25.04.2022ರ ಶ್ರೀ, ಲಕ್ಷ್ಮಿ ವರಹಾ ಸ್ಟಾಮಿಯ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ

ಮೇಷ ರಾಶಿ

ನಿಮ್ಮಲ್ಲಿನ ಮುನಿಸಿಕೊಳ್ಳುವ ಸ್ವಭಾವವು ಕಷ್ಟಗಳನ್ನು ಹೆಚ್ಚು ಮಾಡುತ್ತದೆ. ಆದಷ್ಟು ಪ್ರೀತಿಯಿಂದ ಮುಂದೆ ಸಾಗುವುದು ಸುಂದರ ಜೀವನ ಕಟ್ಟಿಕೊಳ್ಳುವುದನ್ನು ಕಲಿಯುವುದು ಉತ್ತಮ.

ವೃಷಭ ರಾಶಿ

ಸ್ವತಂತ್ರ ಜೀವಿಯಾದ ನಿಮಗೆ ಪಂಜರದಲ್ಲಿ ಕೂಡಿ ಹಾಕಲು ಪ್ರಯತ್ನ ನಡೆಯುತ್ತಿದೆ, ನಿಮ್ಮ ವಿಚಾರಗಳಿಗೆ, ನಿಮ್ಮ ಕಾರ್ಯದಲ್ಲಿ ಅಥವಾ ನಿಮ್ಮಲ್ಲಿನ ವ್ಯಕ್ತಿತ್ವವನ್ನು ತಮ್ಮ ಉಪಯೋಗಕ್ಕಾಗಿ ಉಪಯೋಗಿಸಿ ಕೊಳ್ಳುವವರು ಇದ್ದಾರೆ ಎಚ್ಚರಿಕೆ ಇರಲಿ.

ಸ್ವಂತ ಉದ್ಯಮ ಪ್ರಾರಂಭ ಮಾಡುವ ನಿಮ್ಮ ಬಯಕೆಗೆ ಆಘಾತಕಾರಿ ಆದಂತಹ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಿಮ್ಮ ಕಾರ್ಯ ನಾಶ ಮಾಡಬಹುದಾಗಿದೆ ಯಾವುದೇ ಕಾರಣಕ್ಕೂ ಭಯ ಪಡದಿರಿ ಗ್ರಹಗತಿಗಳ ಶುಭ ಫಲಗಳಿಂದ ಗೆಲುವು ನಿಮ್ಮದೇ ಆಗಲಿದೆ.

ಮಿಥುನ ರಾಶಿ

ನಿಮ್ಮ ಪತ್ನಿ ಮಾತುಗಳು ನಿಮಗೆ ಸ್ಪೂರ್ತಿ ನೀಡುತ್ತದೆ ಅವರ ಬಯಕೆಗಳನ್ನು ಪೂರ್ಣಗೊಳಿಸುವರಿಂದ ನಿಮ್ಮ ಅದೃಷ್ಟ ಕುಲಾಯಿಸುತ್ತದೆ. ತುಂಬಿದ ಕೊಡ ತುಳುಕುವುದಿಲ್ಲ ಎಂಬಂತೆ ನಿಮ್ಮ ಉತ್ತಮ ಜ್ಞಾನ ಹಾಗೂ ವಿನಯತೆಯಿಂದ ಅತ್ಯುತ್ತಮವಾದದ್ದನ್ನು ಪಡೆದುಕೊಳ್ಳುವ ಸುವರ್ಣ ಅವಕಾಶ ಲಭಿಸಲಿದೆ.

ಸಿಂಹ ರಾಶಿ

ನಿಮ್ಮ ಕೆಲಸದ ನಿಷ್ಠೆಯೂ ಮತ್ತಷ್ಟು ಹೆಚ್ಚಿನ ಜವಾಬ್ದಾರಿ ತಂದು ಕೊಡುತ್ತದೆ. ಹಿರಿಯರು ನಿಮ್ಮ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಅವರ ಪ್ರತಿಯೊಂದು ಆಶಾ ಕಿರಣ ನೀವೇ ಆಗಿರುವಿರಿ. ಕೆಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಸಂದಿಗ್ಧ ಪರಿಸ್ಥಿತಿಗೆ ಸಿಲುಕುವ ನೀವು ಮಾನಸಿಕವಾಗಿ ತೊಂದರೆ ಅನುಭವಿಸುವ ಸ್ಥಿತಿ ಇದೆ. ಆದಷ್ಟು ಬೇರೆಯವರ ವಿಚಾರದಲ್ಲಿ ಯೋಚಿಸಿ ಕೈ ಹಾಕಿ.

