ಮೈಸೂರು: ಇದೀಗ ಅಣ್ಣನೇ ಸ್ವಂತ ತಂಗಿಯನ್ನು ಅತ್ಯಾಚಾರ ಮಾಡಿದ ಸಮಾನುಷ ಕೃತ್ಯವೊಂದು ಮೈಸೂರಿನಲ್ಲಿ ನಡೆದಿದ್ದು, ಇದೀಗದ ಪ್ರಕರಣ ಸಂಬಂಧ ಅಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಅರಮನೆ ನಗರಿಯ ಗಿರಿದರ್ಶಿನಿ ನಗರದಲ್ಲಿ ಅಣ್ಣನೇ ಏನು ಅರಿಯದ ಸಹೋದರಿಯ ಮೇಲೆ ತನ್ನ ಕಾಮತೃಷೆ ತಿರಿಸಿಕೊಂಡಿದ್ದಾನೆ. ಆರೋಪಿಯನ್ನು ವಿನಯ್ ಕುಮಾರ್ ಎಂದು ಗುರುತಿಸಲಾಗಿದೆ. ಈತನ ಕಾಮದಾಟಕ್ಕೆ ಅತನ ತಂಗಿ ಗರ್ಭಿಣಿಯಾಗಿದ್ದಾಳೆ.
ತಂದೆ ತಾಯಿಯನ್ನ ಚಿಕ್ಕವಯಸ್ಸಿನಲ್ಲೇ ಕಳೆದುಕೊಂಡಿದ್ದ 16 ವರ್ಷದ ಅಪ್ರಾಪ್ತೆ, ಅಣ್ಣನ ಜೊತೆ ವಾಸವಾಗಿದ್ದಳು. ಇಬ್ಬರು ಅಣ್ಣಂದಿರು ಹಾಗೂ ಇಬ್ಬರು ಅಕ್ಕಂದಿರೊಂದಿಗೆ ಜೀವನ ಸಾಗಿಸುತ್ತಿದ್ದಳು. ಅಕ್ಕಂದಿರಿಗೆ ವಿವಾಹವಾದ ಕಾರಣ ಇಬ್ಬರು ಅಣ್ಣಂದಿರ ಜೊತೆ ಆಶ್ರಯ ಪಡೆದಿದ್ದಳು.
ಅಪ್ರಾಪ್ತೆಯ ಅಣ್ಣ ಕುಡಿತಕ್ಕೆ ದಾಸನಾಗಿದ್ದ ಕುಡಿದ ಸಮಯದಲ್ಲಿ ತಂಗಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮೂರು ತಿಂಗಳಿಂದ ಅತ್ಯಾಚಾರವೆಸಗಿದ್ದಾನೆ.
ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.