ವಿಧಾನಸಭಾ ಸದಸ್ಯರಾದ ಬಸವರಾಜ ಬೊಮ್ಮಾಯಿ ಇವರ ವ್ಯಕ್ತಿ ಪರಿಚಯ.

ಬಸವರಾಜ ಬೊಮ್ಮಾಯಿ ಜನನ ಆಗಿದ್ದು 28-01-1960 ರಲ್ಲಿ ಇವರ ಜನ್ಮಸ್ಥಳ ಹುಬ್ಬಳ್ಳಿ, ಇವರ ತಂದೆ ಎಸ್.ಆರ್.ಬೊಮ್ಮಾಯಿ (ರಾಜ್ಯದ ಮಾಜಿ ಮುಖ್ಯಮಂತ್ರಿ / ಕೇಂದ್ರದ ಮಾಜಿ ಸಚಿವ / ಅಧ್ಯಕ್ಷರು, ರಾಷ್ಟ್ರೀಯ ಜನತಾ ದಳ) ತಾಯಿ ಗಂಗಮ್ಮ ಎಸ್. ಬೊಮ್ಮಾಯಿ. ಇವರ ಧರ್ಮಪತ್ನಿ ಚನ್ನಮ್ಮಾ ಬಿ. ಬೊಮ್ಮಾಯಿ, ಮಕ್ಕಳು ಪುತ್ರ ಭರತ, ಪುತ್ರಿ ಆದಿತಿ

ಇವರ ಪ್ರಾಥಮಿಕ ವಿದ್ಯಾಭ್ಯಾಸ :ರೋಟರಿ ಇಂಗ್ಲೀಷ ಮಾದ್ಯಮ ಶಾಲೆ, ದೇಶಪಾಂಡೆ ನಗರ, ಹುಬ್ಬಳ್ಳಿ. ನಗರದಲ್ಲಿ

ಮಾಧ್ಯಮಿಕ ವಿದ್ಯಾಭ್ಯಾಸವನ್ನು ರೋಟರಿ ಇಂಗ್ಲೀಷ ಮಾದ್ಯಮ ದೇಶಪಾಂಡೆ ನಗರ, ಹುಬ್ಬಳ್ಳಿಯ ಶಾಲೆಯಲ್ಲಿ ಮಾಡಿದರು

ನಂತರ ಪಿ.ಯು.ಸಿಯನ್ನು ಪಿ.ಸಿ.ಜಾಬಿನ ವಿಜ್ಞಾನ ಮಹಾವಿದ್ಯಾಲಯ, ಹುಬ್ಬಳ್ಳಿ. ಇಲ್ಲಿ ಮುಗಿಸಿದರು

ಇಂಜನೀಯರಿಂಗ್ ವಿದ್ಯಾಭ್ಯಾಸ (ಮೆಕ್ಯಾನಿಕಲ್) ಬಿ.ವ್ಹಿ.ಭೂಮರಡ್ಡಿ ತಾಂತ್ರಿಕ ಮಹಾವಿದ್ಯಾಲಯ, ಹುಬ್ಬಳ್ಳಿ.

ಇವರ ಮೊದಲು ಪ್ರಾರಂಭದ ಉದ್ಯೋಗ ಕೈಗಾರಿಕಾ ಉದ್ಯಮಿಯಾಗಿ ಹಾಗೂ 1983 ರಿಂದ 1985 ರವರೆಗೆ ಪುಣೆ ಟೆಲ್ಕೋ ಕಂಪನಿಯಲ್ಲಿ ಎರಡು ವರ್ಷಗಳ ತಾಂತ್ರಿಕ ತರಬೇತಿಯನ್ನು ಮಾಡಿದರು

ಇವರು ಉದ್ಯೋಗ ಸ್ಥಾಪನೆಯನ್ನು ಹುಬ್ಬಳ್ಳಿ ಹಾಗೂ ಬೆಂಗಳೂರು ಪ್ರಾರಂಭ ಮಾಡಿದರು. ಸಾಮಾಜಿಕ ಹಾಗೂ ರಾಜಕೀಯ ಸೇವೆಯನ್ನು ಕಾಲೇಜ್ ವಿದ್ಯಾಭ್ಯಾಸ ದಿನದಿಂದಲೇ ಸಾಮಾಜಿಕ ಹಾಗೂ ರಾಜಕೀಯ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹಾಗೂ ಸಂಘಟನೆಗಳಿಗೆ ಸತತ ಪ್ರಯತ್ನ ಮಾಡುತ್ತಿದ್ದರು.

