಲೀಸರು ಈ ರೀತಿಯ  ದಾಳಿಗಳನ್ನು ನಡೆಸಿದ್ದಾರೆ. ಕೆಲವು ರೌಡಿಗಳ  ಮನೆಯಲ್ಲಿ ಖಾಲಿ ಚೆಕ್, ಆಸ್ತಿಗಳ ದಾಖಲೆ, ಅಪಾರ ಪ್ರಮಾಣದ ಮಚ್ಚು, ಲಾಂಗ್, ಚಾಕು, ಡ್ಯಾಗರ್‌ನಂಥ ಮಾರಕಾಸ್ತ್ರಗಳು ಪೋಲಿಸರಿಗೆ ಪತ್ತೆಯಾಗಿವೆ.

ಈ ರೀತಿಯ ಅಪರಾಧ ಕೃತ್ಯಗಳನ್ನು ನಡೆಸಿದರೆ ಅಥವ ಮುಂದುವರಿಸಿದರೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ರೌಡಿಗಳಿಗೆ ಪೊಲೀಸ್ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ಧಾರೆ.

ಬೆಳಿಗಿನ ಜಾವ 5 ಗಂಟೆಗೆ ಆಯಾ ಠಾಣಾ ಪೊಲೀಸ್ ಇನ್ಸಪೆಕ್ಟರ್‌ಗಳ ಮುಂದಾಳತ್ವದಲ್ಲಿ ಪೊಲೀಸರು ರೌಡಿಗಳ ಮನೆ ಮೇಲೆ ದಢಿರ್ ದಾಳಿಗಳನ್ನು ನಡೆಸಿದರು. ಮುಂಜಾನಯೇ ಮನೆ ಬಾಗಿಲು ತಟ್ಟಿದ ಪೊಲೀಸರ ಕಂಡು ರೌಡಿ ಶೀಟರ್‌ಗಳು ಹೆದರಿ ಕಂಗಾಲಾದರು.

ದಾಳಿ ವೇಳೆ ಕೆಲವು ರೌಡಿಗಳು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಕ್ರಿಯವಾಗಿರುವ ಮಾಹಿತಿ ತಿಳಿದು ಬಂದಿದೆ.ಕೆಲವರ ಮನೆಯಲ್ಲಿ ಖಾಲಿ ಚೆಕ್, ಆಸ್ತಿಗಳ ದಾಖಲೆ, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಮಾಯಕರಿಗೆ ಬೆದರಿಸುವುದು, ಧಮ್ಕಿ ಹಾಕುವುದು, ಗಲಾಟೆ, ಘರ್ಷಣೆಯಲ್ಲಿ ಭಾಗಿಯಾಗುವುದು, ಚೀಟಿ, ಬಡ್ಡಿ ವ್ಯವಹಾರ, ಅಕ್ರಮ ರಿಯಲ್ ಎಸ್ಟೇಟ್ ದಂಧೆಗಳಲ್ಲಿ ಭಾಗಿಯಾಗುವುದು, ಕಿರುಕುಳ ನೀಡುವುದು ಗೋತ್ತದಲ್ಲಿ ಅಂತಹ ರೌಡಿಗಳಿಗೆ  ಕಾನೂನು ರೀತಿ ನಿರ್ಧಾಕ್ಷಿಣ್ಯ  ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು  ರೌಡಿ್ಖುಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.