ಮೈಸೂರು: ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವೈದ್ಯಾಧಿಕಾರಿ ಮೃತ ಪಟ್ಟ ಘಟನೆ ಹುಣಸೂರು ಸಮೀಪದ ಚಿಲ್ಕುಂದ ಗ್ರಾಮದ ಬಳಿ ನಡೆದಿದೆ.
ಕೊಡಗಿನ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರವೀಂದ್ರನ್ ಮೃತಪಟ್ಟ ದುರ್ದೈವಿ. ಇವರು ಕರ್ತವ್ಯ ನಿಮಿತ್ತ ತಮ್ಮ ಕಾರಿನಲ್ಲಿ ಮೈಸೂರಿನಿಂದ ಸೋಮವಾರಪೇಟೆಗೆ ತೆರಳುತ್ತಿದ್ದರು ಈ ವೇಳೆ ಹುಣಸೂರು ಬಳಿಯ ಚಿಲ್ಕುಂದ ಗ್ರಾಮದ ಸಮೀಪ ಕಾರು ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಗಂಭೀರ ಗಾಯ ಗೊಂಡಿದ್ದರು.
ಕೂಡಲೇ ಅವರನ್ನು ಮೈಸೂರಿನ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಅವರೊಂದಿಗೆ ಕಾರಿನಲ್ಲಿ ಸಹೋದರಿ, ಪತ್ನಿ ಹಾಗೂ ಪುತ್ರ ಪ್ರಯಾಣಿಸುತ್ತಿದ್ದು, ಸಹೋದರಿಗೆ ಗಾಯಗಳಾಗಿದ್ದರೆ, ಪತ್ನಿ ಮತ್ತು ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ಡಾ.ರವೀಂದ್ರನ್ ಅವರು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕೊರೊನಾದಿಂದ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.