ಮನೆಯಲ್ಲಿ ಗ್ಯಾಸ್ ಸ್ಫೋಟ, ಹೊತ್ತಿ ಉರಿದ ಮನೆ, ಒಬ್ಬರ ಸ್ಥಿತಿ ಗಂಭೀರ

ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೊನಗನಹಳ್ಳಿಯಲ್ಲಿ ಮನೆಯೊಂದರಲ್ಲಿ ಗ್ಯಾಸ್ ಸ್ಫೋಟ ಸಂಭವಿಸಿದ್ದು, ಮನೆ ಹೊತ್ತಿ ಉರಿದಿದೆ. ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ.

ಗ್ಯಾಸ್ ಸೋರಿಕೆಯಾಗಿ ಮನೆ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ. ಗ್ರಾಮದ ಶಿವಣ್ಣ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮನೆಯಲ್ಲಿದ್ದ 1 ಲಕ್ಷ ನಗದು ಸೇರಿ ಚಿನ್ನಾಭರಣ ಹಾಗೂ ಎಲೆಕ್ಟ್ರಾನಿಕ್ ಪಾದಾರ್ಥಗಳು ನಾಶವಾಗಿವೆ. ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.