ಕೆ.ಆರ್‌.ನಗರ ಕ್ಷೇತ್ರವನ್ನು ನಾನು ಯಾವುದೇ ಕಾರಣಕ್ಕೂ ಯಾರಿಗೂ ಬಿಟ್ಟುಕೊಡಲ್ಲ: ರವಿಶಂಕರ್‌ ಪೋನ್ ಸಂಭಾಷಣೆ ವೈರಲ್

 ಶಾಸಕ ಜಿ.ಟಿ.ದೇವೇಗೌಡರ ಕೊಟ್ಟರೆ ಕಾಂಗ್ರೆಸ್‌ ಸೇರುತ್ತೇನೆಂಬದು ಹಲವು ಕಾಂಗ್ರೆಸ್‌ ನಾಯಕರ ಕೋಪಕ್ಕೆ ಗುರಿಯಾಗಿದೆ. ಮುಂಬರುವ ಚುನಾವಣೆಗೆ ಆ ಕ್ಷೇತ್ರಗಳಲ್ಲಿ ಟಿಕೆಟ್‌ ಪಡೆಯುವುದಕ್ಕೆ ಕಸರತ್ತು ನಡೆಸಲು ಕಾಂಗ್ರೆಸ್‌ ಮುಖಂಡರು ಈಗಾಗಲೇ ತಯಾರಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಜಿ.ಟಿ.ದೇವೇಗೌಡರ ಷರತ್ತು ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಆರ್.ನಗರ ಕಾಂಗ್ರೆಸ್‌ ಮುಖಂಡ ರವಿಶಂಕರ್‌ ಅವರ ಪೋನ್  ಸಂಭಾಷಣೆಯು ಈಗ ಎಲ್ಲೆಡೆ ವೈರಲ್‌ ಆಗಿದೆ.

ಪೋನ್ ನಲ್ಲಿ  ರವಿಶಂಕರ್ರವರ  ಮಾತುಕತೆಯ  ವಿವರ ಹೀಗಿದೆ…

ನನಗಿರುವುದು ಈ ಕ್ಷೇತ್ರದಲ್ಲಿ ಇರುವುದು ಒಂದೇ ಕನಸು ಮುಂದಿನ ಬಾರಿ ಎಂಎಲ್‌ಎ ಆಗಬೇಕು. ನಾನು ಹದಿನೈದು  ವರ್ಷದಿಂದ  ನನ್ನ  ಜೀವನವನ್ನುಕ್ಷೇತ್ರದ  ರಾಜಕೀಯಕ್ಕಾಗಿ ತ್ಯಾಗ ಮಾಡಿದ್ದೇನೆ. ನನಗಿರುವುದು ಒಂದೇ ಕನಸು ಈ ಕ್ಷೇತ್ರದಲ್ಲಿ ಎಂಎಲ್‌ಎ ಆಗಬೇಕು, ಆಗೇ ಆಗುತ್ತೇನೆ

ರಾಜಕೀಯದಲ್ಲಿ ನಾನು ಮುಂದುವರಿಯಬೇಕು ಎಂಬುದು ನಮ್ಮ ತಂದೆಯವರ ಕನಸು. ಜಿಲ್ಲಾ ಪಂಚಾಯಿತಿ ಸದಸ್ಯನಾದ ನಂತರ ರಾಜಕೀಯ ಸಾಕು ಎಂದುಕೊಂಡಿದ್ದೆ. ಆದರೆ, ನೀನು ರಾಜಕೀಯದಲ್ಲಿ ಇರಬೇಕು ಎಂದು ನಮ್ಮ ತಂದೆ ಹೇಳಿದರು. ಮತದಾರರೂ ಪ್ರಾಮಾಣಿಕವಾಗಿದ್ದು, ನನ್ನ ಪರವಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ನಾನು ಎಂಎಲ್‌ಎ ಸರಿಸಮಾನವಾಗಿ ವೋಟು ತೆಗೆದುಕೊಂಡಿದ್ದೇನೆ. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಕೂಗಿತ್ತು, ಎಚ್‌.ಡಿ.ಕುಮಾರಸ್ವಾಮಿ ಪರ್ವ ಇತ್ತು. ಅವರನ್ನೇ ಸಿಎಂ ಮಾಡಬೇಕೆಂಬ ಹಠ ಇತ್ತು. ದಲಿತ ಮುಖ್ಯಮಂತ್ರಿ ಮಾಡಿಲ್ಲ ಎಂಬ ಕೂಗು, ಮುಂದಿನ 2023ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆʼ ಎಂದು ಆಡಿಯೊ ಸಂಭಾಷಣೆಯಲ್ಲಿ ಮಾತನಾಡಿದ್ದಾರೆ.

Leave a Reply

Your email address will not be published. Required fields are marked *