ಕನ್ಯಾ ರಾಶಿ

ಇಂದು ನೀವು ನಿಜವಾದ ಆನಂದ ಏನು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತೀರಿ. ಕುಟುಂಬದ ಜೊತೆ ಸಂತೋಷ ಕೂಟಗಳಲ್ಲಿ ಹಾಗೂ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮಲ್ಲಿ ಚೈತನ್ಯ ಹೆಚ್ಚಾಗುತ್ತದೆ. ಭೂಮಿಗೆ ಸಂಬಂಧಪಟ್ಟಂತಹ ಹೂಡಿಕೆಗಳು ನಿಮಗೆ ಅತಿ ಹೆಚ್ಚಿನ ಲಾಭ ತಂದುಕೊಡುತ್ತದೆ. ಕುಟುಂಬದ ಸ್ಥಿತಿಗತಿಗಳು ಹಾಗೂ ಅವರ ಕಷ್ಟಗಳನ್ನು ನಿಮ್ಮದಲ್ಲ ಎಂಬ ಭಾವನೆ ನಿಮ್ಮಲ್ಲಿ ಇದ್ದರೆ ಅದನ್ನು ತೆಗೆದು ಹಾಕಿ.

ತುಲಾ ರಾಶಿ

ದೃಢ ಮನಸ್ಥಿತಿಯಿಂದ ಮಾಡಿದ ಕಾರ್ಯಗಳು ಬಲುಬೇಗನೆ ಯಶಸ್ಸು ನೀಡುವುದು ಖಚಿತ. ನಿಮ್ಮ ಯೋಜನೆಗಳಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪವನ್ನು ತೆಗೆದು ಹಾಕಲು ಪ್ರಯತ್ನಿಸಿ. ಪಾಲುದಾರಿಕೆ ವ್ಯವಹಾರ ಮಾಡುವುದು ಬೇಡ. ವ್ಯಾಪಾರದಲ್ಲಿ ಈ ದಿನ ಉತ್ತಮ ವಹಿವಾಟು ನಿರೀಕ್ಷಿಸುವ ಸಾಧ್ಯತೆ ಇದೆ. ಆರ್ಥಿಕವಾಗಿ ಪ್ರಗತಿದಾಯಕ ಬೆಳವಣಿಗೆ ಕಂಡುಬಂದರು ಅನಗತ್ಯ ಖರ್ಚು ಗಳಿಂದ ಹೊರೆ ಹೆಚ್ಚಾಗಲಿದೆ. ಮಕ್ಕಳಿಗೆ ವಿದ್ಯೆ ಹಾಗೂ ಬದುಕಿನ ಪಾಠವನ್ನು ಕಲಿಸಿ ಅವರಿಗೆ ಹಣ ನೀಡುವುದು ಒಳ್ಳೆಯದಲ್ಲ.

ವೃಶ್ಚಿಕ ರಾಶಿ

ಜಮೀನು ಖರೀದಿಯ ಬಯಕೆಗೆ ಸಕಾರಾತ್ಮಕವಾದ ಸ್ಪಂದನೆ ಸಿಗಲಿದೆ. ಉದ್ಯೋಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಾಗಬಹುದು, ಜಾಣ್ಮೆಯ ಮಾತುಗಳನ್ನಾಡುವುದರಿಂದ ಉದ್ಯೋಗದಲ್ಲಿನ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.

ಧನುಸ್ಸು ರಾಶಿ

ಮಾಡುವ ಕೆಲಸದಿಂದ ಪ್ರಶಂಸೆ ಸಿಗಲಿದೆ. ನಿಮ್ಮ ಸಹಕಾರವನ್ನು ಹಲವರು ಬಯಸಿ ಬರಲಿದ್ದಾರೆ. ಹಣಕಾಸಿನ ವಿಷಯದಲ್ಲಿ ಜಾಗೃತೆ ಇರಲಿ. ನೀವು ಮಕ್ಕಳ ಬೆಳವಣಿಗೆಗೆ ನೀವು ಸಹ ಶ್ರಮ ಪಡಬೇಕಾಗಿದೆ. ಆತ್ಮೀಯರು ನಿಮ್ಮ ದೊಡ್ಡಮಟ್ಟದ ಕೆಲಸಗಳಿಗೆ ಸಹಾಯದ ಹಸ್ತ ನೀಡಲಿದ್ದಾರೆ. ಸೌಂದರ್ಯದ ಆರಾಧನೆಯನ್ನು ಮಾಡುವ ತವಕ ನಿಮ್ಮಲ್ಲಿ ಕಾಣಬಹುದು. ಯೋಜನೆಯ ವಿಷಯವಾಗಿ ಉತ್ತಮ ವಾದ ಮಂಡನೆ ಮಾಡಲಿದ್ದೀರಿ.

