ಮೈಸೂರು: ಕೆ.ಆರ್.ಕ್ಷೇತ್ರದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಅಭಿಯಾನ – ನಿಮ್ಮ ಆರೋಗ್ಯದ ಕಡೆ ನಮ್ಮ ಹೆಜ್ಜೆ ಕಾರ್ಯಕ್ರಮವು ಜೂ 25ರಂದು ಶುಕ್ರವಾರ ಹಾಗೂ 26 ರ ಶನಿವಾರ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ನಡೆಯಲಿದೆ.
ಕೆ.ಆರ್.ಕ್ಷೇತ್ರದ ವಾರ್ಡ್ ಗಳಲ್ಲಿ ಜೂ. 16 ಮತ್ತು 17 ರಂದು ನೋಂದಣಿ ಮಾಡಿಕೊಂಡವರು ಲಸಿಕೆ ಹಾಕಿಸಿಕೊಳ್ಳಬಹುದಾಗಿದ್ದು, ಈ ಕುರಿತ ಮಾಹಿತಿ ಇಲ್ಲಿದೆ.
ಕ್ಷೇತ್ರದ ವಾರ್ಡ್ 51 – ನಟರಾಜ ಶಾಲೆ, ಶಂಕರಮಠ ರಸ್ತೆ, ವಾರ್ಡ್ 52 – ಪೊಲೀಸ್ ಭವನ, ಕಾರಂಜಿ ಕೆರೆ ಎದುರು, ವಾರ್ಡ್ 64 – ಬಿ.ಜಿ.ಎಸ್ ಶಾಲೆ, ಅರವಿಂದ ನಗರ, ವಾರ್ಡ್ 65 – ಚೈತ್ರಾ ಪದವಿ ಪೂರ್ವ ಕಾಲೇಜು, ಶಿವಪುರದಲ್ಲಿ ನೀಡಲಾಗುವುದು. ಜೂ.26ರ ಶನಿವಾರದಂದು ವಾರ್ಡ್ 43 – ಹೇಮಾವತಿ ಶಾಲೆ, ಟಿ.ಕೆ ಬಡಾವಣೆ, ವಾರ್ಡ್ 55 – ಸೈಂಟ್ ಮೇರೀಸ್, ಚಾಮುಂಡಿಪುರಂ, ವಾರ್ಡ್ 61 – ಒಕ್ಕಲಿಗ ಹಾಸ್ಟಲ್, ವಿದ್ಯಾರಣ್ಯಪುರಂ, ವಾರ್ಡ್ 62 – ಮಹರ್ಷಿ ಪಬ್ಲಿಕ್ ಶಾಲೆ, ಜೆಪಿ ನಗರ ನೀಡಲಾಗುವುದಾಗಿ ತಿಳಿಸಲಾಗಿದೆ. ಸಂಬಂಧಿಸಿದ ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ.