
ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದ ಐವರು ಆರೋಪಿಗಳನ್ನು ಸೋಮವಾರ ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರ್ ನಡೆಸಲಾಯಿತು

ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ನಿರ್ಜನ ಪ್ರದೇಶಕ್ಕೆ ಡಿಸಿಪಿ ಪ್ರದೀಪ್ ಗುಂಡಿ ನೇತೃತ್ವದಲ್ಲಿ ಆರೋಪಿಗಳನ್ನು ಸ್ಥಳಕ್ಕೆ ಕರೆತಂದು ಪರಿಶೀಲನೆ ನಡೆಸಲಾಯಿತು.
ಮೊದಲು ಪಾರ್ಟಿ ಸ್ಥಳವನ್ನು ಪರಿಶೀಲನೆ ಮಾಡಿದರು. ಬಳಿಕ ಯುವಕ, ಯುವತಿ ಎಲ್ಲಿದ್ದರು? ಎಲ್ಲಿ ವಿದ್ಯಾರ್ಥಿನಿ ಮೇಲೆ ಅತಿಕ್ರಮಣ ನಡೆಸಲಾಯಿತು? ಎಂಬಿತ್ಯಾದಿ ಪ್ರಮುಖ ಮಾಹಿತಿಗಳನ್ನು ಆರೋಪಿಗಳಿಂದ ಪಡೆದರು.
ಕದ್ದ ಮೊಬೈಲ್‌ನಿಂದಲೇ ಪತ್ತೆ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳು, ಎರಡು ವರ್ಷದ ಹಿಂದೆ ಕದ್ದ ಮೊಬೈಲ್‌ನಿಂದ ಸಿಕ್ಕಿ ಬಿದ್ದಿzರೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಮೊಬೈಲ್ ಕಸಿದುಕೊಂಡು ಹೋಗಿದ್ದರು ಎಂದು ಎರಡು ವರ್ಷದ ಹಿಂದೆ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ಮಾಡಿಸಿದ್ದರು. ಅತ್ಯಾಚಾರ ಎಸಗಿದ್ದ ಆರೋಪಿಯೊಬ್ಬ ಮಹಿಳೆಯ ಮೊಬೈಲ್ ಬಳಸಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳು ಮೂರ್‍ನಾಲ್ಕು ವರ್ಷಗಳಿಂದ ಮೈಸೂರಿಗೆ ಬರುತ್ತಿದ್ದರು. ಜಿಯಲ್ಲಿ ೨೦ಕ್ಕೂ ಹೆಚ್ಚು ದರೋಡೆ, ಲೈಂಗಿಕ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ೧೦ಕ್ಕೂ ಹೆಚ್ಚು ಶ್ರೀಗಂಧದ ಮರ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಭಗ್ನ ಪ್ರೇಮಿ: ಮೈಸೂರು ಪೊಲೀಸರು ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸುವ ವೇಳೆ ಒಬ್ಬ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಆರೋಪಿಗಳ ಪೈಕಿ ಒಬ್ಬ ಭಗ್ನ ಪ್ರೇಮಿಯಾಗಿದ್ದ. ಮೂವರು ಯುವತಿಯರು ಆರೋಪಿಯನ್ನು ಪ್ರೀತಿಸಿ ಕೈಕೊಟ್ಟಿದ್ದಿರಂತೆ. ಮೂವರು ಯುವತಿಯರು ಕೈಕೊಟ್ಟ ಬಳಿಕ ವಿಕೃತನಾಗಿದ್ದ. ಅವಕಾಶ ಸಿಕ್ಕಾಗಲೆಲ್ಲ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಆ.24ರಂದು ಬೆಟ್ಟದ ತಪ್ಪಲಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ದುಷ್ಕೃತ್ಯಕ್ಕೆ ರಾಷ್ಟ್ರವ್ಯಾಪಿ ಖಂಡನೆ ವ್ಯಕ್ತವಾಗಿತ್ತು. ಪೊಲೀಸರಿಗೆ ಆರೋಪಿಗಳ ಪತ್ತೆ ಸವಾಲಾಗಿತ್ತು. ಘಟನೆ ನಡೆದು 5 ದಿನಗಳ ನಂತರ ತಮಿಳುನಾಡಿನಲ್ಲಿ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಘಟನೆ ನಡೆದು 6 ದಿನವಾದರೂ ಸಂತ್ರಸ್ತೆ ಮಾನಸಿಕವಾಗಿ ಜರ್ಜರಿತವಾಗಿದ್ದಾರೆ. ಸಂತ್ರಸ್ತೆ ಯಾರ ಜತೆಯೂ ಮಾತನಾಡದೆ ಸದಾ ಮೌನವಾಗಿದ್ದಾರೆ. ಆಘಾತದಿಂದ ವಿದ್ಯಾರ್ಥಿನಿ ಬದಲಾಗಿದ್ದಾರೆ. ಜತೆಗೆ ಸಂತ್ರಸ್ತೆ ಸ್ನೇಹಿತನ ಪರಿಸ್ಥಿತಿ ಕೂಡ ಇದೇ ಆಗಿದೆ.
ಮಂಪರು ಪರೀಕ್ಷೆ ಸಾಧ್ಯತೆ

ಸಾಮೂಹಿಕ ಅತ್ಯಾಚಾರಿ ಆರೋಪಿಗಳು ಹಿಂದೆಯೂ ಕೆಲ ಅತ್ಯಾಚಾರ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಮಂಪರು ಪರೀಕ್ಷೆಗೆ ಒಳಪಡಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ಮೈಸೂರಿನಲ್ಲಿ ನಡೆದ ಅಪರಾಧ ಕೃತ್ಯಗಳ ಬಗ್ಗೆ ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕಿತ್ತು. ನಿವೃತ್ತರ ಸ್ವರ್ಗವಾಗಿರುವ ಮೈಸೂರಿಗೆ ಬಂಧಿತರು ಬಂದು ಹೋಗುತ್ತಿದ್ದರು ಎಂಬುದು ಸಾಮಾನ್ಯ ವಿಚಾರವಲ್ಲ. ಪೊಲೀಸರು ಎಚ್ಚರಿಕೆ ವಹಿಸಿದ್ದರೆ ಇಂತಹ ಕೃತ್ಯ ತಡೆಯಬಹುದಾಗಿತ್ತು.

-ಎಸ್.ಎ.ರಾಮದಾಸ್, ಶಾಸಕ