ಹೆಬ್ಬಾಳ್ ದ ಬಸವನಗುಡಿಯಲ್ಲಿ ಭಾರತ ಮಾತೆಯ ಪೂಜಾ ಕಾರ್ಯಕ್ರಮ

ಮೈಸೂರು: ಹೆಬ್ಬಾಳ ಕಾಲೋನಿ ಬಸವನಗುಡಿ  ಹಿಂಭಾಗದಲ್ಲಿ ಭಾರತ ಮಾತೆಯ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪೌರಕಾರ್ಮಿಕರು ವಾಸ ಮಾಡುವ  ಈ ಸ್ಥಳದಲ್ಲಿ ಅದ್ಭುತವಾದ ದೇವಸ್ಥಾನವನ್ನು ಗ್ರಾಮಸ್ಥರು ನಿರ್ಮಿಸಿಕೊಂಡಿದ್ದಾರೆ. ಈ ಸ್ಥಳದಲ್ಲಿ ಹಲವು ಸಮಾಜಮುಖೀ ಕಾರ್ಯದಲ್ಲಿ ಹಲವು ನಡೆಯುತ್ತದೆ, ಈ ದೇವಸ್ಥಾನದ ವಿಶೇಷವೆಂದರೆ ಈ ವರ್ಷದ ಪೂರ್ತಿ ಪೂಜಾಕೈಂಕರ್ಯ ನಡೆಯುತ್ತದೆ. ಗ್ರಾಮದೇವತೆ ಪಟ್ಟಲದಮ್ಮ ದೇವಾಸ್ಥನದ ಅವರಣದಲ್ಲಿ ಭಾರತಮಾತಾ ಪೂಜಾಕಾರ್ಯದಲ್ಲಿ ಮಕ್ಕಳು ತರುಣ-ತರುಣಿಯರು ಹಿರಿಯರು ಗ್ರಾಮದ ಮುಖಂಡರು RSS ನ ಸ್ವಯಂಸೇವಕರು ಒಳಗೊಂಡಂತೆ 50ಕ್ಕೂ ಹೆಚ್ಚು ದೇಶಪ್ರೇಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಕಾರ್ಯಕ್ರಮದಲ್ಲಿ ತನುಜ ಮಹೇಶ್ ರವರು ದೇಶಭಕ್ತಿಯನ್ನು ಹಾಡುವ ಮೂಲಕ ಪ್ರಾರಂಭವಾಯಿತು, ನಂತರ ಎಲ್ಲಾ ದೇಶಭಕ್ತರಿಂದ ಭಾರತಾಂಬೆಗೆ ಪುಷ್ಪಾರ್ಚನೆಯನ್ನೂ ಮಾಡಿ  ಗೌರವ ಸಮರ್ಪಣೆ ಯನ್ನು ಭಾರತಾಂಬೆಗೆ ಸಲ್ಲಿಸುವುದರಿಂದ ಭಾರತಾಂಬೆಗೆ ವಿಶೇಷ ಪೂಜೆಯನ್ನು  ರಾಷ್ಟ್ರೀಯ ಗೀತೆ ಜನಗಣಮನ ವನ್ನು ರಾಮನ್ ಜಿ ಯವರು ಹೇಳಿಕೊಟ್ಟರು ಅದರಂತೆ ಎಲ್ಲರೂ ಒಕ್ಕೊರಲಿನಿಂದ ಜನಗಣಮನ ಹಾಡಿ  ಭಾರತಾಂಬೆಗೆ  ವಿಶೇಷ ಪೂಜೆಯನ್ನು ಸಲ್ಲಿಸಿ, ಹಾಗೂ ಪಟ್ಟಲದಮ್ಮ ನಿಗೆ ವಿಶೇಷ ಪೂಜೆಯನ್ನು ಮಾಡಿ, ಪ್ರಸಾದ ವಿನಿಯೋಗ ವನ್ನು ಮಾಡಿ ಕಾರ್ಯಕ್ರಮವನ್ನ ನೆರವೇರಿಸಲಾಯಿತು. ಭಾರತಮ್ಮ ಪೂಜಾ ಕಾರ್ಯಕ್ರಮದಲ್ಲಿ ಸಮಾಜಸೇವಕರು, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಜವಾಬ್ದಾರಿಗಳನ್ನು ಹೊಂದಿರುವ ಪ್ರಮುಖರು ಮತ್ತು ಸ್ವಯಂಸೇವಕರು ಗಳು ಹಾಗೂ ಸಂಘಪರಿವಾರದ ಕಾರ್ಯಕರ್ತರು ಗಳಾದ ನಿತ್ಯಾನಂದ,  ವಾಮನ ಜಿ,  ಮಹೇಶ್ ಕುದೇರು, ತನುಜಾ ಮಹೇಶ್, ಆನಂದ್ ಧರ್ಮ ಜಾಗರಣ, ಯೋಗಾನಂದ, ಸುಧೀರ್,  ದಿನೇಶ್, ಮತ್ತಿತರ ದೇಶಭಕ್ತರು ಉಪಸ್ಥಿತರಿದ್ದರು.