ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೀವ್ ಅವರಿಗೆ ಮುಡಾ ಕಚೇರಿಯಲ್ಲಿ
ಸಿಎ ನಿವೇಶನವನ್ನು ನಮ್ಮ ಸಂಘಕ್ಕೆ ಮಂಜೂರು ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು ನಂತರ ಡಿಸ್ಟ್ರಿಕ್ಟ್ ಫೋಟೊಗ್ರಾಫರ್ ಹಾಗು ವಿಡಿಯೋ ಗ್ರಾಫರ್ ಅಸೋಷಿಯೇಷನ್ ಅಧ್ಯಕ್ಷ ರಾದ ದಡ್ಡಳ್ಳಿ ಮಹೇಶ್ ನೇತೃತ್ವದಲ್ಲಿ ನಿರ್ದೇಶಕರು ಮಾತನಾಡಿ
ಎಂಡಿ ಪಿ ಬಿ ಎ ಸಂಘವು ಮೈಸೂರು ಜಿಲ್ಲಾದ್ಯಂತ 23ವರ್ಷಗಳಿಂದ ಸಂಘದ ಸದಸ್ಯರಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮ ಮತ್ತು ಸಾಮಾಜಿಕ ಸೇವೆ ಸಲ್ಲಿಸುತ್ತಾ ಬಂದಿದ್ದು ಈ ದಿನಕ್ಕೆ ನಮ್ಮ ಸಂಘದಲ್ಲಿ 1200 ಸದಸ್ಯರ ಸಂಖ್ಯೆ ಇದ್ದು ಇದುವರೆಗೂ ನಮ್ಮ ಕಾರ್ಯಚಟುವಟಿಕೆಗಳನ್ನು ಬಾಡಿಗೆ ಪಡೆದು ಕಚೇರಿ ಮತ್ತು ಸಂಘದ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ
ದಯಮಾಡಿ ನಮ್ಮ ಸಂಘಕ್ಕೆ ಕಡಿಮೆ ದರದಲ್ಲಿ ಅವಶ್ಯಕತೆ ಕಡಿಮೆ ಅಳತೆಯ ನಿವೇಶನವನ್ನು ಸಂಘಕ್ಕೆ ನೀಡುವಂತೆ ಮನವಿ ಕೋರಿದರು
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನವೀನ್ ಕುಮಾರ್ ,ಡಿಸ್ಟ್ರಿಕ್ಟ್ ಫೋಟೊಗ್ರಾಫರ್ ಹಾಗು ವಿಡಿಯೋಗ್ರಾಫರ್ ರ್ಅಸೋಸಿಯೇಶನ, ಅಧ್ಯಕ್ಷರಾದ ದಡದಹಳ್ಳಿ ಮಹೇಶ್ ನೇತೃತ್ವದಲ್ಲಿ ನಿರ್ದೇಶಕರಾದ ಸುದರ್ಶನ್ ,ಚೈತನ್ಯ , ಮಂಜುನಾಥ್ ,ಪ್ರಮೋದ್ ಉಪಸ್ಥಿತರಿದ್ದರು