ಹೊಸದಿಲ್ಲಿ: ಸುಲ್ಲಿಡೀಲ್ಸ್ ಮೊಬೈಲ್ ಆಪ್ ಸೃಷ್ಟಿಕರ್ತ ಎಂದು ಶಂಕಿಸಲಾಗಿರುವ ವ್ಯಕ್ತಿಯನ್ನು ದಿಲ್ಲಿ ಪೊಲೀಸರು ಇಂಧೋರ್‌ನಲ್ಲಿ ಬಂಧಿಸಿದ್ದಾರೆ. ಸುಲ್ಲಿಡೀಲ್ಸ್ ಆಪ್ ಪ್ರಕರಣದಲ್ಲಿ ನಡೆದ ಮೊದಲ ಬಂಧನ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದೋರ್‌ನ ಐಪಿಎಸ್ ಅಕಾಡೆಮಿಯಲ್ಲಿ ಬಿಸಿಎ ಅಧ್ಯಯನ ಮಾಡಿರುವ ಆರೋಪಿ ಓಂಕಾರೇಶ್ವರ ಠಾಕೂರ್ (26) ನ್ಯೂಯಾರ್ಕ್ ಸಿಟಿ ಟೌನ್‌ಶಿಪ್‌ನ ನಿವಾಸಿಯೇ ಬಂದಿದ ಆರೋಪಿ. ಸುಲ್ಲಿಡೀಲ್ಸ್ ಮೊಬೈಲ್ ಆಪ್‌ನಲ್ಲಿ ನೂರಾರು ಮುಸ್ಲಿಂ ಮಹಿಳೆಯರನ್ನು ಅನುಮತಿಯಿಲ್ಲದೆ ಭಾವಚಿತ್ರ ಸಮೇತ ಹರಾಜಿಗೆ ಇಡಲಾಗಿದೆ ಎಂದುರೋಪಿಸಲಾಗಿದೆ. ವಿಚಾರಣೆ ಸಮಯದಲ್ಲಿ ಆರೋಪಿಯು ನಾನು ಮುಸ್ಲಿಂ ಮಹಿಳೆಯರನ್ನು ಮಾನಹಾನಿ ಮತ್ತು ಟ್ರೋಲ್ ಮಾಡುವ ಟ್ವಿಟರ್ ಗುಂಪಿನ ಸದಸ್ಯ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ (ಐಎಫ್‌ಎಸ್‌ಒ) ಕೆ.ಪಿ.ಎಸ್. ಮಲ್ಹೋತ್ರಾ ತಿಳಿಸಿದ್ದಾರೆ.