ಭಾರತದ ರಕ್ಷಣಾ ವೆಚ್ಚದಲ್ಲಿ ಆದ ಬದಲಾವಣೆ….

2008 – 1,05,600 ಕೋಟಿ

2009 -1,41,703 ಕೋಟಿ

2010 – 1,47,377 ಕೋಟಿ

2011 – 2,13,673 ಕೋಟಿ

2012 – 2,30,642 ಕೋಟಿ

2013 – 2,54,133 ಕೋಟಿ

2014 – 2,85,005 ಕೋಟಿ

2015 – 2,93,920 ಕೋಟಿ

2016 – 3,51,550 ಕೋಟಿ

2017 – 3,74,004 ಕೋಟಿ

2018 – 4,04,365 ಕೋಟಿ

2019 – 4,48,820 ಕೋಟಿ

2020 – 4,71,378 ಕೋಟಿ

2021 – 4,78,196 ಕೋಟಿ

ಕೊರೊನೋದ ಆರ್ಥಿಕ ಹೊಡೆದ ಹೊರತಾಗಿಯೂ ಭಾರತದ ರಕ್ಷಣಾ ವೆಚ್ಚ ಬರೋಬ್ಬರಿ 4.78 ಲಕ್ಷ ಕೋಟಿಗೆ ಏರಿದೆ. ಹೇಳಿಕೇಳಿ ಅಫ್ಘಾನಿಸ್ಥಾನದ ರಕ್ಷಣಾ ವೆಚ್ಚ 2020ರಲ್ಲಿ ಕೇವಲ 1200 ಕೋಟಿ. ಇದಕ್ಕಿಂತ ಜಾಸ್ತಿ ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಗೆ ಖರ್ಚು ಮಾಡುತ್ತದೆ. ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಬಾರದು ಹೌದು ಸಾಮಾನ್ಯ ಜನರಿಗೆ ಇದರಿಂದ ಹೊರೆಯಾಗುತ್ತದೆ. ಆದರೆ ಅಲ್ಲಿ ಸಂಗ್ರಹವಾದ ತೆರಿಗೆ ಹಣ ಎಲ್ಲಿಗೆ ಹೋಗುತ್ತದೆ ಅಂತ ನೀವು ಕೇಳಿದರೆ ಉತ್ತರ ಮೇಲಿದೆ. ದೇಶದ ರಕ್ಷಣೆ ಮೊದಲು ಆಮೇಲೆ ಉಳಿದದ್ದು. 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ರಕ್ಷಣಾ ವೆಚ್ಚದಲ್ಲಿ ಆದ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿ.

ಹೌದು ನಮ್ಮಲ್ಲಿ ಪೆಟ್ರೋಲ್ 100 ರೂಪಾಯಿ ದಾಟಿದೆ. ಅದೇ ಅಫ್ಘಾನಿಸ್ತಾನದಲ್ಲಿ 49.04 ರೂಪಾಯಿಗೆ ಸಿಗುತ್ತದೆ. ಕಡಿಮೆಗೆ ಪೆಟ್ರೋಲ್ ಬೇಕು ಅನ್ನುವವರು ಕ್ಯಾನ್, ಚೊಂಬು ಹಿಡ್ಕೊಂಡು ಅಲ್ಲಿಗೆ ಹೋಗಬಹುದು. ಅಲ್ಲಿ ಪೆಟ್ರೋಲ್ ಏನೋ ಕಡಿಮೆಗೆ ಸಿಗುತ್ತದೆ ಆದರೆ ಆ ಪೆಟ್ರೋಲ್ ಹಾಕಿ ರಸ್ತೆಯಲ್ಲಿ ಕಾರು, ಬೈಕ್ ಓಡಿಸಲು ತಾಲಿಬಾನ್ ಉಗ್ರರು ಬಿಡಬೇಕಲ್ವಾ? ಅವರು ಗೌರವಯುತವಾಗಿ ಬದಕಲು ಬಿಡಬೇಕಾಲ್ಲ?

ಷರಿಯಾ ಕಾನೂನು ಬೇರೆ ಜಾರಿ ಮಾಡಲು ತಾಲಿಬಾನ್ ಉಗ್ರರು ಹೊರಟಿದ್ದಾರೆ. ಕೈ ಕಾಲು ಕಾಣದಂತೆ ಮಹಿಳೆಯರು ಬುರ್ಖಾ ಧರಿಸಬೇಕು. ಮಹಿಳೆಯರು ಮನೆಯಿಂದ ಹೊರಗಡೆ ಬರುವಂತಿಲ್ಲ. ಶಾಲೆಗೆ ಹೋಗಿ ವಿದ್ಯಾಭ್ಯಾಸ ಪಡೆಯುವಂತಿಲ್ಲ. ದುಡಿಮೆಗೆ, ವಸ್ತುಗಳನ್ನು ಖರೀದಿ ಮಾಡಲು ಹೊರಗಡೆ ಬರುವಂತಿಲ್ಲ ಮನೆಯಲ್ಲೇ ಬಿದ್ದಿರಬೇಕು. ಪುರುಷರು ಜೊತೆಗಿಲ್ಲ ಅಂದ್ರೆ ಎಲ್ಲೂ ಹೋಗುವಂತಿಲ್ಲ. ಪಾಶ್ಚಿಮಾತ್ಯ ಸಿನೆಮಾ ನೋಡುವಂತಿಲ್ಲ ಹಾಡು ಕೇಳುವಂತಿಲ್ಲ. ಮತದಾನದ ಹಕ್ಕು ಕೂಡ ಇಲ್ಲ. ಈ ರೀತಿಯ ಬದುಕು ಬೇಕಾ? ಇದು ಜೀವ ಇದ್ದೂ ಸತ್ತಂತೆ ಅಲ್ಲವೇ?

ತೆರಿಗೆ ವಿಧಿಸಿ ದೇಶದ ಭದ್ರತೆಗೆ ಸರ್ಕಾರ ಎಷ್ಟು ಖರ್ಚು ಹೆಚ್ಚು ಮಾಡಿದರೂ ಅದು ನಮ್ಮ ಒಳ್ಳೆಯದಕ್ಕಾಗಿ ಅನ್ನೋದನ್ನು ನಾವು ಯಾವತ್ತಿಗೂ ಮರೆಯಬಾರದು. ಸುತ್ತಲೂ ವೈರಿಗಳೇ ತುಂಬಿರುವಾಗ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಬೆಂಬಲ ನಮ್ಮ ಭಾರತ ಸರ್ಕಾರಕ್ಕೆ ಅತ್ಯಗತ್ಯ…

– ಸಚಿನ್ ಜೈನ್ ಹಳೆಯೂರ್

Leave a Reply

Your email address will not be published. Required fields are marked *