ಮೈಸೂರು:ವಿದೇಶದಲ್ಲಿ ಮೈಸೂರಿನ ಕ್ರೀಡಾಪಟು ದುರಂತ ಸಾವು.
ಇಟಲಿಯ ರೋಮ್‌ನಲ್ಲಿ ಫುಟ್ಸಲ್ ಪಟು ಯಶವಂತ ಕುಮಾರ್ ಸಾವನ್ನಪ್ಪಿದ್ದನೆ ಎಂದು ತಿಳೀದುಬಂದಿದೆ
ಮೈಸೂರಿನಿಂದ ಅಂತಾರಾಷ್ಟ್ರೀಯ ಲೀಗ್‌ಗೆ ತೆರಳಿದ್ದ ಯಶವಂತ ಕುಮಾರ್‌ರೋಮ್‌ನ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಯಶವಂತ್ ಕುಮಾರ್ (25) ಸಾವು.ಮೈಸೂರಿನ ಎನ್.ಆರ್ ಮೊಹಲ್ಲಾದ ಎನ್ ಕುಮಾರ್ ಹಾಗೂ ರೂಪಾ ದಂಪತಿಯ ಪುತ್ರ ಯಶವಂತ ಕುಮಾರ್.

ಸೀರೀ ಬಿ ಫುಟ್ಸಲ್ ಲೀಗ್‌ಗಾಗಿ ನಾಲ್ಕು ತಿಂಗಳ ಹಿಂದೆ ರೋಮ್‌ಗೆ ತೆರಳಿದ್ದ ಯುವ ಕ್ರೀಡಾಪಟು.ವಿದ್ಯಾವರ್ಧಕ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಂಪ್ಲೀಟ್ ಮಾಡಿದ್ದ ಯಶವಂತ್ ಮೂರು ತಿಂಗಳ ಹಿಂದೆ ಸೀರೀ ಬಿ ಫುಟ್ಬಾಲ್ ಲೀಗ್‌ನಲ್ಲಿ ಕ್ಯಾಲ್ಸಿಯೊ ಸಿ 5ತಂಡಗಳೊಂದಿಗೆ ಭಾಗವಹಿಸಲು ತೆರಳಿದ್ದ

ಆಗಸ್ಟ್ 6ರಂದು ಯಶವಂತ್ ಜಲಪಾತದಲ್ಲಿ ಕಾಲು ಜಾರಿ ಬಿದ್ದುಸಾವು ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿತ್ತು.ಆದರೆ ಪೋಷಕರಿಗೆ ಈ ಮಾಹಿತಿ ಖಚಿತವಾಗಿರಲಿಲ್ಲ ನಂತರ ಪೊಲೀಸರು ಮರುದಿನ ಬೆರಳಚ್ಚಿನ ಆಧಾರದ ಮೇಲೆ ಆತ ಸಾವನ್ನಪ್ಪಿದ್ದಾನೆ ಎಂದು ಧೃಢ ಪಡಿಸಿದ್ದಾರೆ. ಜಲಪಾತದಲ್ಲಿ ಕೊಳೆತ ಸ್ಥಿತಿಯಲ್ಲಿ ಯಶ್ವಂತ್ ಮೃತ ದೇಹ ಸಿಕ್ಕಿತ್ತು.

ಹೀಗಾಗಿ ಅಲ್ಲಿಯೇ ಅಂತ್ಯಕ್ರಿಯೆ ಮಾಡಲಾಗಿದೆ ಯಶವಂತ ಅಸ್ಥಿ ನಿರೀಕ್ಷೆಯಲ್ಲಿ ಪೋಷಕರು ಕಾಯುತ್ತಿದ್ದಾರೆ.