ಮೈಸೂರು: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಜಾರಿಗೊಳಿಸಿರುವುದನ್ನು ಖಂಡಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್‌ಎಸ್‌ಯುಐ)ದ ಪದಾಧಿಕಾರಿಗಳು ಉನ್ನತ ಶಿಕ್ಷಣ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿದರು.
ಸಚಿವರು ಚಾಮುಂಡಿ ಅತಿಥಿ ಗೃಹದಿಂದ ನಿರ್ಗಮಿಸುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಂತು ಎನ್‌ಎಸ್‌ಯುಐ ಪದಾಧಿಕಾರಿಗಳು ಕಪ್ಪು ಬಾವುಟ ಪ್ರದರ್ಶಿಸಿ, ಎನ್‌ಇಪಿ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಕೇಂದ್ರ ಸರಕಾರ ಇಡೀ ದೇಶದಲ್ಲಿ ಎನ್‌ಇಪಿ ಜಾರಿಗೆ ತರಲು ಹೊರಟಿದೆ. ಇದರ ಪ್ರಯೋಗಿಕವಾಗಿ ರಾಜ್ಯದಲ್ಲಿ ಎನ್‌ಇಪಿ ಅನುಷ್ಠಾನ ಮಾಡುತ್ತಿದೆ. ಈ ಮೂಲಕ ಬಿಜೆಪಿ ತನ್ನ ಚಿಂತನೆಗಳನ್ನು ಶಿಕ್ಷಣದಲ್ಲಿ ತುಂಬಲು ಹೊರಟಿದೆ. ಸಂಸತ್‌ನಲ್ಲಿ ಚರ್ಚಿಸದೇ, ಪೋಷಕರು ಮತ್ತು ವಿದ್ಯಾರ್ಥಿಗಳ ಅಭಿಪ್ರಾಯ ಪಡೆಯದೇ ಏಕಮುಖವಾಗಿ ಶಿಕ್ಷಣ ನೀತಿ ಜಾರಿಗೊಳಿಸುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ ಆಗಲಿದೆ ಎಂದು ಒಕ್ಕೂಟದ ಪದಾಕಾರಿಗಳು ಅಸಮಾಧನ ವ್ಯಕ್ತಪಡಿಸಿದರು.
ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್‍ಯದರ್ಶಿ ರೋಹಿತ್ ಸಿಂಗ್, ರಾಜ್ಯ ಕಾರ್‍ಯದರ್ಶಿ ಪ್ರಶಾಂತ್ ಆರ್ಯ, ಶಿಕ್ಷಣ್, ಸೈಕ್ಲೈನ್, ಶಶಿ, ತೇಜಸ್, ಕುಮಾರ್, ಶಾಶಂಕ್ ಇನ್ನಿತರರು ಇದ್ದರು.