ವಾರಾಂತ್ಯ ಕರ್ಫ್ಯೂ ನಡುವೆಯೂ ದ್ವಿಶತಕ ಬಾರಿಸಿದ ಕೊರೊನಾ!

ಮೈಸೂರು: ಜಿಲ್ಲೆಯಲ್ಲಿ ಶನಿವಾರ ವಾರಾಂತ್ಯ ಕರ್ಫ್ಯೂ ನಡುವೆಯೂ 203 ಕೊರೊನಾ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ ಮೈಸೂರು ನಗರದ 3 ಕ್ಲಸ್ಟರ್‌ಗಳಲ್ಲಿ 250 ಮಂದಿಗೆ ನಡೆಸಿದ ಮಾದರಿ ಪರೀಕ್ಷೆಯಲ್ಲಿ 18 ಮಂದಿಗೆ ಪಾಸಿಟಿವ್ ಇರುವುದು ಕಂಡುಬಂದಿದೆ.


ನಗರದ ವಾಣಿವಿಲಾಸ ಮೊಹಲ್ಲಾದಲ್ಲಿ ನಡೆಸಿದ 5 ಮಾದರಿ ಪರೀಕ್ಷೆಯಲ್ಲಿ ಐದೂ ಪಾಸಿಟಿವ್ ಆಗಿದೆ. ಇನ್ನೂ ವಿವೇಕಾನಂದ ವೃತ್ತದ ಕ್ಲಸ್ಟರ್‌ನಲ್ಲಿ 50 ಪರೀಕ್ಷೆಗಳಲ್ಲಿ 9 ಹಾಗೂ ನಜರಬಾದ್‌ನ ವಾಣಿವಿಲಾಸ ಶಾಲೆಯಲ್ಲಿ 249 ಮಂದಿಗೆ ನಡೆಸಿದ

ಪರೀಕ್ಷೆಯಲ್ಲಿ 7 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿದೆ. ಇನ್ನು ಶನಿವಾರ 15 ಮಂದಿ ಗುಣಮುಖರಾಗಿದ್ದಾರೆ.


ಮೈಸೂರು ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಳ ಸಂಖ್ಯೆ 1,80,932ಕ್ಕೆ ಏರಿಕೆಯಾಗಿದ್ದು, ಅವರಲ್ಲಿ ಒಟ್ಟು 1,77,832 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 2,428 ಮಂದಿ ಮೃತಪಟ್ಟಿದ್ದು,672 ಮಂದಿ ಸಕ್ರೀಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. ​