ಮಕರ ರಾಶಿ

ನಿಮ್ಮ ವಿಷಯದಲ್ಲಿ ಅನಗತ್ಯ ತೊಂದರೆ ನೀಡುವವರನ್ನು ಈ ದಿನ ನಿಮ್ಮಿಂದಲೇ ಮೆಚ್ಚುಗೆ ಮಾತನಾಡಿ ಇದು ನಿಮ್ಮ ಸಮಸ್ಯೆ ನಿವಾರಣೆ ಮಾಡುತ್ತದೆ. ಪ್ರವಾಸದ ಚಿಂತನೆ ಮಾಡುವ ಸಾಧ್ಯತೆ ಇದೆ. ನಿಮ್ಮ ನಯವಾದ ವ್ಯಕ್ತಿತ್ವದಿಂದ ಸಮಸ್ಯೆಗಳನ್ನು ಪರಿಹಾರ ಮಾಡುವಿರಿ. ಪ್ರೇಮದ ಬಗ್ಗೆ ಆಸಕ್ತಿ ನಿಮ್ಮಲ್ಲಿ ಮೂಡುವುದು ಕಂಡುಬರುತ್ತದೆ. ದೈನಂದಿನ ಜೀವನಕ್ಕೆ ಅಗತ್ಯವಿರುವ ಕೆಲವು ಶೈಕ್ಷಣಿಕ ತರಬೇತಿಗಳನ್ನು ಪಡೆಯಲು ಮುಂದಾಗುತ್ತೀರಿ.

ಕುಂಭ ರಾಶಿ

ಹೊಸದಾಗಿ ಬರುವ ಕೆಲಸಕ್ಕೆ ನೀವು ಆತುರದಿಂದ ವರ್ತಿಸುವುದು ಬೇಡ ಯೋಜನೆಯ ಸಮಗ್ರವಾಗಿ ಅಧ್ಯಯನ ಮಾಡಿ ಮತ್ತು ವಿಳಂಬಮಾಡದೆ ಪಡೆದುಕೊಳ್ಳಿ. ಈ ದಿನ ನಿಮ್ಮಿಂದ ಗೃಹ ಕಾರ್ಯಗಳು ನಡೆಯಲಿದೆ, ಇದು ಮಡದಿಯ ಮನಸ್ಸಿಗೆ ಸಂತೋಷ ನೀಡುತ್ತದೆ.

ಮೀನ ರಾಶಿ

ಕುಟುಂಬದಲ್ಲಿ ಜೀವನದ ಏಳಿಗೆಗಾಗಿ ಚರ್ಚೆಗಳನ್ನು ನಡೆಸುವಿರಿ. ವ್ಯವಹಾರದಲ್ಲಿ ಉತ್ತಮ ಮಾತುಗಳು ಮತ್ತು ನೈಜತೆಯನ್ನು ಬೆಳೆಸಿಕೊಳ್ಳಿ. ಉದ್ಯೋಗ ಮಾಡಲು ಅವಕಾಶಗಳು ಹೆಚ್ಚಳವಾಗುತ್ತದೆ. ಈ ದಿನ ಸ್ನೇಹಮಯವಾಗಿದ್ದು ಹಲವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವಿರಿ. ನೆನೆಗುದಿಗೆ ಬಿದ್ದಿರುವ ಕಾರ್ಯವನ್ನು ಸಾಕಾರಗೊಳಿಸಲು ನಿಮ್ಮಿಂದ ಪ್ರಯತ್ನ ನಡೆಯಲಿದೆ. ಸಂಬಂಧಿಕರ ಭೇಟಿ ಹೊಸ ಹುಮ್ಮಸ್ಸು ಅಥವಾ ಆಲೋಚನೆ ತಂದುಕೊಡುತ್ತದೆ.

ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ಪಂಚಮುಖಿ ಆರಾಧಕರು

ಪಂ, ಸಮರ್ಥ್ ಜೋಷಿ

ನಂಬರ್ 1 ವಶೀಕರಣ ಸ್ಪೆಷಲಿಸ್ಟ್

 ಸ್ತ್ರೀ  ಮತ್ತು ಪುರುಷ ವಶೀಕರಣ ಮಾಡಿಕೊಡುತ್ತಾರೆ ಸಂಪರ್ಕಿಸಿ 9448077525

 ನಂಬರ್ ಒನ್ ವಶೀಕರಣ ಸ್ಪೆಷಲಿಸ್ಟ್  ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ  ಧನವಶ ವ್ಯಾಪಾರ ಅಭಿವೃದ್ಧಿ ಅತ್ತೆ ಸೋಸೆ  ಪ್ರೀತಿ-ಪ್ರೇಮ ಕಲಹ ಮನೆಯಲ್ಲಿ ಅಶಾಂತಿ ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇವಲ ಮೂರೇ ದಿನಗಳಲ್ಲಿ ಕೇರಳಿಯ ಅದರಣ ತ್ರಿಕೂಟ ಸಂಗಮ ವೇದಗಳ ನಾಗಾಸಾಧು ಮೂಲಕ ಮತ್ತು ಉಚ್ಚಂಗಿ ದೇವಿಯ ಪೂಜಾಫಲ ಮೂಲಕ ನಿಮ್ಮ ಸಮಸ್ಯೆಗಳು ಎಷ್ಟೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಸಿದ್ಧ ಮೊಬೈಲ್ .9448077525