ಈ ಭಾರಿ ದಸರಾಗೆ ಚೈತ್ರಾ , ಲಕ್ಷ್ಮಿ , ಪಾರ್ಥಸಾರಥಿ ಭಾಗಿ

ಗುಂಡ್ಲುಪೇಟೆ :- ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಬಂಡೀಪುರದ ಚೈತ್ರಾ , ಲಕ್ಷ್ಮಿ , ಪಾರ್ಥಸಾರಥಿ ಆನೆಗಳು ಆಗಮಿಸುವ ಸಾಧ್ಯತೆ ಇದ್ದು , ದಸರೆ ಜಂಬೂಸವಾರಿಗೆ ಪ್ರಾಥಮಿಕ ಹಂತದ ಆಯ್ಕೆಯಲ್ಲಿ ಈ ಆನೆಗಳನ್ನು ಗುರುತಿಸಲಾಗಿದೆ .

ತಾಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಂದು ದಸರೆಯಲ್ಲಿ ಭಾಗವಹಿಸುವ ಆನೆಗಳ ಆಯ್ಕೆ ಪ್ರಕ್ರಿಯೆ ನಡೆಯಿತು . ಇಲ್ಲಿನ ರಾಂಪುರ ಆನೆ ಶಿಬಿರಕ್ಕೆ ಮೈಸೂರು ಡಿಸಿಎಫ್ ಕರಿಕಾಳನ್ ಭೇಟಿ ನೀಡಿ , ಚೈತ್ರಾ , ಲಕ್ಷ್ಮಿ ಎಂಬ 2 ಹೆಣ್ಣು , ಪಾರ್ಥಸಾರಥಿ ಎಂಬ 1 ಗಂಡು ಆನೆಗಳನ್ನು ಪ್ರಾಥಮಿಕ ಹಂತದಲ್ಲಿ ಆಯ್ಕೆ ಮಾಡಿದ್ದಾರೆ . ಸೆ .3 ರಂದು ನಡೆಯಲಿರುವ ದಸರಾ ಉನ್ನತಮಟ್ಟದ ಸಮಿತಿ ಸಭೆಯಲ್ಲಿ ಈ ಆಯ್ಕೆ ಕುರಿತು ಚರ್ಚೆ ನಡೆಯಲಿದ್ದು , ಅಲ್ಲಿ ಅಂತಿಮವಾಗಿ ಆಯ್ಕೆಗೊಳ್ಳುವ ಆನೆಗಳು ದಸರಾ ಮಹೋತ್ಸವದಲ್ಲಿ ಭಾಗಿ ಆಗಲಿವೆ .

Leave a Reply

Your email address will not be published. Required fields are marked *