ಆಗಸ್ಟ್ 16ರಂದು ರಸ್ತೆ ಅಪಘಾತಕ್ಕೀಡಾಗಿದ್ದ ಲಾರೆನ್ಸ್, ಅಪಘಾತಕ್ಕೀಡಾದ ವ್ಯಕ್ತಿಯಿಂದ 14 ಜನರಿಗೆ ಜೀವದಾನ 4 ಕಿಡ್ನಿ,2 ಲಿವರ್, 4 ಹೃದಯದ ಕವಾಟ, 4 ಕಾರ್ನಿಯಾ ಗಳು ದಾನ

ಲಾರೆನ್ಸ್ (40) ಹುಣಸೂರಿನ ನಿವಾಸಿ ಅಪಘಾತಕ್ಕೀಡಾದ ವ್ಯಕ್ತಿ ತನ್ನ ಅಂಗಾಂಗಗಳನ್ನು ದಾನ ಮಾಡಿ 14 ಜನರಿಗೆ ಜೀವದಾನ ಮಾಡಿದ್ದಾರೆ. ಹೌದು ಹುಣಸೂರಿನ 40 ವರ್ಷದ ಲಾರೆನ್ಸ್ ಎಂಬ ವ್ಯಕ್ತಿ ಇದೇ ಆಗಸ್ಟ್ 16ರಂದು ರಸ್ತೆ ಅಪಘಾತಕ್ಕೆ ಈಡಾಗಿದ್ದರು. ಲಾರೆನ್ಸ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರ ಆರೋಗ್ಯ ಚೇತರಿಕೆ ಕಾಣಲಿಲ್ಲ. ಹೀಗಾಗಿ ನಿರ್ಣಾಯಕ ಸ್ಥಿತಿಯಲ್ಲಿದ್ದ ಲಾರೆನ್ಸ್ ರವರು ಎರಡು ದಿನಗಳ ಕಾಲ ಜೀವ ಬೆಂಬಲವನ್ನ ಪಡಿಸಿದ್ದರು. ಆದರೆ ಮೂರನೇ ದಿನ ಮೆದುಳಿನ ವೈಫಲ್ಯದಿಂದಾಗಿ ಬ್ರೈನ್ ಡೆಡ್ ಆಗಿದೆ ಎಂದು ಘೋಷಿಸಲಾಯಿತು.
ಆದ್ದರಿಂದಾಗಿ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ 48 ವರ್ಷದ ಶೋಭಾ ಎಂಬುವವರಿಗೂ ಕೂಡ ಮೂರನೇ ದಿನ ಮೆದುಳಿನ ವೈಫಲ್ಯ ಉಂಟಾಗಿ ಬ್ರೈನ್ ಡೆಡ್ ಎಂದು ಘೋಷಿಸಲಾಗಿತ್ತು.

ಮೈಸೂರಿನ ಅಪೊಲೋ, ಜೆಎಸ್ಎಸ್ ಆಸ್ಪತ್ರೆಯ ಪ್ಯಾನಲಿಸ್ಟ್ ವೈದ್ಯರು 1994ರ ಮಾನವ ಅಂಗಾಂಗ ಕಸಿ ಕಾಯ್ದೆ ಅಡಿ ನಿಗದಿಪಡಿಸಿದ ಆಸ್ಪತ್ರೆಯ ಪ್ರೋಟೋಕಾಲ್ ಪ್ರಕಾರ ಕಸಿ ಮಾಡಲಾಯಿತು.
ಇನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ 4 ಮೂತ್ರಪಿಂಡಗಳು, ಎರಡು ಲಿವರ್, 4 ಹೃದಯದ ಕವಾಟ, 4 ಕಾರ್ನಿಯಗಳನ್ನು ದಾನ ಮಾಡುವ ಮೂಲಕ ಒಂದೇ ಬಾರಿ 14 ಜನರಿಗೆ ಜೀವದಾನ ಮಾಡಲಾಯಿತು.