ಚಾಮರಾಜನಗರ: ದ್ವಿಚಕ್ರ ವಾಹನದಲ್ಲಿ ಒಣ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಅಬ್ಕಾರಿ ಅಧಿಕಾರಿಗಳು 2, ಲಕ್ಷ 34 ಲಕ್ಷ ಮೌಲ್ಯದ 6 ಕೆ.ಜಿ 470 ಗ್ರಾಂ ಒಣ ಗಾಂಜಾವನ್ನು ವಶಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಕೋಳಿಪಾಳ್ಯ ಗ್ರಾಮದಲ್ಲಿ ನಡೆದಿದೆ.
ಕೋಳಿಪಾಳ್ಯದ ನಿವಾಸಿ ಶ್ರೀನಿವಾಸ್ ನಾಯಕ ಮತ್ತು ಪುಣಜನೂರು ಗೇಟ್ ನಿವಾಸಿ ಅಮ್ಜದ್ ಪಾಷಾ ಬಂಧಿತರು. ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ಉಪ ಆಯುಕ್ತ ಕೆ.ಎಸ್. ಮುರಳಿ ಹಾಗೂ ಉಪ ಅಧೀಕ್ಷಕ ಪಿ.ರಮೇಶ್ ರವರ ಮಾರ್ಗದರ್ಶನದಲ್ಲಿ ಅಬ್ಕಾರಿ ಇನ್ಸ್ ಪೆಕ್ಟರ್ ಮೀನಾ ಮತ್ತು ಸಿಬ್ಬಂದಿ ಎಂ. ಮಂಜುನಾಥ್, ಆರ್. ರಾಜೇಶ್, ಜೆ,.ಬಿ. ರವಿ,ಮಹೇಂದ್ರ ನಾಗೇಶ್ ಹಾಗೂ ಸೋಮಣ್ಣ ಅವರಿದ್ದ ತಂಡ ದಾಳಿ ನಡೆಸಿ ಕೋಳಿಪಾಳ್ಯ ಹೊರವಲಯದ ಟೈಲರ್ ಅಂಗಡಿ ಬಳಿ ಆರೋಪಿಗಳಾದ ಶ್ರೀನಿವಾಸ್ ನಾಯಕ ಮತ್ತು ಅಮ್ಜದ್ ಪಾಷಾನನ್ನು ವಶಕ್ಕೆ ಪಡೆದುಕೊಂಡು ಅವರ ಬಳಿ ಇದ್ದ ಸುಮಾರು 2, ಲಕ್ಷ 34 ಸಾವಿರ 100 ರೂಪಾಯಿಗಳ ಮೌಲ್ಯದ 6 ಕೆಜಿ 470 ಗ್ರಾಂ ಒಣ ಗಾಂಜವನ್ನು ವಶ ಪಡಿಸಿಕೊಂಡು, ಆರೋಪಿಗಳನ್ನು ಅಬ್ಕಾರಿ ಕಾಯ್ದೆಯಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಬಂಧಿತರ ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.