2007 ರಲ್ಲಿ ಜುಲೈನಲ್ಲಿ ಧಾರವಾಡದಿಂದ ನರಗುಂದವರೆಗೆ 232 ಕಿ.ಮೀ 21 ದಿನಗಳ ಬೃಹತ್ ರೈತರೊಂದಿಗೆ ಪಾದಯಾತ್ರೆಯನ್ನು ನಡೆಸಿದರು. ನಂತರ 1993 ರಲ್ಲಿ ಹುಬ್ಬಳ್ಳಿ ನಗರದಲ್ಲಿ ನಡೆದ ರಾಜ್ಯ ಯುವಜನತಾ ದಳದ ಐತಿಹಾಸಿಕ ಬೃಹತ್ ರ್ಯಾಲಿಯ ಸಂಘಟನೆಯ ನೇತೃತ್ವ ಇವರ ಮುಂದಳತ್ವದಲ್ಲಿ ನಡೆಯಿತು.

ಇವರು 1995 ರಲ್ಲಿ ಹುಬ್ಬಳ್ಳಿ ನಗರದ ಈದಗಾ ಮೈದಾನದ ಸಮಸ್ಯೆಯ ಶಾಸ್ವತ ಪರಿಹಾರಕ್ಕೆ ರಾಜ್ಯ ಸರ್ಕಾರದ ಮೂಲಕ ಪ್ರಯತ್ನ ಇವರ ಮೂಲಕ ನೇರವೆರಿತು. ಇವರು À 1995 ರಲ್ಲಿ ರಾಜ್ಯದ ಜನತಾದಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ.

ರಾಜಕೀಯ ಸ್ಥಾನಮಾನ
ಇವರು 1996 ರಿಂದ 1997 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಇವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು ನಂತರ 31-12-1997 ಹಾಗೂ 04-12-2003 ರಲ್ಲಿ ರಾಜ್ಯ ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ (ಧಾರವಾಡ-ಹಾವೇರಿ-ಗದಗ) ನಡೆದ ಚುನಾವಣೆಯಲ್ಲಿ ಸತತ ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದರು
22-05-2008 ರಂದು ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವ ವಿಧಾನಸಭೆ ಮತಕ್ಷೇತ್ರದಿಂದ ಆಯ್ಕೆಯಾಗಿದ್ದರು

ಹಿಂದಿನ ಬಿ.ಜೆ.ಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ / ಡಿ.ವ್ಹಿ.ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ಇವರ ಸಚಿವ ಸಂಪುಟದಲ್ಲಿ ಸತತ ಐದು ವರ್ಷಗಳವರೆಗೆ ಜಲ ಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ನಂತರ 05-05-2013 ರಂದು ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವ ವಿಧಾನಸಭಾ ಮತಕ್ಷೇತ್ರದಿಂದ ದ್ವಿತೀಯ ಭಾರಿಗೆ ಆಯ್ಕೆಯಾದರು. 12-05-2018 ರಂದು ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವ ವಿಧಾನಸಭಾ ಮತಕ್ಷೇತ್ರದಿಂದ ತೃತೀಯ ಭಾರಿಗೆ ಆಯ್ಕೆಯಾಗಿ ಬಿ.ಎಸ್.ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸದರು.
ನಾಳೆ ಕರ್ನಾಟಕದ 23 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ಚೀಕಾರ

Leave a Reply

Your email address will not be published. Required fields are marked *