ಹುಣಸೂರು:- ಮೇವನ್ನರಸಿ ಬಂದಿದ್ದ ಕಾಡಾನೆಯು ತಾಲೂಕಿನ ಗುರುರದ ಟಿಬೇಟಿಯನ್ನರ ಜಮೀನಿನಲ್ಲಿ ಅನುಮಾನಾಸ್ಪದವಾಗಿ ಸುಮಾರು 25 ರಿಂದ 28 ವರ್ಷದ ಮಕ್ನಾ ಆನೆ ಸಾವನ್ನಪ್ಪಿದೆ.
ಗುರುವಾರ ರಾತ್ರಿ ನಾಗರಹೊಳೆ ಉದ್ಯಾನ ದಾಟಿ ಹೊರಬಂದಿದ್ದ ಈ ಆನೆಯು ಸುತ್ತ ಮುತ್ತಲಿನಲ್ಲಿ ಸಾಕಷ್ಟು ಬೆಳೆ ತಿಂದು ಗುರುಪುರ ಟಿಬೇಟ್ ಕ್ಯಾಂಪಿನ ಬಳಿಯ ಹೆಬ್ಬಳ್ಳ ದಾಟಿ ಟಿಬೇಟ್ ಕ್ಯಾಂಪಿನ ಲೇ. ತಾವಾ ಎಂಬುವವರ ಪುತ್ರ ಹೋಂಡಾ ಎಂಬುವವರ ಜಮೀನಿನ ತಂತಿ ಬೇಲಿ ದಾಟಿ ಬರುವ ವೇಳೆಯೇ ಕುಸಿದು ಬಿದ್ದು ಸಾವನ್ನಪ್ಪಿದೆ.
ಆಕಸ್ಮಿಕವೋ ಅಥವಾ ವಿದ್ಯುತ್ ಆಘಾತವೋ ಎಂಬುದು ಮರಣೋತ್ತರ ಪರೀಕ್ಷೆ ಬಂದ ನಂತರವಷ್ಟೆ ತಿಳಿಯಲಿದೆ. ಸ್ಥಳಕ್ಕೆ ಎಸಿಎಫ್ ಸತೀಶ್. ಆರ್ ಎಫ್ ಓ ನಮನನಾರಾಯಣ ನಾಯಕ್ ಹಾಗೂ ಎಸ್ ಟಿ ಪಿಎಫ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.