ಮದುವೇ ಮಾಡಿಕೋ ಅಂದ್ರೆ ಅದನ್ನೇ ಉಳಿಯಿಂದ ಕಟ್ ಮಾಡಿಕೊಂಡ ವರ

ವಿರೋಧದ ನಡುವೆ ಕೂಡ ಮಗನ ಮದುವೆಗೆ ಮುಂದಾಗಿದ್ದರಿಂದ ಆಕ್ರೋಶಗೊಂಡ ಆತ ಜನನಾಂಗ ಕತ್ತರಿಸಿಕೊಂಡು ಅತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.

ತನಗೆ ಇಷ್ಟವಿಲ್ಲದ ಮದುವೆ ಮಾಡಲು ಮುಂದಾಗಿದ್ದ ಪೋಷಕರೊಂದಿಗೆ ಜಗಳವಾಡಿರುವ ಯುವಕನೊಬ್ಬ ಮನೆಯವರು ಅವನಿಗೆ ಬಲವಂತವಾಗಿ ಮದುವೆ ನೆರವೇರಿಸಲು ಮುಂದಾದಗಾ ಅತ ಶಿಶ್ನವನ್ನೇ ಕತ್ತರಿಸಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸೇಲಂ ಜಿಲ್ಲೆಯ ತಮ್ಮಂಪಟ್ಟಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವಿಜಯರಾಘವನ್​ ಈ ಕೃತ್ಯ ಮಾಡಿಕೊಂಡಿದ್ದಾನೆ ವಿಜಯರಾಘವನ್ಗೆ ಪೋಷಕರು ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ, ಇದಕ್ಕೆ ಇಷ್ಟವಿಲ್ಲದ ವಿಜಯ್​ ತನ್ನ ಹೆತ್ತವರೊಂದಿಗೆ ವಾಗ್ವಾದ ನಡೆಸಿದ್ದು, ಮದುವೆ ನಿಲ್ಲಿಸುವಂತೆ ಒತ್ತಾಯಿಸಿದ್ದನು. ಇದೇ ವಿಷಯಕ್ಕೆ ಮಂಗಳವಾರ ಪೋಷಕರು ಹಾಗೂ ಮಗನ ನಡುವೆ ವಾದ ನಡೆದಿದೆ. ಇದರಿಂದ ಆಕ್ರೋಶಗೊಂಡ ಆತ ಉಳಿಯಿಂದ ಶಿಶ್ನ ಹಾಗೂ ಕುತ್ತಿಗೆ ಕತ್ತರಿಸಿಕೊಂಡು, ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Leave a Reply

Your email address will not be published. Required fields are marked *