ಮೈಸೂರು, ಅಕ್ಟೋಬರ್ :- ಸಹಕಾರ ಸಚಿವ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಅ.1ರ ಶುಕ್ರವಾರ ಬೆಳಗ್ಗೆ ಮರದ ಅಂಬಾರಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.

ಅರಮನೆ ಆವರಣದಲ್ಲಿ ಅಭಿಮನ್ಯು ಆನೆಗೆ ಮರಳು ಮೂಟೆ ಹೊರಿಸಿ ಅದರ ಮೇಲೆ ಕಟ್ಟಿದ್ದ ಮರದ ಅಂಬಾರಿಗೆ ಪೂಜೆ ಸಲ್ಲಿಸಿದ ಬಳಿಕ ಅಂತಿಮ ಹಂತದ ತಾಲೀಮು ಆರಂಭವಾಯಿತು.
ಅಭಿಮನ್ಯು ಜೊತೆ ಕಾವೇರಿ, ಲಕ್ಷ್ಮಿ, ಚೈತ್ರಾ, ಗೋಪಾಲಸ್ವಾಮಿ, ಧನಂಜಯ, ವಿಕ್ರಮ, ಅಶ್ವತ್ಥಾಮ ಆನೆಗಳು ಹೆಜ್ಜೆ ಹಾಕಿದವು.