ಮೈಸೂರು: ಪಾರಿವಾಳ ವಿಚಾರದಲ್ಲಿ ಯುವಕರ ನಡುವೆ ಗಲಾಟೆ ನಡೆದಿದ್ದು, ಓರ್ವನ ಹತ್ಯೆಯಾಗಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಗೋವಿಂದರಾಜು (49) ಎಂಬವರೇ ಹತ್ಯೆಗೀಡಾದವರು. ಇಲ್ಲಿನ ಕೆ.ಆರ್.ಮೋಹಲ್ಲಾದ ಕೆ.ಆರ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಣ್ಣದಕೇರಿಯಲ್ಲಿ ಘಟನೆ ನಡೆದಿದ್ದು, ಮನೋಜ್‌ನಾಯಕ್, ಜಯಶಂಕರ್ ಪೊಲೀಸರ ವಶಕ್ಕೆ ಸಿಕ್ಕಿದ್ದು ಉಳಿದ ವಿನಾಯಕ್, ಪ್ರಮೋದ್‌ನಾಯಕ್ ಆರೋಪಿಗಳು ಪರಾರಿಯಾಗಿದ್ದಾರೆ.
ಸಂಕ್ರಾಂತಿ ಹಬ್ಬದ ರಾತ್ರಿಯಂದು ಮೃತ ಗೋವಿಂದರಾಜು ಪುತ್ರ ಉಲ್ಲಾಸ್ ಎಂಬತಾನ 38 ಪಾರಿವಾಳಗಳು ಕಳುವಾಗಿದ್ದವು. ಇದರಿಂದ ಮನನೊಂದ ಉಲ್ಲಾಸ್ ಬೈದುಕೊಂಡು ಸುಮ್ಮನಾಗಿದ್ದನು.
ನಂತರ ಉಲ್ಲಾಸ್ ಮತ್ತು ಮನೆಯವರು. ಎದುರು ಮನೆಯಲ್ಲಿದ್ದ ವಿನಾಯಕ್, ಪ್ರಮೋದ್‌ನಾಯಕ್, ಜಯಶಂಕರ್, ಮನೋಜ್‌ನಾಯಕ್, ವಿಜಯ್(ಕುಪ್ಪ) ಪಾರಿವಾಳ ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಮಂಗಳವಾರ ವಿನಾಯಕ್ ಮನೆಯಲ್ಲಿ ಪಾರಿವಾಳಗಳಿರಬಹುದೆಂದು ಪರಿಶೀಲನೆ ಮಾಡಲು ಉಲ್ಲಾಸ್ ಸ್ನೇಹಿತ ಪ್ರಮೋದ್ ತೆರಳಿದ್ದರು. ಈ ವೇಳೆ ವಿನಾಯಕ್, ಜಯಶಂಕರ್, ಪ್ರಮೋದ್‌ನಾಯಕ್, ಮನೋಜ್‌ನಾಯಕ್ ಪ್ರಮೋದ್ ಮೇಲೆ ಹಲ್ಲೆ ಮಾಡಿದ್ದರು. ಇದನ್ನು ಉಲ್ಲಾಸ್ ತಂದೆ ಗೋವಿಂದರಾಜು ಪ್ರಶ್ನಿಸಿದ್ದರು.
ಇಷ್ಟಕ್ಕೆ ಸುಮ್ಮನಾಗದ ಯುವಕರು ಗೋವಿಂದರಾಜು ಅವರ ಮನೆ ಬಳಿ ಬಂದು ಗೋವಿಂದರಾಜು ಮತ್ತು ಇಬ್ಬರು ಮಹಿಳೆಯರ ಮೇಲೂ ಹಲ್ಲೆ ನಡೆಸಿದ್ದರು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ದೇವರಾಜ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗೋವಿಂದರಾಜು ಮೃತಪಟ್ಟಿದ್ದಾರೆ.
ಈ ಸಂಬಂಧ ನಗರದ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.