ಮೈಸೂರು: ಪಾರ್ಟಿ ಬಳಿಕ ಕೆರೆಯಲ್ಲಿ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಾಮನಕೆರೆಹುಂಡಿ ಗ್ರಾಮದಲ್ಲಿರುವ ಕಾಮನಕೆರೆಯಲ್ಲಿ ನಡೆದಿದೆ.
ಮಣಿಕಂಠ(23) ಎಂಬಾತನೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿ. ಈತ ತನ್ನ ಬಾವನೊಂದಿಗೆ ಮಂಗಳವಾರ ಮಧ್ಯಾಹ್ನ ಪಾರ್ಟಿ ಮಾಡಿದ್ದು ಸಂಜೆ ವೇಳೆ ನೀರಿನಲ್ಲಿ ಈಜುವ ಮನಸ್ಸಾಗಿದೆ. ಹೀಗಾಗಿ ಕಾಮನಕೆರೆ ಹುಂಡಿಯ ಕೆರೆಗೆ ಇಳಿದು ಈಜಾಡಿದ್ದಾನೆ. ಹೀಗೆ ಈಜಾಡುತ್ತಲೇ ಸುಸ್ತಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಕೆರೆಯಲ್ಲಿ ಶವಕ್ಕಾಗಿ ಹುಡುಕಾಟ ನಡೆಸಿದ್ದು, ಸುಮಾರು ಎರಡು ಗಂಟೆಗಳ ಬಳಿಕ ಶವ ಪತ್ತೆಯಾಗಿದೆ. ಶವವನ್ನು ಕೆ,ಆರ್.ಆಸ್ಪತ್ರೆ ಶವಾಗಾರಕ್ಕೆ ಕಳುಹಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಎನ್. ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.