ಜುಲೈ19, 22ರಂದು SSLC ಪರೀಕ್ಷೆ

ಬೆಂಗಳೂರು: ಬಹಳ ದಿನಗಳಿಂದ ಕುತೂಹಲ ಮತ್ತು ಆತಂಕದಿಂದಲೇ ಕಾಯುತ್ತಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗೆ ಕೊನೆಗೂ ಪರೀಕ್ಷಾ ದಿನಾಂಕವನ್ನು ನಿಗದಿ ಪಡಿಸಲಾಗಿದ್ದು, ಈ ಬಾರಿ ಜುಲೈ 19 ಮತ್ತು ಜುಲೈ 22 ರಂದು ಬೆಳಗ್ಗೆ 10:30 ರಿಂದ 1:30ರವರೆಗೆ ಪರೀಕ್ಷೆ ನಡೆಯಲಿದೆ.

ಜು.19ರಂದು ಕೋರ್ ವಿಷಯಗಳ ಪರೀಕ್ಷೆ ಮತ್ತು ಜುಲೈ 22ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ. ಈ ಬಾರಿ 8.76 ಲಕ್ಷ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. 73,066 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಂದು ಕೊಠಡಿಯಲ್ಲಿ ಕೇವಲ 12 ಹನ್ನೆರಡು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಮೂರು ವಿಷಯಗಳಿಗೆ ಒಂದು ಪರೀಕ್ಷೆ ಇರಲಿದ್ದು, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆ ಜುಲೈ 19ರಂದು ನಡೆಯಲಿದೆ. ಉಳಿದ ಭಾಷಾ ವಿಷಯಗಳ ಪರೀಕ್ಷೆ ಜುಲೈ 22 ರಂದು ನಡೆಯಲಿದೆ.

Leave a Reply

Your email address will not be published. Required fields are marked *