ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್ ಚಾನೆಲ್ ತೆರೆದ ಒಂದೇ ದಿನದಲ್ಲಿ ಕೋಟ್ಯಂತರ ರೊಕ್ಕ ಸಂಪಾದಿಸಿದ್ದಾರೆ.
ಅವರ ವೀಡಿಯೊಗಳು ಇಲ್ಲಿಯವರೆಗೆ ಸುಮಾರು 60 ಮಿಲಿಯನ್ ವೀಕ್ಷಣೆ ಪಡೆದಿವೆ. ಥಿಂಕ್ಫಿಕ್ನ ವರದಿಯ ಪ್ರಕಾರ, ಪ್ರತಿ 1 ಮಿಲಿಯನ್ ವೀಕ್ಷಣೆಗಳಿಗೆ ಯೂಟ್ಯೂಬರ್ ಸುಮಾರು $6000 ಗಳಿಸುತ್ತಿದ್ದಾರೆ. ಇದರಿಂದಾಗಿ ರೊನಾಲ್ಡೊ ಇಲ್ಲಿಯವರೆಗೆ ಯೂಟ್ಯೂಬ್ನಿಂದಲೇ ಸುಮಾರು 3,60,000 ಡಾಲರ್ ಬಾಚಿದ್ದಾರೆ. ಭಾರತೀಯ ರೂಪಾಯಿ ಪ್ರಕಾರ ಇದು 3 ಕೋಟಿ 2 ಲಕ್ಷ ಆಗುತ್ತದೆ.
ಇದನ್ನು ಹೊರತುಪಡಿಸಿಯೂ ರೊನಾಲ್ಡೊ ಒಟ್ಟು ಗಳಿಕೆಯಲ್ಲೂ ಮುಂದಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಗಳಿಸುವ ಕ್ರೀಡಾಪಟು ಎನಿಸಿಕೊಂಡಿದ್ದಾರೆ. 1 ಬಿಲಿಯನ್ ಡಾಲರ್ಗಿಂತ ಹೆಚ್ಚಿನ ಹಣ ಗಳಿಸಿದ ಮೊದಲ ಫುಟ್ಬಾಲಿಗ ಎನಿಸಿಕೊಂಡಿದ್ದಾರೆ. ವರದಿಗಳಂತೆ, ರೊನಾಲ್ಡೊ ನಿವ್ವಳ ಮೌಲ್ಯ $800 ಮಿಲಿಯನ್ನಿಂದ $950 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.