ಎಲ್ಲಾ ರೀತಿಯ ಜೀವನಾವಶ್ಯಕ ವಸ್ತು ಮತ್ತು ಸೇವೆಗಳ ನಿರಂತರ ಬೆಲೆ ಏರಿಕೆಯಿಂದ ಜನಸಾಮಾನ್ಯರನ್ನು ದಿನನಿತ್ಯ ಸಾಯಿಸುತ್ತಿರುವ ಸರಕಾರದ ನೀತಿಯ ವಿರುದ್ಧ ಮೈಸೂರಿನ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಇಂದು ಬೀದಿ ನಾಟಕ ರೂಪದಲ್ಲಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿದ ಮೈಸೂರು ಆಪ್ ಜಿಲ್ಲಾಧ್ಯಕ್ಷೆ ಶ್ರೀಮತಿ ಮಾಲವಿಕ ಗುಬ್ಬಿವಾಣಿ “ಸರಕಾರದ ಆರ್ಥಿಕ ನೀತಿಗಳು ಕೇವಲ ದೊಡ್ಡ ಉದ್ಯಮಿಗಳ ಪರವಾಗಿದ್ದು, ಜನಸಾಮಾನ್ಯರಿಕೆ ಮಾರಕವಾಗಿದೆ. ಮಧ್ಯಮ ವರ್ಗಮತ್ತು ಬಡವರು ಬಡತನದ ರೇಖೆಗಿಂತ ಕೆಳಗೆ ಜಾರುತ್ತಿದ್ದು ದೊಡ್ಡ ದೊಡ್ಡ ಉದ್ಯಮಿಗಳ ಐಶ್ವರ್ಯ ಮಹಾಮಾರಿಯ ಕಾಲದಲ್ಲೂ ದಿನದಿನಕ್ಕೆ ವೃದ್ಧಿಯಾಗುತ್ತಿದೆ. ಇಂತಹ ನೀತಿಯ ವಿರುದ್ಧ ಜನಸಾಮಾನ್ಯರು ದನಿ ಎತ್ತಲೇಬೇಕಾಗಿದೆ” ಎಂದರು.

ಈ ಪ್ರಹಸನವನ್ನು ಪಕ್ಷದ ನಗರ ಸಂಘಟನಾ ಕಾರ್ಯದರ್ಶಿ ಗಿರೀಶ್ ಮಾಚಳ್ಳಿಯವರು ಬರೆದು, ನಿರ್ದೇಶಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದವರು ಮಾಲವಿಕ ಗುಬ್ಬಿವಾಣಿ, ಮೊಹಮ್ಮದ್ ಇಸ್ಮೈಲ್, ಗಿರೀಶ್ ಮಾಚಳ್ಳಿ, ಇರ್ಫ಼ಾನ್ ಬೇಗ್, ಮಸೂದ್, ಉಷಾ ಸಂಪತ್ಕುಮಾರ್, ಕಿರಣ್ ಕಲ್ಯಾಣಿ, ಸೈಯದ್ ಫರೀದ್, ವರಲಕ್ಷ್ಮಿ, ಅಕ್ರಮ್ ಶರೀಫ್, ಧರ್ಮಶ್ರೀ, ರೇಣುಕಾಪ್ರಸಾದ್, ಜಿ.ಆರ್.ವಿದ್ಯಾರಣ್ಯ ಮತ್ತು ಇತರರು.
ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ಪಂಚಮುಖಿ ಆರಾಧಕರು
ಪಂ, ಸಮರ್ಥ್ ಜೋಷಿ
ನಂಬರ್ 1 ವಶೀಕರಣ ಸ್ಪೆಷಲಿಸ್ಟ್
ಸ್ತ್ರೀ ಮತ್ತು ಪುರುಷ ವಶೀಕರಣ ಮಾಡಿಕೊಡುತ್ತಾರೆ ಸಂಪರ್ಕಿಸಿ 9448077525
ನಂಬರ್ ಒನ್ ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಧನವಶ ವ್ಯಾಪಾರ ಅಭಿವೃದ್ಧಿ ಅತ್ತೆ ಸೋಸೆ ಪ್ರೀತಿ-ಪ್ರೇಮ ಕಲಹ ಮನೆಯಲ್ಲಿ ಅಶಾಂತಿ ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇವಲ ಮೂರೇ ದಿನಗಳಲ್ಲಿ ಕೇರಳಿಯ ಅದರಣ ತ್ರಿಕೂಟ ಸಂಗಮ ವೇದಗಳ ನಾಗಾಸಾಧು ಮೂಲಕ ಮತ್ತು ಉಚ್ಚಂಗಿ ದೇವಿಯ ಪೂಜಾಫಲ ಮೂಲಕ ನಿಮ್ಮ ಸಮಸ್ಯೆಗಳು ಎಷ್ಟೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಸಿದ್ಧ ಮೊಬೈಲ್ .9448077525
