ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಎಚ್.ಎಂ. ರಮೇಶ್ ರಮೇಶ್ ಗೌಡ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡ ಸರ್ಕಾರದ ಮತ್ತು ಅಮಾಯಕರ ಭೂಮಿಯನ್ನು ಕಬಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಸೊಣ್ಣಪ್ಪ ಕುಟುಂಬಸ್ಥರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಶಿವಕುಮಾರ್ ಸೊಣ್ಣಪ್ಪ. ಮೋಹನಕುಮಾರ್ ಸೊಣ್ಣಪ್ಪ, ಸುನೀಲ್ ಕುಮಾರ್ ಸೊಣ್ಣಪ್ಪ., ಅನೀಲ್ ಕುಮಾರ್ ಸೊಣ್ಣಪ್ಪ ಕೀರ್ತಿ ಸಾಗರ್ ಬಿ.ಆರ್ ಕಬಳಿಕೆಯನ್ನೆ ವೃತ್ತಿ ಮಾಡಿಕೊಂಡಿರುವ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ಅವರು ತಮ್ಮ ಈ ಅಕ್ರಮ ಕೃತ್ಯಗಳಿಗೆ ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಬೆಂಗಳೂರು ಕುಡಿಯುವ ನೀರು ಸರಬರಾಜು ಮಂಡಳಿ ಹಾಗೂ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಹೆಣ್ಣೂರು ಮುಖ್ಯರಸ್ತೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ಎಂ. ರಮೇಶ್ ಗೌಡ ಅವರ 10 ಸಾವಿರ ಅಡಿ ಜಮೀನು ಇದ್ದು, ಆ ಜಮೀನಿಗೆ ಹೊಂದಿಕೊಂಡಿರುವ ಸರ್ಕಾರದ 8 ಸಾವಿರ ಅಡಿ ಭೂಮಿಯನ್ನು ಕಬಳಿಸಿ ಬೇರೆ ಸರ್ವೆನಂಬರ್ ಹಾಗೂ ಖಾತೆ ತೋರಿಸಿ ನಿಯಮಬಾಹಿರವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಂಡು ಲಕ್ಷಾಂತರ ರೂಪಾಯಿ ಬಾಡಿಗೆ ಪಡೆಯುತ್ತಿದ್ದಾರೆ. ಈ ಕುರಿತು ಸಂಬಂಧ ಪಟ್ಟ ಇಲಾಖೆಗಳಿಗೆ ದಾಖಲೆಸಹಿತ ದೂರು ನೀಡಿದರೂ ಸಹ ಯಾವುದೇ ರೀತಿಯಲ್ಲಿ ಕ್ರಮಕೈಗೊಳ್ಳದೆ ಆ ಇಲಾಖೆಯ ಅಧಿಕಾರಿಗಳು ಶಾಸಕ ರಮೇಶ್ ಗೌಡ ಅವರ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಶಾಸಕ ರಮೇಶ್ ಗೌಡ ಅವರ ಹೆಚ್.ಎಂ.ಆರ್. ಇಂಟರ್ ನ್ಯಾಷನಲ್ ಸ್ಕೂಲ್ ಕಾಂಪೌಂಡ್ ಹೊಂದಿಕೊಂಡು ನಮ್ಮ ಕುಟುಂಬದ 10 ಸಾವಿರ ಅಡಿ ಜಮೀನು ಇದ್ದು ಈ ಭೂಮಿಯನ್ನು ಕಬಳಿಸಲು ರಮೇಶ್ ಗೌಡ ಅವರು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಅಲ್ಲದೆ ನಮ್ಮ ಕುಟುಂಬದ ಸದಸ್ಯರ ವಿರುದ್ದ ಪೊಲೀಸ್ ಠಾಣೆಗಳಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದರೊಂದಿಗೆ ಬಿಬಿಎಂಪಿ ಬೆಸ್ಕಾಂ , ಬಿ ಡಬ್ಲ್ಯುಎಸ್ ಎಸ್ ಬಿ ಹಾಗೂ ಪೊಲೀಸ್ ಅಧಿಕಾರಿಗಳ ಮೂಲಕ ನಿರಂತರ ಕಿರುಕುಳ ನೀಡುವುದರ ಜೊತೆಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಹೆಚ್.ಎಂ. ರಮೇಶ್ ಗೌಡ ಅವರು ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಹೆಚ್.ಎಂ.ಆರ್ ಇಂಟರ್ನ್ಯಾಷನಲ್ ಸ್ಕೂಲ್ ನಿರ್ಮಾಣಮಾಡಿದ್ದು, ಈ ಕುರಿತು ಬಿಬಿಎಂಪಿ ಅಧಿಕಾರಿಗಳಿಗೆ ಸಂಪೂರ್ಣವಾಗಿ ಮಾಹಿತಿ ಇದ್ದರೂ ಸಹ ಅವರು ರಸ್ತೆ ಒತ್ತುವರಿಯನ್ನು ತೆರವುಗೊಳೊಸದೆ ರಮೇಶ್ ಗೌಡರ ಅಕ್ರಮ ಚಟುವಟಿಕೆಗಳಿಗೆ ತೆರೆ ಮರೆಯಲ್ಲಿ ಬೆಂಬಲ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ವಿಧಾನ ಪರಿಷತ್ ಸದಸ್ಯ ಎಚ್.ಎಂ. ರಮೇಶ್ ಗೌಡ ಅವರು ಅಕ್ರಮ ಭೂಕಬಲಿಕೆಯ ಸಮಗ್ರ ತನಿಖೆ ನಡೆಸಿ ಅವರು ಕಬಳಿಕೆ ಮಾಡಿಕೊಂಡ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು ವಾಪಾಸ್ ಪಡೆಯಬೇಕು ಮತ್ತು ಅವರ ವಿರುದ್ದ ಪ್ರಕರಣ ದಾಖಲಿಕೊಂಡು ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಅವರು ಅಕ್ರಮವಾಗಿ ಸಂಪಾದಿಸಿದ ಸಂಪತನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಹೆಚ್ ಎಂ ರಮೇಶ್ ಗೌಡ ಮನೆಯ ಸುತ್ತಮುತ್ತಲಿನ ಅಮಾಯಕ ನಾಗರಿಕರಿಗೆ ಅವರ ಕಿರುಕುಳ ಹಾಗೂ ದೌರ್ಜನ್ಯದಿಂದ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.