ಮೈಸೂರು: ಜಿಲ್ಲೆಯ ಕೆ.ಆರ್.ನಗರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಅಮೆರಿಕದ ನ್ಯೂಯಾರ್ಕ್ ಕನ್ನಡ ಕೂಟವು 15 ಲಕ್ಷ ರೂಪಾಯಿ ಮೌಲ್ಯದ ಕೋವಿಡ್ ಔಷಧಗಳನ್ನೊಳಗೊಂಡ ಕಿಟ್ ಗಳನ್ನು ಕೊಡುಗೆಯಾಗಿ ನೀಡಿದೆ.
ಈ ಕಿಟ್ ಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಿ ಮಾತನಾಡಿದ ಶಾಸಕ ಸಾ.ರಾ.ಮಹೇಶ್ ಅವರು, ಅಮೆರಿಕದ ನ್ಯೂಯಾರ್ಕ್ನ ಕನ್ನಡ ಕೂಟದ ಸ್ನೇಹಿತರ ಕಾರ್ಯವನ್ನು ಶ್ಲಾಘಿಸಿದರಲ್ಲದೆ, ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಅಮೆರಿಕಾದಲ್ಲಿ ನೆಲೆಸಿರುವ ಕೂಟದವರು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಇಲ್ಲಿನ ಜನರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ 15 ಲಕ್ಷ ರೂಪಾಯಿ ಬೆಲೆಬಾಳುವ 50 ನೆಬ್ಲೇಜರ್, ಆಕ್ಸಿಜನ್ ಕಾನ್ಸ್ ಟ್ರೇಟರ್, ಮಕ್ಕಳ ವೆಂಟಿಲೇಟರ್ ಸೇರಿದಂತೆ ಕೋವಿಡ್ ಔಷಧಗಳನ್ನು ನೀಡಿರುವುದು ಸಂತಸ ತಂದಿದ್ದು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭ ಅಮೇರಿಕಾದ ನ್ಯೂಯಾರ್ಕ್ ಕನ್ನಡ ಬಳಗದ ಸದಸ್ಯ ಪವನ್ ಶೆಟ್ಟಿ, ಪುರಸಭೆ ಅಧ್ಯಕ್ಷ ಕೆ.ಜಿ.ಸುಬ್ರಹ್ಮಣ್ಯ, ಸದಸ್ಯರಾದ ಕೆ.ಪಿ. ಪ್ರಭುಶಂಕರ್, ಸಂತೋಷ್, ಕೆ.ಎಲ್. ಜಗದೀಶ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ, ತಾ.ಪಂ.ಇಓ ಹೆಚ್.ಎನ್.ಸತೀಶ್, ಪುರಸಭಾ ಮುಖ್ಯಾಧಿಕಾರಿ ಡಿ.ಪುಟ್ಟರಾಜು ಮತ್ತಿತರರು ಇದ್ದರು.