ಸರ್ಕಾರಿ ಶಾಲೆ ಉಳಿಸಿ ಸೈಕಲ್ ಜಾಥಾ: ಸ್ವಾಗತ

ವರದಿ: ಬಸವರಾಜು ಗುಂಡ್ಲಪೇಟೆ

ಗುಂಡ್ಲುಪೇಟೆ: ಸರ್ಕಾರಿ ಶಾಲೆ ಉಳಿಸಲು ರಾಜ್ಯಾದ್ಯಂತ ಸೈಕಲ್ ಜಾಥಾ ನಡೆಸುತ್ತಿರುವ ಜಯ ಕರ್ನಾಟಕ ಸಂಘಟನೆಯ ತುಮಕೂರಿನ ರಾಹುಲ್ ಹಾಗೂ ಕೇರಳದ ಅರುಪ್ ಪಿ.ರಾಜು ಅವರಿಗೆ ಜಯ ಕರ್ನಾಟಕ ಸಂಘಟನೆ ಹಾಗೂ ಅಂಬೇಡ್ಕರ್ ಸೇನೆ ಪದಾಧಿಕಾರಿಗಳು ಗುಂಡ್ಲುಪೇಟೆ ಪಟ್ಟಣದಲ್ಲಿ ಆತ್ಮೀಯವಾಗಿ ಸ್ವಾಗತ ಕೋರಿದರು.

ತುಮಕೂರಿನ ರಾಹುಲ್ ಹಾಗೂ ಕೇರಳದ ಅರುಪ್ ಪಿ.ರಾಜು ಸುಮಾರು 6000 ಕಿ ಮೀ ಗಳ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ಈಗಾಗಲೇ 6 ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸರ್ಕಾರಿ ಶಾಲೆ ಉಳಿಸುವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ಗೌರವಾಧ್ಯಕ್ಷ ಗೋವಿಂದನಾಯಕ್ ಮಾತನಾಡಿ, ಶಿಕ್ಷಣ ಪ್ರತಿಯೊಂದು ಮಗುವಿನ ಜನ್ಮಸಿದ್ದ ಹಕ್ಕಾಗದ್ದು, ಅದು ಇಂದು ವ್ಯಾಪಾರವಾಗಿ ಬದಲಾಗಿದೆ. ಬಡವರ ಕೈಗೆಟಕದ ರೀತಿಯಲ್ಲಾಗಿದೆ. ಇದರ ಜೊತೆಗೆ ಸರ್ಕಾರಿ ಶಾಲೆಗಳು ಹಲವೆಡೆ ಮುಚ್ಚುತ್ತಿರುವುದು ಆತಂಕಕ್ಕಾಗಿ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ರಾಹುಲ್ ಹಾಗೂ ಅರುಣ್ ಸರ್ಕಾರಿ ಶಾಲೆಗಳನ್ನು ಉಳಿಸುವುದಕ್ಕೆ ಅಭಿಯಾನ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಮಾಡ್ರಹಳ್ಳಿ ಮಹೇಶ್, ಗೌರವಾಧ್ಯಕ್ಷ ಕ್ರೇಜಿ ನಾಗರಾಜ್, ಮಲ್ಲೇಶ್, ಸಾದಿಕ್ ಪಾಷ, ಚಂದ್ರು, ಲೋಕೇಶ್, ಅಂಬೇಡ್ಕರ್ ಸೇನೆಯ ತಾಲೂಕು ಅಧ್ಯಕ್ಷರಾದ ದೀಪಕ್, ಯಶ್ವಂತ್, ಯುವ ಕಾಂಗ್ರೆಸ್ ಘಟಕದ ಜಿಲ್ಲಾ ಕಾರ್ಯದರ್ಶಿ ಸಾಹುಲ್ ಸೇರಿದಂತೆ ಇತರರು ಇದ್ದರು. ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸರ್ಕಾರಿ ಶಾಲೆ ಉಳಿಸಲು ರಾಜ್ಯಾದ್ಯಂತ ಸೈಕಲ್ ಜಾಥಾ ನಡೆಸುತ್ತಿರುವ ತುಮಕೂರಿನ ರಾಹುಲ್ ಹಾಗೂ ಕೇರಳದ ಅರುಪ್ ಪಿ.ರಾಜು ಅವರಿಗೆ ಸ್ವಾಗತ ಕೋರಲಾಯಿತು.