ಸಿಎಂ ಬಿಎಸ್‌ವೈಗೆ ಕೊಡಗು ವೀರಶೈವ ಮಹಸಭಾ ಬೆಂಬಲ

ಲಮಡಿಕೇರಿ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಎಸ್‌ವೈಗೆ ಕೊಡಗು ವೀರಶೈವ ಮಹಸಭಾ ಬೆಂಬಲ ನೀಡಿದೆ. ಬಿ.ಎಸ್‌ಯಡಿಯೂರಪ್ಪನವರೇ ಕರ್ನಾಟಕದ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಸಿಎಂ ಪದಚ್ಯುತಿಗೊಳಿಸುವಂತಿಲ್ಲ ಎಂದು ವೀರಶೈವ ಮಹಸಭಾ ಜಿಲ್ಲಾಧ್ಯಕ್ಷ ಶಿವಪ್ಪ ಒತ್ತಾಯಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಸಿಎಂ ಬದಲಾವಣೆ ಮಾಡಿದರೆ ರಾಜಕೀಯ ಅರಾಜಕತೆ ಉಂಟಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಿಎಂ ಬದಲಾವಣೆಗೆ ಹೈಕಮಾಂಡ್‌ ಕಾರಣ ಹೇಳುತ್ತಿಲ್ಲ. ಹೈಕಮಾಂಡ್ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಯಡಿಯೂರಪ್ಪನವರಂತೆ ಪಕ್ಷ ಸಂಘಟನೆ ಮಾಡುವವರು ಸಮುದಾಯದಲ್ಲಿ ಬೇರೊಬ್ಬರಿಲ್ಲ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಿದರೆ ಇತರೆ ನಾಯಕರು ಪಕ್ಷದಿಂದ ವಿಮುಖರಾಗಬಹುದು. ಆದ್ದರಿಂದ ಯಡಿಯೂರಪ್ಪನವರನ್ನೇ ಸಿಎಂ ಆಗಿ ಮುಂದುವರೆಸಬೇಕೆಂದು ಆಗ್ರಹಿಸಿದರು.

Leave a Reply

Your email address will not be published. Required fields are marked *