ಮಾದರಿ ಸ್ವಚ್ಛ ಗ್ರಾಮ ಪುರಸ್ಕಾರ ಪಡೆದು ದೇಶದ ಗಮನ ಸೆಳೆದಿದ್ದ ಪುಟ್ಟ ಗ್ರಾಮ ಇರಾ ಇದೀಗ ರಾಜ್ಯದಲ್ಲೇ ಮತ್ತೂಂದು ವಿನೂತನ ಪ್ರಯೋಗಕ್ಕೆ ಸಾಕ್ಷಿಯಾಗಿದೆ. ಸಮಗ್ರ ಕೃಷಿ, ಕುರಿ-ಮೇಕೆ ಮತ್ತು ಕತ್ತೆ ಸಾಕಾಣಿಕೆ ಹಾಗೂ ಸ್ಥಳಿಯ ಭಾಗದ ರೈತರಿಗೆ ಅನುಕೂಲವಾಗುವಂತೆ ಮಾದರಿ ತರಬೇತಿ ಕೇಂದ್ರ ನಮ್ಮ ನೆಚ್ಚಿನ ತುಳುನಾಡು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ ಶ್ರೀ ಆಬ್ದುಲ್ ರಜಾಕ್ ಕುಕ್ಕಜೆ, ಮಾಜಿ ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಶ್ರೀ ಚಂದ್ರಹಾಸ್ ಆರ್ ಕರ್ಕೇರ, ಮಾಜಿ ತಾಲುಕ್ ಪಂಚಾಯಿತಿ ಅಧ್ಯಕ್ಷರು, ಶ್ರೀ ಅಗ್ನೇಸ್ ಡಿಸೋಜ, ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಶ್ರೀ ಮೊಹಿದ್ದಿನ್ ಕುನ್ನಿ,
ಉಪಾಧ್ಯಾಕ್ಷರು, ಇರಾ ಗ್ರಾಮ ಪಂಚಾಯತಿ, ಶ್ರೀ ಶ್ರೀನಿವಾಸ್ ಗೌಡ, ಸಂಸ್ಥಾಪಕ ಅಧ್ಯಕ್ಷರು ಮತ್ತು ಎಂ.ಡಿ, (ಐಸಿರಿ) ಮೈಂಡ್ ಓವೆಷನ್ಸ್, ಶ್ರೀಮತಿ ಜಯಶ್ರೀ ಆರ್ ಕರ್ಕೇರ, ಸಹ-ಸಂಸ್ಥಾಪಕರು ಮತ್ತು ನಿರ್ದೇಶಕರು, (ಐಸಿರಿ) ಮೈಂಡ್ ಓವೆಷನ್ಸ್, ಶ್ರೀ ಶ್ರೀಕಾಂತ್ ಕರ್ಕೇರ, ಸಂಸ್ಥಾಪಕ ಅಧ್ಯಕ್ಷರು, ಶಿರೋಹಿ ಫ಼ಾರ್ಮ ಇವರುಗಳ ಸಮ್ಮುಖದಲ್ಲಿ ಸಮಗ್ರ ಕೃಷಿ, ಕುರಿ-ಮೇಕೆ ಮತ್ತು ಕತ್ತೆ ಸಾಕಾಣಿಕೆ ಹಾಗೂ ಉಚಿತ ತರಬೇತಿ ಕೇಂದ್ರವೂ “ಶಿರೋಹಿ ಫ಼ಾರ್ಮ್” ಎಂಬ ನಾಮಂಕಿತದಿಂದ “ಐಸಿರಿ ತಂಡದ” (ಮೈಂಡ್ ಓವಷನ್ಸ್) ಸಹಯೋಗದಲ್ಲಿ ಇಂದು ಲೋಕಾರ್ಪಣೆಗೊಂಡಿದೆ. ಇದು ಒಂದು ವಿಭಿನ್ನ ಮತ್ತು ಹಲವು ವೈಶಿಷ್ಠತೆಯನ್ನು ಒಳಗೊಂಡಿದ್ದು ಇದು ಪ್ರಪ್ರಥಮ ಭಾರಿಗೆ ನಮ್ಮ ಕರ್ನಾಟಕದ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಗಲಿದೆ.
ಈ ಒಂದು ಯೋಜನೆ ಫಲಕಾರಿಯಾಗಲು ನಮ್ಮ ತಂಡಕ್ಕೆ ತುಂಬು ಹೃದಯದ ಸಹಕಾರ ಮತ್ತು ಪ್ರೋತ್ಸಾಹ ನಿಡುತ್ತಿರುವ ನಮ್ಮ ಪ್ರೀತಿಯ ಬಂಟ್ವಾಳ ತಾಲ್ಲೂಕು, ಇರಾ ಗ್ರಾಮದ ಜನತೆಗೆ ಮತ್ತು ಸ್ಥಳಿಯ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಐಸಿರಿ (ಮೈಂಡ್ ಓವೇಷನ್ಸ್ ನ ಅಂಗ ಸಂಸ್ಥೆ) ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ್ ಗೌಡ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು