ಕುವೆಂಪು ಮನೆ ವಸ್ತುಸಂಗ್ರಹಾಲಯ ಮಾಡಲು ಆಪ್ ಒತ್ತಾಯ

ಮೈಸೂರು: ರಾಷ್ಟçಕವಿ ಕುವೆಂಪು ಅವರ ಮನೆಯನ್ನು ವಸ್ತುಸಂಗ್ರಹಾಲಯ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಪತ್ರಿಕೆಗಳಿಂದ ತಿಳಿದು ಬಹಳ ಖೇದವೆನಿಸಿತು ಎಂದು ಆಮ್ ಆದಿ ಪಾರ್ಟಿಯ ಜಿಲ್ಲಾ ಅಧ್ಯP್ಷÀ ಎಲ್. ರಂಗಯ್ಯ ಬೇಸರ ವ್ಯಕ್ತಪಡಿಸಿದರು.
ಜ್ಞಾನಪೀಠ ಪ್ರಶಸ್ತಿ ಪಡೆದ ರಾಷ್ಟçಕವಿ ಎಂದು ಬಿರುದು ಪಡೆದ ರಾಷ್ಟçಕವಿಯ ಮನೆಯನ್ನು ವಸ್ತುಸಂಗ್ರಹಾಲಯ ಮಾಡಲು ಸರ್ಕಾರಕ್ಕೆ ಏನು ಅಡ್ಡಿ ಆತಂಕ ಹಣದ ಕೊರತೆಯೇ? ಸ್ವಾರ್ಥದ ರಾಜಕಾರಣವೇ? ಅಥವಾ ಇಚ್ಚಾಶಕ್ತಿಯ ಕೊರತೆಯೇ? ಅದನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ತಿಳಿಸಲಿ ಎಂದರು.
ಅವರ ಕುಟುಂಬವೇ ಮನೆಯನ್ನು ಬಿಟ್ಟುಕೊಡಲು ಸಿದ್ಧರಿರುವಾಗ ನಿಮಗೇನು ಕಷ್ಟ. ಯಾವುದಕ್ಕೋ ಸರ್ಕಾರದ ಹಣ ಪೋಲಾಗುತ್ತದೆ. ಇಂಥ ಮಹನೀಯರ ಮನೆಯನ್ನು ಅಭಿವೃದ್ಧಿಗೊಳಿಸಿ ಮುಂದಿನ ಪೀಳಿಗೆಯವರಿಗೆ ತಲುಪಿಸುವ ಜವಾಬ್ದಾರಿ ಬೇಡವೇ? ಬಾಯಿಮಾತಿನಲ್ಲಿ ಕನ್ನಡ, ಕನ್ನಡ ಎಂದು ಬೊಬ್ಬಿರಿಯುವ, ನವೆಂಬರ್ ತಿಂಗಳಿಗೆ ಸೀಮಿತಗೊಳಿಸಿರುವ ರಾಜಕಾರಣಿಗಳಿಗೆ ಎಲ್ಲಿ ಅರ್ಥವಾಗಬೇಕು ಎಂದು ಪ್ರಶ್ನಿಸಿದರು.
ಜನ ಎಲ್ಲದಕ್ಕೂ ಹೋರಾಟ ಮಾಡಿದರೆ ಮಾತ್ರ ಕಣ್ಣು ತೆರೆಯುವ ಅಧಿಕಾರಿಗಳು, ರಾಜಕಾರಣಿಗಳು ಇದ್ದರೆ ಇದೇ ಆಗೋದು. ಜಾಣಕುರುಡು ಅಂತ ಹೇಳುವುದು ಇದಕ್ಕೆ ಇರಬೇಕು. ಚುನಾವಣೆ ಬಂದಾಗ ಎಲ್ಲ ರಾಜಕಾರಣಿಗಳು ಕುವೆಂಪುರವರ ಭೇಟಿಗೆ ಹೋಗುತ್ತಿದ್ದರು. ಈಗ ಅವರು ಇಲ್ಲವಲ್ಲ. ಅದಕ್ಕೆ ಈ ಮನೋಸ್ಥಿತಿ ಎಂದರು.
ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನಸ್ಸು ಮಾಡಿದರೆ ಇದೇನು ದೊಡ್ಡ ಕೆಲಸವೇ? ಈಗಲಾದರೂ ಮುಖ್ಯಮಂತ್ರಿಗಳು ತಮ್ಮ ಕೊನೆಯ ಅವಕಾಶದಲ್ಲಿ ಈ ಕೆಲಸ ಮಾಡಿದರೆ ಅವರ ಗೌರವ ಇಮ್ಮಡಿಗೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ. ಆದಷ್ಟು ಬೇಗ ಮುಖ್ಯಮಂತ್ರಿಗಳು ಇದರ ಕುರಿತು ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.